Karnataka Election Results 2023: ಟ್ರೆಂಡ್ ಗಳಲ್ಲಿ ಭಾರಿ ಮುನ್ನಡೆಯ ಬಳಿಕ ಫುಲ್ ಜೋಶ್ ನಲ್ಲಿ ಕಾಂಗ್ರೆಸ್, ನಾಳೆ ಶಾಸಕಾಂಗ ಪಕ್ಷದ ಸಭೆ!

Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆಯ ಟ್ರೆಂಡ್ ಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ ಬಳಿಕ ಕಾಂಗ್ರೆಸ್ ಪಕ್ಷ ಫುಲ್ ಸ್ವಿಂಗ್ ನಲ್ಲಿದೆ. ಪಕ್ಷ ನಾಳೆ ಅಂದರೆ ಭಾನುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ.   

Written by - Nitin Tabib | Last Updated : May 13, 2023, 01:32 PM IST
  • ಮಧ್ಯಾಹ್ನ 12 ಗಂಟೆರವರೆಗಿನ ಟ್ರೆಂಡ್ ಪ್ರಕಾರ ಕಾಂಗ್ರೆಸ್ 121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
  • ಅದೇನೆಂದರೆ, ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣುತ್ತಿದ್ದು,
  • ದೊಡ್ಡ ಮಟ್ಟದ ಏರುಪೇರು ಆಗದಿದ್ದರೆ ಸಂಖ್ಯಾಬಲದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇಲ್ಲ.
Karnataka Election Results 2023: ಟ್ರೆಂಡ್ ಗಳಲ್ಲಿ ಭಾರಿ ಮುನ್ನಡೆಯ ಬಳಿಕ ಫುಲ್ ಜೋಶ್ ನಲ್ಲಿ ಕಾಂಗ್ರೆಸ್, ನಾಳೆ ಶಾಸಕಾಂಗ ಪಕ್ಷದ ಸಭೆ! title=
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

Karnataka Vidhan Sabha Election Results 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಇತ್ತೀಚಿಗೆ ಬಂದ ಟ್ರೆಂಡ್ ಗಳಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಯತ್ತ ದಾಪುಗಾಲು ಇಡುತ್ತಿದೆ.  ಪಕ್ಷಕ್ಕೆ ಸಾಕಷ್ಟು ಸಂಖ್ಯಾಬಲ ಬಂದರೆ ನಾಳೆ ಅಂದರೆ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ಶಾಸಕರು ರಾಜಧಾನಿ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದೇ ಅವಕಾಶ ಕೈ ತಪ್ಪಲು ಬಯಸುವುದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಲ್ಲಿ ಹಾಜರಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕಾಂಗ್ರೆಸ್ ನ ಪ್ಲಾನ್ ಬಿ
ಸ್ವಂತವಾಗಿ ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಪ್ಲಾನ್ ಬಿ ಸಿದ್ಧಪಡಿಸಿದೆ. ಮೂಲಗಳ ಪ್ರಕಾರ, ಶಾಸಕರನ್ನು ಯಾರೂ ಒಡೆಯಬಾರದು ಎಂದು ಕಾಂಗ್ರೆಸ್ ಹೈದರಾಬಾದ್‌ನಲ್ಲಿ ರೆಸಾರ್ಟ್ ಬುಕ್ ಮಾಡಿದೆ. ಬಹುಮತಕ್ಕಿಂತ ಕಡಿಮೆಯಾದರೆ ಎಲ್ಲ ಶಾಸಕರನ್ನು ಈ ರೆಸಾರ್ಟ್‌ನಲ್ಲಿ ಇರಿಸಲಾಗುವುದು ಎನ್ನಲಾಗುತ್ತಿದೆ.

ಟ್ರೆಂಡ್‌ಗಳಲ್ಲಿ ಕಾಂಗ್ರೆಸ್‌ಗೆ ಬಹುಮತ
ಮಧ್ಯಾಹ್ನ   12 ಗಂಟೆರವರೆಗಿನ ಟ್ರೆಂಡ್ ಪ್ರಕಾರ ಕಾಂಗ್ರೆಸ್ 121  ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇನೆಂದರೆ, ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣುತ್ತಿದ್ದು, ದೊಡ್ಡ ಮಟ್ಟದ ಏರುಪೇರು ಆಗದಿದ್ದರೆ ಸಂಖ್ಯಾಬಲದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇಲ್ಲ.

ಇದನ್ನೂ ಓದಿ-Karnataka Elections 2023 Results: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ ಸ್ಥಳಗಳಲ್ಲಿ ಹೇಗಿದೆ ಕಾಂಗ್ರೆಸ್ ಸ್ಥಿತಿ?

ಆಡಳಿತಾರೂಢ ಬಿಜೆಪಿ 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದು ಬಹುಮತಕ್ಕೆ ತೀರಾ ಕಡಿಮೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿರುವ ಜೆಡಿಎಸ್ 21 ಸ್ಥಾನಗಳಲ್ಲಿ ಮುಂದಿದೆ. ಇತರರು 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ-Karnataka Election Results 2023: 'ಕರ್ನಾಟಕದಲ್ಲಿ ಇಂದು ನಡೆದಿದ್ದು 2024 ರಲ್ಲಿಯೂ ಪುನರಾವರ್ತನೆಯಾಗಲಿದೆ', ಇದು ಮೋದಿ-ಶಾ ಸೋಲು ಎಂದ ಸಂಜಯ್ ರಾವುತ್

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 209 ಸ್ಥಾನಗಳ ಟ್ರೆಂಡ್‌ಗಳು ಬಂದಿವೆ. ಈ ನಿಟ್ಟಿನಲ್ಲಿಯೂ ಕಾಂಗ್ರೆಸ್ ಮುನ್ನಡೆಯುತ್ತಿದೆ. ಕಾಂಗ್ರೆಸ್ 111 ಸ್ಥಾನಗಳಲ್ಲಿ ಮುಂದಿದೆ. ಅದೇ ಸಮಯದಲ್ಲಿ ಬಿಜೆಪಿ 71, ಜೆಡಿಎಸ್ 23 ಮತ್ತು ಇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News