Karnataka CM: ಸಿದ್ದರಾಮಯ್ಯ & ಡಿಕೆಶಿಗೆ ಶುಭಕೋರುವ ಪೋಸ್ಟರ್ ಹರಿದ ಕನ್ನಡ ಪರ ಸಂಘಟನೆ!

Siddaramaiah Swearing Ceremony: ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾಮಾಡಲು ಎಲ್ಲಾ ರೀತಿಯಿಂದಲೂ ಕಂಠೀರವ ಕ್ರೀಡಾಂಗಣವು ಅದ್ದೂರಿ‌ ವೇದಿಕೆ  ಸಜ್ಜಾಗಿದೆ. ಕನ್ನಡ ಪರ ಸಂಘಟನೆಗಳು ಪೋಸ್ಟರ್ ಗಳಿಗೆ ಮಸಿ ಬಳಿದು, ಹರಿದು  ಕಿತ್ತೆಸೆದಿದ ಘಟನೆ ನಗರದ ಹಲವೆಡೆ  ನಡೆದಿದೆ.

Written by - Zee Kannada News Desk | Last Updated : May 20, 2023, 12:18 PM IST
  • ಸಿದ್ದರಾಮಯ್ಯ & ಡಿಕೆಶಿಗೆ ಶುಭಕೋರುವ ಪೋಸ್ಟರ್ ಹರಿದ ಕನ್ನಡ ಪರ ಸಂಘಟನೆ
  • ಯುವ ಕಾಂಗ್ರೆಸ್​ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಪೋಸ್ಟರ್​ಗೆ ಮಸಿ ಬಳಿದ ಕಾರ್ಯಕರ್ತರು
  • ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್​ಗೆ ಮಸಿ ಬಳಿದು ಕಿತ್ತೆಸೆದಿದ್ದಾರೆ.
Karnataka CM: ಸಿದ್ದರಾಮಯ್ಯ & ಡಿಕೆಶಿಗೆ ಶುಭಕೋರುವ ಪೋಸ್ಟರ್ ಹರಿದ ಕನ್ನಡ ಪರ ಸಂಘಟನೆ! title=

ಬೆಂಗಳೂರು: ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾಮಾಡಲು ಎಲ್ಲಾ ರೀತಿಯಿಂದಲೂ ಕಂಠೀರವ ಕ್ರೀಡಾಂಗಣವು ಅದ್ದೂರಿ‌ ವೇದಿಕೆ  ಸಜ್ಜಾಗಿದೆ. ಇನ್ನು ಪ್ರಮಾಣ ವಚನ ಸ್ವೀಕರಿಸುವುದೊಂದೆ ಬಾಕಿ. ಈ ನಿಟ್ಟಿನಲ್ಲಿ ಸಿಲಿಕಾನ್‌ ಸಿಟಿ ನಗರದ ಸುತ್ತೆಲ್ಲಾ ಸಿದ್ದರಾಮಯ್ಯ & ಡಿಕೆಶಿಗೆ ಕಾಂಗ್ರೆಸ್‌ ನಾಯಕರು ಶುಭಕೋರುವ ಪೋಸ್ಟರ್ ಎಲ್ಲಡೆ ಅಳವಡಿಸಲಾಗಿತ್ತು.

ಆದರೆ ಪೋಷ್ಟರ್‌ ನಲ್ಲಿ ಇಂಗ್ಲಿಷ್ ಬಳಸಿ ಶುಭಕೋರಲಾಗಿತ್ತು. ಈ ಹಿನ್ನಲೆ ಕನ್ನಡ ಪರ ಸಂಘಟನೆಗಳು ಪೋಸ್ಟರ್ ಗಳಿಗೆ ಮಸಿ ಬಳಿದು, ಹರಿದು ಕಿತ್ತೆಸೆದಿದ ಘಟನೆ ನಗರದ ಹಲವೆಡೆ ನಡೆದಿದೆ.

ಇದನ್ನೂ ಓದಿ: Karnataka CM: ʼಜೋಡೆತ್ತುʼ ಸರ್ಕಾರಕ್ಕೆ ಶುಭ ಕೋರಿದ ಸಲಗ..! ಛಲ ಬಿಡದ ತ್ರಿವಿಕ್ರಮನಂತೆ ಕೆಲಸ ನಿರ್ವಹಿಸಿ ಎಂದ ವಿಜಿ..

ಫ್ರೀಡಂಪಾರ್ಕ್​ನಲ್ಲಿ​ ಹಾಕಿದ್ದ ಯುವ ಕಾಂಗ್ರೆಸ್​ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಪೋಷ್ಟರ್‌ ಸೇರಿದಂತೆ ಹಲವರು ಶುಭ ಕೋರುವ ಇಂಗ್ಲಿಷ್‌ ಪೋಸ್ಟರ್‌ ಕಿತ್ತಿದ್ದಾರೆ. ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್​ಗೆ ಮಸಿ ಬಳಿದಿರುವುದು ತಿಳಿದು ಬಂದಿದೆ. ಇನ್ನುಳಿದಂತೆ ನಗರದ ಹಲವೆಡೆ ಪ್ರಮಾಣ ವಚನ ಕಾರ್ಯಕ್ರಮ ಜೋರು ನಡೆಯುತ್ತಿದೆ. 

ಇದನ್ನೂ ಓದಿ: ಪ್ರಮಾಣ ವಚನ ಸ್ವೀಕಾರ ದಿನವೇ ನೂತನ ಶಾಸಕ ಪ್ರದೀಪ್‌ ಈಶ್ವರ್‌ ತಾಯಿ ನಿಧನ..!

ಇನ್ನು ಕೆಲವೇ ಹೊತ್ತಿನಲ್ಲಿಪ್ರಮಾಣ ವಚನ ಸ್ವೀಕರಿಸಲಿರುವ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಶುಭ ಕೋರಲು ಸಮಾರಂಭಕ್ಕೆ ಹೊರ ರಾಜ್ಯಗಳಿಂದ ಬರುತ್ತಿರುವ ಮುಖ್ಯಮಂತ್ರಿಗಳ ದಂಡೆ ಹರಿದು ಬಂದಿದೆ. ಸದ್ಯ ಇನ್ನು ಈ ಕಾರ್ಯಕ್ರಮಕ್ಕೆ ಕಂಠೀರವಣ ಕ್ರೀಡಾಂಗಣಸಜ್ಜಾಗಿದ್ದು,  ಜೊತೆಗೆ ಪೊಲೀಸ್ ಎಲ್ಲೆಡೆ ಸರ್ಪಗಾವಲು ಹಾಕಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News