ಜಿಎಸ್‏ಟಿ ಹಗುರ: ಕೆಲ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ!

ಪ್ರಸಕ್ತ ಶೇಕಡ 28 ಜಿಎಸ್‌ಟಿ ಶ್ರೇಣಿಯಲ್ಲಿರುವ 35 ವಸ್ತುಗಳಲ್ಲಿ ಜನಸಾಮಾನ್ಯರ ಉಪಯೋಗಕ್ಕೆ ಬೇಕಾದ ಹಲವು ವಸ್ತುಗಳ ತೆರಿಗೆ ದರವನ್ನು ಶೇಕಡಾ 18ರೊಳಗಿನ ಶ್ರೇಣಿಗೆ ಇಳಿಕೆ ಸಾಧ್ಯತೆ.

Last Updated : Dec 19, 2018, 10:55 AM IST
ಜಿಎಸ್‏ಟಿ ಹಗುರ: ಕೆಲ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ! title=

ಮುಂಬೈ: ಜನಸಾಮಾನ್ಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀಕರಿಸುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಶೇಕಡ 99 ಸರಕುಗಳ ಮೇಲಿನ ಜಿಎಸ್‌ಟಿ ಯನ್ನು ಶೇಕಡ 18 ರ ಅಥವಾ ಅದಕ್ಕಿಂತ ಕಡಿಮೆ ಶ್ರೇಣಿಗೆ ತರಲು  ಸರ್ಕಾರ ಕಾರ್ಯೋನ್ಮುಖವಾಗಿದೆ  ಎಂದು ಅವರು ತಿಳಿಸಿದ್ದಾರೆ. 

ಮೊದಲು ಸಾಲ ಮರುಪಾವತಿಸದ ಕಂಪನಿಗಳು, ಮಾಲೀಕರನ್ನು ಏನೂ ಮಾಡಲು ಆಗುತ್ತಿರಲಿಲ್ಲ. ಈಗ 'ವಿಶೇಷ ವ್ಯಕ್ತಿಗಳ' ತನಿಖೆಗೆ ರಕ್ಷಣೆ ನೀಡುತ್ತಿರುವುದರಿಂದ ಎಲ್ಲರೂ ಜಾಗೃತರಾಗುತ್ತಿದ್ದಾರೆ.  ಜಿಎಸ್‌ಟಿಗೆ ಮೊದಲು ನೋಂದಾಯಿತ ಉದ್ಯಮಗಳ ಸಂಖ್ಯೆ ಕೇವಲ 65 ಲಕ್ಷ ಇತ್ತು. ಈಗ ಅದು 1.10 ಕೋಟಿಗೇರಿದೆ. ಆರ್ಥಿಕತೆ ಹೆಚ್ಚು ಹೆಚ್ಚು ಪಾರದರ್ಶಕವಾಗುತ್ತಿದೆ. ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿಸದೆ ದೇಶದಿಂದ ತಪ್ಪಿಸಿಕೊಂಡು ಬೇರೆ ದೇಶಗಳಿಗೆ ಪಲಾಯನ ಮಾಡದಂತೆ ತಡೆಯಲು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ 2018 ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕಾನೂನಿಂದ ತಪ್ಪಿಸಿಕೊಳ್ಳುವ ಮುಂಚೆ ನ್ಯಾಯಾಧೀಶರ ಎದುರು ಹಾಜರುಪಡಿಸುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದರು.

ಪ್ರಸಕ್ತ ಶೇಕಡ 28 ಜಿಎಸ್‌ಟಿ ಶ್ರೇಣಿಯಲ್ಲಿರುವ 35 ವಸ್ತುಗಳಲ್ಲಿ ಜನಸಾಮಾನ್ಯರ ಉಪಯೋಗಕ್ಕೆ ಬೇಕಾದ ಹಲವು ವಸ್ತುಗಳ ತೆರಿಗೆ ದರವನ್ನು ಶೇಕಡಾ 18ರೊಳಗಿನ ಶ್ರೇಣಿಗೆ ಇಳಿಕೆ ಸಾಧ್ಯತೆ ಇದೇ ಎನ್ನಲಾಗಿದೆ. 

ಇವು 28% ಶ್ರೇಣಿಯಲ್ಲಿರುವ 35 ಪ್ರಮುಖ ವಸ್ತುಗಳು:
ದೊಡ್ಡ ಟಿ.ವಿ, ಎ.ಸಿ, ಡಿಜಿಟಲ್‌ ಕ್ಯಾಮೆರಾ, ವೀಡಿಯೋ ರೆಕಾರ್ಡರ್‌, ಡಿಷ್‌ ವಾಷಿಂಗ್‌ ಮೆಷಿನ್‌, ವಾಹನಗಳು, ರಿವಾಲ್ವರ್‌, ಪಿಸ್ತೂಲ್‌, ಲಾಟರಿ, 
ಕೆಲವು ಎಲೆಕ್ಟ್ರಿಕ್‌ ಬಿಡಿಭಾಗಗಳು, ಟಯರ್‌ಗಳು, ವಾಹನ ಬಿಡಿ ಭಾಗಗಳು, ದೊಡ್ಡ ಟ್ರ್ಯಾಕ್ಟರ್‌ಗಳು, ಸಿಮೆಂಟ್‌, ಮಾರ್ಬಲ್‌, ಗ್ರಾನೈಟ್‌, ಎಂಜಿನ್‌ಗಳು 
ಸಿಗರೇಟು, ತಂಬಾಕು, ಪಾನ್‌ ಮಸಾಲಾ, ತಂಪು ಪಾನೀಯ, ಸ್ಮೋಕಿಂಗ್‌ ಪೈಪ್‌ ಸೇರಿದಂತೆ ಹಲವು ವಸ್ತುಗಳನ್ನು ಶೇಕಡಾ 18 ರ ಶ್ರೇಣಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ.

ಈ ಪೈಕಿ ದೊಡ್ಡ ಟಿವಿ, ಎಸಿ, ವಾಹನ, ಟೈಯರ್ ಗಳು, ವಾಹನ ಬಿಡಿ ಭಾಗ, ಸಿಮೆಂಟ್, ಮಾರ್ಬಲ್, ಗ್ರಾನೈಟ್, ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್, ಏರ್‌ ಕಂಡೀಷನರ್‌ ಮೊದಲಾದ ಸರಕುಗಳನ್ನು ಶೇಕಡ 18ರ ಶ್ರೇಣಿಗೆ ತಂದರೆ ಇವುಗಳ ಬೆಲೆ ಕಡಿಮೆಯಾಗಲಿದೆ.
 

Trending News