ಕೋವಿಡ್ ಸಂಕಷ್ಟ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ: ಎಸ್.ಟಿ.ಸೋಮಶೇಖರ್

ಕೋವಿಡ್ ನಂಥ ಸಂಕಷ್ಟದ ಸಮಯದಲ್ಲಿ ನಾನು ಮನೆಯಲ್ಲಿ ಕೂರದೆ ಕ್ಷೇತ್ರ ಸಂಚಾರ ಮಾಡಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ಮನೆಮನೆಗೆ ವ್ಯಾಕ್ಸಿನ್, ಫುಡ್ ಕಿಟ್ ವಿತರಣೆ ಮಾಡಿದ್ದೇನೆ. ಕಷ್ಟದ ಸಮಯದಲ್ಲಿ ಅವರ ಜೊತೆ ನಿಂತಿದ್ದನ್ನು ಕ್ಷೇತ್ರದ ಜನ ಮರೆತಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

Written by - Prashobh Devanahalli | Edited by - Manjunath N | Last Updated : Apr 28, 2023, 06:54 PM IST
  • 200 ಕೋಟಿ ಆಸ್ತಿ ಘೋಷಿಸಿಕೊಂಡವರು ಕೋವಿಡ್ ಸಮಯದಲ್ಲಿ ಒಬ್ಬರಿಗೆ ಒಂದು ಫುಡ್ ಕಿಟ್ ಕೊಡಲಿಲ್ಲ.
  • ಜನರ ಕಷ್ಟ ಕೇಳಲಿಲ್ಲ. ಅವರದ್ದೇ ಪಕ್ಷದ ಕಾರ್ಯಕರ್ತರ ನೋವಿಗೆ ಸ್ಪಂದಿಸಲಿಲ್ಲ.‌
  • ಯಶವಂತಪುರದ ಜನತೆ ಬುದ್ಧಿವಂತರಿದ್ದಾರೆ. ಕಣ್ಣೀರಾಕುವವರಿಗೆ ಮರುಳಾಗುವುದಿಲ್ಲ ಎಂದು ಹೇಳಿದರು.
ಕೋವಿಡ್ ಸಂಕಷ್ಟ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ: ಎಸ್.ಟಿ.ಸೋಮಶೇಖರ್ title=

ಬೆಂಗಳೂರು: ಕೋವಿಡ್ ನಂಥ ಸಂಕಷ್ಟದ ಸಮಯದಲ್ಲಿ ನಾನು ಮನೆಯಲ್ಲಿ ಕೂರದೆ ಕ್ಷೇತ್ರ ಸಂಚಾರ ಮಾಡಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ಮನೆಮನೆಗೆ ವ್ಯಾಕ್ಸಿನ್, ಫುಡ್ ಕಿಟ್ ವಿತರಣೆ ಮಾಡಿದ್ದೇನೆ. ಕಷ್ಟದ ಸಮಯದಲ್ಲಿ ಅವರ ಜೊತೆ ನಿಂತಿದ್ದನ್ನು ಕ್ಷೇತ್ರದ ಜನ ಮರೆತಿಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಮನೆ ಬಾಗಿಲಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುವುದರ ಜೊತೆಗೆ ಸೋಂಕಿಗೆ ತುತ್ತಾದವರ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಮೃತಪಟ್ಟವರ ಕುಟುಂಬದವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಲಾಗಿದೆ. ಆದರೆ ಚುನಾವಣೆ ಕೇವಲ ಮೂರು ತಿಂಗಳಿದೆ ಎನ್ನುವಾಗ ಬಂದಿರುವವರು ಕೋವಿಡ್ ಸಮಯದಲ್ಲಿ ಏನು ಮಾಡಿದರು ಎಂದು ಪ್ರಶ್ನಿಸಿದರು.

 ಇದನ್ನೂ ಓದಿ: ದಲಿತರು, ಹಿಂದುಳಿದವರು ಭಿಕ್ಷುಕರೇ?: ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

200 ಕೋಟಿ ಆಸ್ತಿ ಘೋಷಿಸಿಕೊಂಡವರು ಕೋವಿಡ್ ಸಮಯದಲ್ಲಿ ಒಬ್ಬರಿಗೆ ಒಂದು ಫುಡ್ ಕಿಟ್ ಕೊಡಲಿಲ್ಲ. ಜನರ ಕಷ್ಟ ಕೇಳಲಿಲ್ಲ. ಅವರದ್ದೇ ಪಕ್ಷದ ಕಾರ್ಯಕರ್ತರ  ನೋವಿಗೆ ಸ್ಪಂದಿಸಲಿಲ್ಲ.‌ ಯಶವಂತಪುರದ ಜನತೆ ಬುದ್ಧಿವಂತರಿದ್ದಾರೆ. ಕಣ್ಣೀರಾಕುವವರಿಗೆ ಮರುಳಾಗುವುದಿಲ್ಲ ಎಂದು ಹೇಳಿದರು.

ಜನ ಕಣ್ಣೀರಾಕುತ್ತಿದ್ದಾಗ ಅವರ ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ. ನಾನು ಕಣ್ಣೀರೊರೆಸುವವನು. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಿತ್ಯ ನೂರಾರು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಕಮಲ‌ ಅರಳಲಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಪಕ್ಷ ಸೇರ್ಪಡೆ

ಹೊನ್ನಗನಹಟ್ಟಿ, ಯಲಚಗುಪ್ಪೆ, ಕೆ.ಗೊಲ್ಲಹಳ್ಳಿ, ತರಳು, ಕಗ್ಗಲಿಪುರ ಪಂಚಾಯತಿ ಸೇರಿದಂತೆ ನಾನಾ ಕಡೆಗಳಲ್ಲಿ ಮತಯಾಚಿಸಿದರು. ಮತಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಯಶವಂತಪುರ ಕ್ಷೇತ್ರದಲ್ಲಿ ಪ್ರಧಾನಿ ರೋಡ್ ಶೋ; ಎಸ್.ಟಿ. ಸೋಮಶೇಖರ್ ರವರಿಂದ ಸಿದ್ಧತೆ ಪರಿಶೀಲನೆ

ಏ.29ರ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಶವಂತಪುರ ಕ್ಷೇತ್ರದಲ್ಲಿ ನಡೆಸಲಿರುವ ರೋಡ್ ಶೋ ಸಂಬಂಧ ಸಿದ್ಧತೆ ಪರಿಶೀಲಿಸಿದರು. 

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ನೈಸ್ ಜಂಕ್ಷನ್ ನಿಂದ ಸುಮ್ಮನಹಳ್ಳಿ ಬ್ರಿಡ್ಜ್ ವರೆಗೂ ಒಟ್ಟು ಐದು ಕಿ.ಮೀ. ರೋಡ್ ಶೋ ನಡೆಯಲಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಲ್ಲಿ ಭಾಗವಹಿಸಲು ಯಶವಂತಪುರ ಕ್ಷೇತ್ರದ ಜನತೆ ಬಹಳ ಉತ್ಸುಕರಾಗಿದ್ದಾರೆ ಎಂದರು.

ಇದನ್ನೂ ಓದಿ: Karnataka Election 2023: ಯತ್ನಾಳರ ‘ವಿಷಕನ್ಯೆ’ ಹೇಳಿಕೆಗೆ ಪ್ರಧಾನಿ ಮೋದಿ ಒಪ್ಪಿಗೆ ಇರಬಹುದೇನೋ? ಕಾಂಗ್ರೆಸ್

ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸುಮಾರು 75 ಸಾವಿರಕ್ಕೂ ಅಧಿಕ ಮಂದಿ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ನರೇಂದ್ರ ಮೋದಿ ಅವರು ಯಶವಂತಪುರ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ಮತ್ತಷ್ಟು ರಂಗೇರಲಿದೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3Lw

 

Trending News