Karnataka Assembly Elections: ರಾಜ್ಯದಲ್ಲಿ ಪ್ರಧಾನಿ ಮೋದಿ ಟೂರ್ ಡೀಲ್ ನಡೆಯುತ್ತಿದ್ದು, ಏರ್ ಪೋರ್ಟ್ ಬಳಿಯ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು ಮಾಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಹೆಸರಿನಲ್ಲಿ ಕೋಟ್ಯಂತರ ಡೀಲ್ ನಡೆಸುತ್ತಿದ್ದು, ಮೋದಿ ಟೂರ್ ಡೀಲ್ ಮಾಡಿಸುತ್ತಿದ್ದಾರೆ. ಏರ್ ಪೋರ್ಟ್ ಬಳಿ ನಿರ್ಮಾಣವಾದ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು ಮಾಡಿದ್ದಾರೆ. ಕರ್ನಾಟಕಕ್ಕೆ ಪಿಎಂ ಮೋದಿ 7 ಬಾರಿ ಬಂದಿದ್ದಾರೆ. ಮೋದಿ ಟೂರ್ ಡೀಲ್ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರವಾಸದ ಹೆಸರಿನಲ್ಲಿ 40% ಅಲ್ಲ ಬದಲಾಗಿ 200% ಡೀಲ್ ನಡೆಯುತ್ತಿದೆ. ಪ್ರಧಾನಿ ಹೆಸರನ್ನು ಇಟ್ಟುಕೊಂಡು ಬಿಜೆಪಿ ಡೀಲ್ ಮಾಡುತ್ತಿದೆ. ನವೆಂಬರ್ ನಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದರು. ಕೆಂಪೇಗೌಡರ ಮೇಲೆ ಗೌರವ ಇಟ್ಟು ಮಾಡಿದ್ದಾರೆ ಅಂದುಕೊಂಡಿದ್ದೆವು. ಆದರೆ ಕೆಂಪೇಗೌಡರ ಹೆಸರಿನಲ್ಲಿ ಡೀಲ್ ಮಾಡುತ್ತಿದ್ದಾರೆ. ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ಬಿಲ್ ಮಾಡಿದ್ದಾರೆ. ಏರ್ ಪೋರ್ಟ್ ರಸ್ತೆಗೆ 8.36 ಕೋಟಿ ಖರ್ಚು ಮಾಡಿದ್ದಾರೆ. ಆದರೆ ಅಲ್ಲಿ ರಸ್ತೆ ಏರ್ ಪೋರ್ಟ್ ಅಥಾರಿಟಿ ವ್ಯಾಪ್ತಿಗೆ ಬರುತ್ತದೆ. ಪಿಎಂ ಆ ರಸ್ತೆಯಲ್ಲಿ ಓಡಾಟ ನಡೆಸಿಲ್ಲ. ಹಾಗಾದರೆ ರಸ್ತೆ ರಿಪೇರಿ ಏಕೆ? ಪ್ರತಿಮೆ ಇರುವ ಸ್ಥಳ ಮಾತ್ರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಏರ್ ಪೋರ್ಟ್ ರಸ್ತೆ ಗುಂಡಿ ಬಿದ್ದಿತ್ತಾ? ರಿಪೇರಿ ಎಲ್ಲಿ ಬಂತು ಎಂದು ಪ್ರಶ್ನಿಸಿದರು.
ಇದನ್ನೂ ಓದಿ- ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಲು 12 ಕೋಟಿ ಖರ್ಚು ಮಾಡಿದ್ದಾರೆ. ಈ ಮೊತ್ತದಲ್ಲಿ ಎರಡು ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. ನೀರು ಬಾಟಲ್ ಗೆ 1 ಕೋಟಿ ಖರ್ಚು ಮಾಡಿದ್ದಾರೆ. ಬಂದ ಜನರಿಗೆ ನೀರು ಕೊಡೋದಕ್ಕೆ 1 ಕೋಟಿ ಖರ್ಚು ತೋರಿಸಿದ್ದಾರೆ. ಒಬ್ಬೊಬ್ಬರೂ ಎಷ್ಟೆಷ್ಟು ಲೀಟರ್ ನೀರು ಕುಡಿದಿದ್ದಾರೆ. 10 ಲಕ್ಷ ಜನ ಸೇರಿದ್ದರೆ 1 ಕೋಟಿ ಆಗಬೇಕು. ಎಷ್ಟು ಜನ ಸೇರಿದ್ರು? ಎಷ್ಟು ನೀರು ಖರ್ಚಾಯ್ತು?. ಮೋದಿ ಅಥವಾ ಅಮಿತ್ ಶಾ ಕುಡಿಯುವ ನೀರಿನ ಬಾಟಲ್ ಕೊಟ್ರಾ? ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಸ್ ವ್ಯವಸ್ಥೆಗೆ 6.30 ಕೋಟಿ ಖರ್ಚು ಮಾಡಿದ್ದಾರೆ. ಅಡುಗೆ ಮನೆ ಸೆಟ್ ಟಪ್ ಗಾಗಿ 50 ಲಕ್ಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚು ಮಾಡಿದ್ದಾರೆ. ಈ ಮೂಲಕ ಬಿಜೆಪಿ ಕನ್ನಡಗರಿಗೆ ಮೋಸ ಮಾಡಿದ್ದಾರೆ. ಪ್ರಧಾನಿ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಅಮಿತ್ ಶಾ ಹೆಸರಿನಲ್ಲಿ 40-50 ಕೋಟಿ ಡೀಲ್ ಆಗಿರಬಹುದು ಎಂದರು.
ಚುನಾವಣಾ ಸಂದರ್ಭ ದಂಡಯಾತ್ರೆಗೆ ಕರೆಸಿ ಇಂಥ ಭ್ರಷ್ಟ ವ್ಯವಸ್ಥೆ ಇರಬೇಕಾ?. ಜನರನ್ನು ಬಸ್ ನಲ್ಲಿ ಕರೆತರುವುದಕ್ಕೆ 6 ಕೋಟಿ ಹಣ ಖರ್ಚು ಮಾಡಿದ್ದಾರೆ. ಮೋದಿಗೆ ಹೂವ ಎರಚುವುದಕ್ಕೆ 6 ಕೋಟಿ ಬಿಲ್ ಮಾಡಿದ್ದೀರಲ್ಲ. ಅಮಿತ್ ಶಾ ಹೆಸರಲ್ಲಿ ಎಷ್ಟು ಲೂಟಿ ಹೊಡೆದಿದ್ದಾರೋ ಗೊತ್ತಿಲ್ಲ. ದಾವಣಗೆರೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ನಡೆದಿತ್ತು. ಅಲ್ಲಿ ನಳೀನ್ ಕುಮಾರ್ ಕಟೀಲ್ ಎಷ್ಟು ಬಿಲ್ ಮಾಡಿದ್ದಾರೆ. ಪ್ರಧಾನಿಗೋಸ್ಕರ ಭ್ರಷ್ಟಾಚಾರದ ಪರ್ಸೆಂಟೇಜ್ ಹೆಚ್ಚಾಯ್ತಾ? ಎಂದು ಕಿಡಿ ಕಾರಿದರು.
ಇದನ್ನೂ ಓದಿ- "ಜೆಡಿಎಸ್ ವಿರುದ್ಧ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಒಂದಾಗಿವೆ, ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ"
ಅಸ್ವಸ್ಥ ನಾರಾಯಣರನ್ನೇ ಕೇಳಬೇಕು :
ಒಂದು ಬಾರಿ ಬಂದಾಗಲೇ ಇಷ್ಟು ಲೂಟಿ ಮಾಡಿದ್ದಾರೆ. ಕಿಚನ್ ಸೆಟಪ್ ಮಾಡುವುದಕ್ಕೆ 50 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚಾಗಿದೆ. ಇದು ಬಿಜೆಪಿಯ ಭರವಸೆ. ಅಸ್ವಸ್ತ ನಾರಾಯಣರನ್ನೇ ಈ ಬಗ್ಗೆ ಕೇಳಬೇಕು. ಉರಿಗೌಡ ನಂಜೇಗೌಡ ಇಟ್ಟುಕೊಂಡು ಒಕ್ಕಲಿಗರನ್ನು ಕೊಲೆಗಡುಕರು ಮಾಡಿದವರನ್ನೇ ಕೇಳಬೇಕು. ಎಲ್ಲೆಲ್ಲಿ ಪ್ರಧಾನಿ ಬಂದಿದ್ದಾರೆ ಅಲೆಲ್ಲ ಜನರು ಕದವನ್ನು ತಟ್ಟಬೇಕು ಎಂದು ತಿಳಿಸಿದರು.
ಇವರು ಹೋದಲ್ಲೆಲ್ಲ ಸ್ಟ್ಯಾಚ್ಯೂ ಕಟ್ತೀವಿ ಅಂತಾರೆ. ಪ್ರತಿಮೆ ನಿರ್ಮಾಣಗಳ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಒಕ್ಕಲಿಗರು ಮಾತ್ರವಲ್ಲ ಯಾವ ಸಮುದಾಯವೂ ಬಿಜೆಪಿ ಜೊತೆಗೆ ಹೋಗಲ್ಲ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.