Abhi-Aviva Beegara Oota: ಅಂಬಿ ಪುತ್ರನ ಬೀಗರ ಊಟಕ್ಕೆ ಅದ್ದೂರಿ ಸಿದ್ದತೆ

Abhi-Aviva Beegara Oota: ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಷ್ ಮತ್ತು ನಟಿ ಹಾಗೂ ಮಂಡ್ಯದ ಸಂಸದೆಯೂ ಆಗಿರುವ ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಇತ್ತೀಚೆಗಷ್ಟೇ ಅವಿವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದೀಗ ಅಂಬಿ ಪುತ್ರನ ಬೀಗರ ಊಟಕ್ಕೆ ಕೌಂಟ್ ಡೌನ್ ಶುರುವಾಗಿದೆ. 

Written by - Yashaswini V | Last Updated : Jun 16, 2023, 08:05 AM IST
  • ಮದ್ದೂರಿನ ಗೆಜ್ಜಲಗೆರೆ ಬಳಿ ಬಾಡೂಟದ ಅದ್ದೂರಿ ಬೀಗರ ಔತಣ
  • ಮದ್ದೂರಿನ ಗೆಜ್ಜಲಗೆರೆ ಬಳಿ ಬೀಗರ ಔತಣಕ್ಕಾಗಿ ಸ್ಥಳದಲ್ಲಿ ಸಕಲ ಸಿದ್ದತೆ
  • ಖುದ್ದು ಸ್ಥಳದಲ್ಲಿ ನಿಂತು ಸಿದ್ದತೆ ಪರಿಶೀಲನೆ ಮಾಡ್ತಿರೋ ಮಧುಮಗ ಅಭಿಷೇಕ್
Abhi-Aviva Beegara Oota: ಅಂಬಿ ಪುತ್ರನ ಬೀಗರ ಊಟಕ್ಕೆ ಅದ್ದೂರಿ ಸಿದ್ದತೆ  title=
Abhi-Aviva Beegara Oota

Abhi-Aviva Beegara Oota In Mandya: ಬಾಡೂಟ ಅಂದ್ರೆ ಸಕ್ಕರೆನಾಡು ಮಂಡ್ಯ ಫೇಮಸ್ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಅದು ಬೀಗರೂಟ ಆಗಿರ್ಲಿ ಅಥವಾ ಮಾರಮ್ಮನ ಜಾತ್ರೆನೆ ಆಗಿರ್ಲಿ ಅಲ್ಲಿ ಪಕ್ಕಾ ಬಾಡೂಟ ಸಿದ್ದವಾಗಿ ಬಿಡುತ್ತೆ. ಆದರೆ, ಈ ಬಾರಿ ಮಂಡ್ಯದಲ್ಲಿ ಇದೆಲ್ಲವನ್ನ ಮೀರಿಸುವಂತ ಬಾಡೂಟ ಆಯೋಜನೆ ಆಗಿದೆ. ಇದು ಮಂಡ್ಯ ಇತಿಹಾಸದಲ್ಲೆ ದೊಡ್ಡ ಮಟ್ಟದ ಬಾಡೂಟ ಆಯೋಜನೆ ಅಂತಾ ಜನ ಹೇಳ್ತಿದ್ದಾರೆ. ಇಂತಾ ಬಾಡೋಟದ ಕುರಿತ ಒಂದು ವರದಿ ಇಲ್ಲಿದೆ.

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಷ್ ಮತ್ತು ನಟಿ ಹಾಗೂ ಮಂಡ್ಯದ ಸಂಸದೆಯೂ ಆಗಿರುವ ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಇತ್ತೀಚೆಗಷ್ಟೇ ಅವಿವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದೀಗ ಅಂಬಿ ಪುತ್ರನ ಬೀಗರ ಊಟಕ್ಕೆ ಕೌಂಟ್ ಡೌನ್ ಶುರುವಾಗಿದೆ. ಬೆಳಗ್ಗೆ 11 ಗಂಟೆಗೆ ಬಾಡೂಟಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.  

ಇದನ್ನೂ ಓದಿ- ಚಾಮರಾಜನಗರದ ಗ್ರಾಮಕ್ಕೆ ಆನೆ ಲಗ್ಗೆ- ಬೈಕ್, ಮರ, ಮನೆ ಗೇಟ್ ಧ್ವಂಸ

ಒಂದು ಪಂಕ್ತಿಗೆ 5 ಸಾವಿರ ಮಂದಿ ಏಕಕಾಲಕ್ಕೆ ಭೋಜನ ಸವಿಯಲು ವ್ಯವಸ್ಥೆ: 
ಸಾಲು ಸಾಲಾಗಿ ಜೋಡಿಸುತ್ತಿರುವ ಕುರ್ಚಿ ಟೇಬಲ್ ಗಳು.. ಕಣ್ಣಾಡಿಸಿದ ಕಡೆಯಲ್ಲ ರಾರಾಜಿಸುತ್ತಿರೊ ಅಂಬಿ ಕುಟುಂಬ ಸದಸ್ಯರ ಬ್ಯಾನರ್ ಬಂಟಿಂಗ್ಸ್ ಗಳು.. ಲೋಡ್ ಗಟ್ಟಲೆ ಬಂದು ಇಳಿಯುತ್ತಿರೊ ತರಕಾರಿಗಳು.. ಗುಡ್ಡೆ ಹಾಕಿರೊ ಸೌದೆಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ..  

ಇನ್ನು ಅಂಬರೀಷ್ ಅಂತ ಹೇಳಿದ್ರೆ ಬೋಜನ ಪ್ರಿಯ. ಅದ್ರಲ್ಲೂ ನಾಟಿ  ಶೈಲಿಯ ಬೋಟಿ ಮುದ್ದೆ ಅಂದ್ರೆ ಪಂಚಪ್ರಾಣ.. ಹಾಗಾಗಿ ಮಂಡ್ಯದ ನಾಟಿ ಶೈಲಿಯಲ್ಲಿಯೇ ಎಲ್ಲಾ ಖಾದ್ಯಗಳ ತಯಾರಿ ಮಾಡಲಾಗುತ್ತಿದೆ. ಪರಿಪೂರ್ಣ ಕ್ಯಾಟರಿಂಗ್ ನವರು ಬಾಡೂಟದ ಜವಾಬ್ದಾರಿಯ ಹೊಣೆ ಹೊತ್ತಿದ್ದು. 200 ಜನ ಮುಖ್ಯ ಬಾಣಸಿಗರು ಅವರಿಗೆ 200 ಮಂದಿ ಸಹಾಯಕರು, 350 ಮಂದಿ ಅಡಿಗೆ ಬಡಿಸುವವರು ಇದ್ರೆ 100 ಮಂದಿ ಕ್ಲೀನಿಂಗ್ ಕಾರ್ಯದಲ್ಲಿ ತೊಡಗಿರುತ್ತಾರೆ.

ಇದನ್ನೂ ಓದಿ- ಧಾನ್ಯಗಳ ಹೆಚ್ಚುವರಿ ಖರೀದಿಗೆ ಭಾರತೀಯ ಆಹಾರ ಮಂಡಳಿ ನಿಷೇಧ ಹೇರಿದ್ದು ಏಕೆ ಗೊತ್ತೇ?

ಬಾಡೂಟದ ಮೆನು ಹೀಗಿದೆ:- 
ಇನ್ನು ಬಾಡೂಟದ ಮೆನ್ಯೂ ಏನೆಲ್ಲಾ ಇರುತ್ತೆ ಅಂದ್ರೆ ಮುದ್ದೆ, ಬೋಟಿ ಗೊಜ್ಜು, ಮಟನ್ ಚಾಪ್ಸ್, ಚಿಕನ್ ಕಬಾಬ್, ಮಟನ್ ಪಲಾವ್, ಅನ್ನ ಸಾಂಬಾರ್, ತಿಳಿ ಸಾಂಬಾರ್, ಸಬ್ಬಕ್ಕಿ ಪಾಯಿಸ, ಬಾದುಶಾ, ನಾಟಿ ಕೋಳಿ ಸಾಂಬಾರ್, ಏಸ್ ಕ್ರೀಂ, ಬೀಡಾ, ಬಾಳೆ ಎಲೆ ಊಟದ ಸೌಲಭ್ಯ ಮಾಡಲಾಗಿದೆ.

ಸಸ್ಯಹಾರ ಊಟದ ಮೆನ್ಯೂ:
ಸಸ್ಯಹಾರ ಊಟದ ಮೆನ್ಯೂವಿನಲ್ಲಿ ಪೂರಿ, ಸಾಗು, ವೆಜ್ ಬಿರಿಯಾನಿ, ಅನ್ನ ಸಾಂಬಾರ್, ತಿಳಿ ಸಾಂಬಾರ್, ಸಬ್ಬಕ್ಕಿ ಪಾಯಿಸ, ಬಾದುಶ, ಐಸ್ ಕ್ರೀಂ ಹಾಗೂ ಬೀಡದ ವ್ಯವಸ್ಥೆ ಮಾಡಲಾಗಿದೆ.

ಇನ್ನು ಮಳೆ ಬಂದ್ರೂ ತೊಂದರೆಯಾಗದಂತೆ ಜರ್ಮನ್ ಮಾದರಿ ಟೆಂಟನ್ನ ಅಳವಡಿಸಲಾಗಿದ್ದು ಸೆಖೆಯಾಗದಂತೆ ಫ್ಯಾನ್ ವ್ಯವಸ್ಥೆಯನ್ನ ಸಹ ಮಾಡಲಾಗಿದೆ.  ವಿಶೇಷ ಅಂದ್ರೆ ಎಲ್ಲಾ ಖಾದ್ಯಗಳು ಸೌದೆ ಒಲೆಯಲ್ಲೆ ತಯಾರಾಗುತ್ತಿದೆ. 
 
ಒಟ್ಟಾರೆ ಅಂಬಿ ಪುತ್ರನ ಬೀಗರ ಊಟದ ರುಚಿಯನ್ನ ಸವಿಯಲು ಅಂಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು ಬೆಳಗ್ಗೆ 11 ರಿಂದಲೇ ಬಾಡೂಟದ ಭೋಜನ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News