ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ನ ನಿರ್ದೇಶಕರ ಮಂಡಳಿಯ ಡಾ. ಸುಭಾಷ್ ಚಂದ್ರ ಮತ್ತು ಶ್ರೀ ಪುನಿತ್ ಗೋಯೆಂಕಾ ಅವರಿಗೆ ಸಂಬಂಧಿಸಿದಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹೊರಡಿಸಿದ ಮಧ್ಯಂತರ ಎಕ್ಸ್-ಪಾರ್ಟೆ ಆದೇಶವನ್ನು ಗಮನಿಸಿದೆ. ಮಂಡಳಿಯು ಪ್ರಸ್ತುತ ವಿವರವಾದ ಆದೇಶವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಅಗತ್ಯವಿರುವ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸೂಕ್ತ ಕಾನೂನು ಸಲಹೆಯನ್ನು ಪಡೆಯುತ್ತಿದೆ.
ವರ್ಷದಿಂದ ವರ್ಷಕ್ಕೆ ಷೇರುದಾರರ ಮೌಲ್ಯವನ್ನು ಹೆಚ್ಚಿಸುವುದರ ಮೇಲೆ ಏಕೀಕೃತ ಗಮನವನ್ನು ಹೊಂದಿರುವ ಕಂಪನಿಯ ಮಂಡಳಿಯು ಅದರ ಕಾರ್ಯತಂತ್ರದ ಗುರಿಗಳು ಮತ್ತು ಭವಿಷ್ಯದ ಆದ್ಯತೆಗಳ ನಿರ್ವಹಣೆ ಕಡೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸಿದೆ. ಅಲ್ಲದೆ, ಕಂಪನಿ ಮತ್ತು ಅದರ ಎಲ್ಲಾ ಮೌಲ್ಯಯುತ ಷೇರುದಾರರ ಹಿತಾಸಕ್ತಿಯು ಮುಂಚೂಣಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಕಂಪನಿಯ ಸಂಸ್ಥಾಪಕರಾಗಿ ಡಾ. ಸುಭಾಷ್ ಚಂದ್ರ ಅವರು ನೀಡಿದ ಮಹತ್ವದ ಕೊಡುಗೆಯನ್ನು ಮಂಡಳಿಯು ಗುರುತಿಸುತ್ತದೆ ಮತ್ತು ಶ್ರೀ. ಪುನಿತ್ ಗೋಯೆಂಕಾ ಅವರು ಪ್ರದರ್ಶಿಸಿದ ಬೆಳವಣಿಗೆ ಮತ್ತು ಮೌಲ್ಯ ಉತ್ಪಾದನಾ ಕೇಂದ್ರಿತ ನಾಯಕತ್ವವನ್ನು ಗುರುತಿಸುತ್ತದೆ. ಕಂಪನಿಯು ಭವಿಷ್ಯಕ್ಕಾಗಿ ನಿಗದಿತ ಗುರಿಗಳನ್ನು ಸಾಧಿಸುವುದನ್ನು ಮುಂದುವರಿಸುತ್ತದೆ ಮತ್ತು ಎಲ್ಲಾ ಮಧ್ಯಸ್ಥಗಾರರಿಗೆ ಮೌಲ್ಯವನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವನ್ನು ಮಂಡಳಿ ಹೊಂದಿದೆ ಎಂದು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನ ಅಧ್ಯಕ್ಷರಾದ ಶ್ರೀ ಆರ್. ಗೋಪಾಲನ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.