ನವದೆಹಲಿ: ದೇಶದಲ್ಲಿ ಲಾಕ್‍ಡೌನ್ (Lockdown) ಅನ್ನು ಮೇ 3ರವರೆಗೆ ವಿಸ್ತರಿಸಿದ ಬೆನ್ನಲ್ಲೇ ಜನಸಾಮಾನ್ಯರಿಗೆ ಭಿನ್ನ ಸುದ್ದಿಯೊಂದು ದೊರೆತಿದೆ. ಡಬ್ಲ್ಯುಪಿಐ ಹಣದುಬ್ಬರ (Inflation) ಕಳೆದ ತಿಂಗಳಲ್ಲಿ ತೀವ್ರವಾಗಿ ಕುಸಿದಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ಫೆಬ್ರವರಿಯಲ್ಲಿ ದೇಶದ ಸರಕುಗಳ ಸಗಟು ಹಣದುಬ್ಬರವು ಶೇಕಡಾ 1ಕ್ಕೆ ಇಳಿದಿದೆ. ವಾರ್ಷಿಕ ಆಧಾರದ ಮೇಲೆ ಸಗಟು ಹಣದುಬ್ಬರವು ಕಳೆದ ಮಾರ್ಚ್‌ನಲ್ಲಿ ಶೇ 3.18 ರಷ್ಟಿತ್ತು.
The annual rate of inflation, based on monthly WPI, stood at 1% (provisional) for the month of March 2020 (over March, 2019) as compared to 2.26% (provisional) for the previous month and 3.10% during the corresponding month of the previous year: Govt of India pic.twitter.com/uFML8OGDF4
— ANI (@ANI) April 15, 2020
ಇಂದು ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಫೆಬ್ರವರಿಯಲ್ಲಿ ಆಹಾರ ಪದಾರ್ಥಗಳ ಮೇಲಿನ ಹಣದುಬ್ಬರವು ಶೇಕಡಾ 7.79 ರಷ್ಟಿದ್ದು ಮಾರ್ಚ್‌ನಲ್ಲಿ ಇದು 4.91 ಕ್ಕೆ ಇಳಿದಿದೆ. ಜನವರಿಯ ಸಗಟು ಹಣದುಬ್ಬರ ಅಂಕಿ ಅಂಶವನ್ನು ಸರ್ಕಾರ 3.10% ರಿಂದ 3.52% ಕ್ಕೆ ಪರಿಷ್ಕರಿಸಿದೆ. ಇದು ಆಹಾರ ಸಾಮಗ್ರಿಗಳ ವಿಶೇಷವಾಗಿ ತರಕಾರಿಗಳ ಬೆಳೆಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಈರುಳ್ಳಿ ಬೆಲೆ ಹೆಚ್ಚಾಗಿದೆ. ಆದರೆ ಇತರ ತರಕಾರಿಗಳು ಅಗ್ಗವಾಗಿವೆ:
ವರದಿಯ ಪ್ರಕಾರ, ದೈನಂದಿನ ಬಳಸಿದ ತರಕಾರಿಗಳ ಬೆಲೆಗಳನ್ನು ದಾಖಲಿಸಲಾಗಿದೆ. ಫೆಬ್ರವರಿಯಲ್ಲಿ, ತರಕಾರಿಗಳ ಹಣದುಬ್ಬರ ದರವು ಶೇಕಡಾ 29.97 ರಷ್ಟಿತ್ತು, ಇದು ಮಾರ್ಚ್‌ನಲ್ಲಿ ಶೇಕಡಾ 11.90 ಕ್ಕೆ ಇಳಿದಿದೆ. ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಇದ್ದರೂ ಈರುಳ್ಳಿ ಬೆಲೆಯೇ ಹೆಚ್ಚು ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಈರುಳ್ಳಿ ಹಣದುಬ್ಬರವು ಶೇಕಡಾ 112.31 ಆಗಿದೆ.