ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು?

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಾಲಕಿಯ ಬಾಯೊಳಗೆ ಬಾಂಬ್ ಸಿಡಿದ ಪರಿಣಾಮ ತೀವ್ರ ಗಾಯವಾಗಿದ್ದು, 50 ಹೊಲಿಗೆಗಳನ್ನು ಹಾಕಲಾಗಿದೆ. 

Last Updated : Nov 8, 2018, 12:59 PM IST
ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು? title=

ಲಖನೌ: ಮೂರು ವರ್ಷದ ಬಾಲಕಿಯ ಬಾಯೊಳಗೆ ಯುವಕನೊಬ್ಬ ಪಟಾಕಿ ಸಿಡಿಸಿದ ಆತಂಕಕಾರಿ ಘಟನೆ ಉತ್ತರಪ್ರದೇಶದ ಮೀರತ್'ನ ಮಿಲಕ್ ಗ್ರಾಮದಲ್ಲಿ ದೀಪಾವಳಿ ಮುನ್ನಾ ದಿನವಾದ ಮಂಗಳವಾರ ನಡೆದಿದೆ.

ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿರುವ ಬಾಲಕಿಯ ತಂದೆ, ಸ್ಥಳೀಯ ಯುವಕ ಹರ್ಪಾಲ್ ಎಂಬಾತ ಆಟವಾಡುತ್ತಿದ್ದ ಮಗಳನ್ನು ಕರೆದು ಆಕೆಯ ಬಾಯೊಳಗೆ ಪಟಾಕಿ ಹಾಕಿ ಬೆಂಕಿ ಹಚ್ಚಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವಂತೆ ತಂದೆ ಒತ್ತಾಯಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಾಲಕಿಯ ಬಾಯೊಳಗೆ ಬಾಂಬ್ ಸಿಡಿದ ಪರಿಣಾಮ ತೀವ್ರ ಗಾಯವಾಗಿದ್ದು, 50 ಹೊಲಿಗೆಗಳನ್ನು ಹಾಕಲಾಗಿದೆ. ಬಾಲಕಿಯ ಗಂಟಲಿಗೂ ಘಾಸಿಯಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯ ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ ಎಂದಿದ್ದಾರೆ.

Trending News