ವಿಶ್ವಕ್ಕೆ Coronavirus ನೀಡಿದ ಚೀನಾದ ಆರ್ಥಿಕತೆಗೆ ಇದೀಗ ಆರ್ಥಿಕ ಸೋಂಕು ತಗುಲಿದೆ..

ಇಡೀ ವಿಶ್ವವನ್ನೇ ಕೊರೊನಾ ವೈರಸ್ ಸಂಕಷ್ಟಕ್ಕೆ ನೂಕಿದ ಚೀನಾ, ಇದೀಗ ಮತ್ತೊಂದು ಸೋಂಕನ್ನು ಎದುರಿಸುತ್ತಿದೆ. ಈ ಸೋಂಕು ಅರ್ಥಿಕ ಸೊಂಕಾಗಿದ್ದು, ಸತತವಾಗಿ ಬಿಜಿಂಗ್ ಅರ್ಥವ್ಯವಸ್ಥೆಯನ್ನು ಸೊರಗಿಸುತ್ತಿದೆ.

Last Updated : Jul 10, 2020, 12:04 PM IST
ವಿಶ್ವಕ್ಕೆ Coronavirus ನೀಡಿದ ಚೀನಾದ ಆರ್ಥಿಕತೆಗೆ ಇದೀಗ ಆರ್ಥಿಕ ಸೋಂಕು ತಗುಲಿದೆ.. title=

ಬಿಜಿಂಗ್: ಇಡೀ ವಿಶ್ವವನ್ನೇ ಕೊರೊನಾ ವೈರಸ್ ಸಂಕಷ್ಟಕ್ಕೆ ನೂಕಿದ ಚೀನಾ, ಇದೀಗ ಮತ್ತೊಂದು ಸೋಂಕನ್ನು ಎದುರಿಸುತ್ತಿದೆ. ಈ ಸೋಂಕು ಅರ್ಥಿಕ ಸೊಂಕಾಗಿದ್ದು, ಸತತವಾಗಿ ಬಿಜಿಂಗ್ ಅರ್ಥವ್ಯವಸ್ಥೆಯನ್ನು ಸೊರಗಿಸುತ್ತಿದೆ. ಚೀನಾದ ಬ್ಯಾಂಕ್ ಗಳಿಂದ ಹೊರಹೊಮ್ಮಿರುವ ಈ ಸೋಂಕಿನ ಕಾರಣ ಚೀನಾಗೆ ಅನೇಕ ಅನಿರೀಕ್ಷಿತ ಕ್ರಮಗಳನ್ನು ಕೈಗೊಳ್ಳಲು ಆಣಿಮಾಡಿದೆ.

ಹೆಬೈ ಪ್ರಾಂತ್ಯದಲ್ಲಿ ವಾಸಿಸುವವರಿಗೆ ಬ್ಯಾಂಕಿನಿಂದ ದೊಡ್ಡ ಪ್ರಮಾಣದ ಮೊತ್ತವನ್ನು ಹಿಂತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಅವರು ದೊಡ್ಡ ಮೊತ್ತವನ್ನು ಹಿಂಪಡೆಯಲು ಬಯಸಿದರೆ, ಅವರು ಮೊದಲು ಅದಕ್ಕೆ ಅನುಮೋದನೆ ಪಡೆಯಬೇಕು. ಈ ನಿಯಮವು ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿಗಳಿಗೂ ಕೂಡ ಅನ್ವಯಿಸಲಿದೆ. ಹೊಸ ನಿರ್ಬಂಧಗಳ ಪ್ರಕಾರ, 100,000 ಯುವಾನ್‌ಗಿಂತ ಹೆಚ್ಚಿನ ಮೊಲ್ಯದ ಕರೆನ್ಸಿ ಯನ್ನು ವಿಥ್ ಡ್ರಾ ಮಾಡಲು ಒಂದು ದಿನ ಮೊದಲು ಸೂಚನೆ ನೀಡಬೇಕು. ವ್ಯಾಪಾರಿಗಳು 500,000 ಯುವಾನ್‌ಗಿಂತ ಹೆಚ್ಚಿನ ವಹಿವಾಟುಗಳ ಬಗ್ಗೆ ಸೂಚನೆ ನೀಡಬೇಕಾಗಲಿದೆ.

ಇದಲ್ಲದೆ, ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುವವರು ಹಣದ ಮೂಲದ ಕುರಿತು ಮಾಹಿತಿ ನೀಡಬೇಕು ಹಾಗೂ ವಿಥ್ ಡ್ರಾ ಮಾಡುವವರು ಕೂಡ ಅದರ ಕಾರಣದ ಬಗ್ಗೆ ಮಾಹಿತಿ ನೀಡಬೇಕು. ಈ ಹೊಸ ವ್ಯವಸ್ಥೆಯು ಮುಂದಿನ ಎರಡು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಮತ್ತು ವರ್ಷದ ಕೊನೆಯಲ್ಲಿ ಝೆಜಿಯಾಂಗ್ ಹಾಗೂ ಮತ್ತು ಶೆನ್ಜೆನ್  ಪ್ರಾಂತ್ಯಗಳಿಗಗೂ ಕೂಡ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ. ಈ ಕುರಿತು ಪ್ರಕಟಗೊಂಡ ಮತ್ತೊಂದು ವರದಿಯ ಪ್ರಕಾರ, ದೇಶದ 586 ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಆಡಳಿತವು "ಹೆಚ್ಚು ಅಪಾಯಕಾರಿ" ಪಟ್ಟಿಯಲ್ಲಿರಿಸಿ ವರ್ಗೀಕರಿಸಿದೆ.

ಸಾಲ ಪಡೆದು ಅದನ್ನು ಮರುಪಾವತಿಸದೇ ಇರುವವರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಕಾರಣ ಚೀನಾ ಬ್ಯಾಂಕ್ ಗಳು ಕೈಚೆಲ್ಲುತ್ತಿವೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಗಳಿಂದ ಬ್ಯಾಂಕ್ ಗಳು ಖಾಲಿಯಾಗಿವೆ ಎನ್ನಲಾಗಿದೆ. ಮಾರ್ಚ್ 2020ರವರೆಗೆ ಚೀನಾದ ಒಟ್ಟು ದೇಶೀಯ ಸಾಲವು ದೇಶದ ಜಿಡಿಪಿಯ ಶೇಕಡಾ 317 ರಷ್ಟಿತ್ತು. ಅಷ್ಟೇ ಅಲ್ಲ ಕೆಲವು ವರದಿಗಳು ಪ್ರಕಾರ ದಾಖಲೆಗಳಲ್ಲಿಯೂ ಕೂಡ ಉಲ್ಲೇಖಿಸಲಾಗದ ಇಂತಹ ಅನೇಕ ಸಾಲಗಳಿವೆ ಎನ್ನಲಾಗಿದೆ.

ಚೀನಾದ ಬ್ಯಾಂಕಿಂಗ್ ವ್ಯವಸ್ಥೆ ಒಟ್ಟು 4 ದೊಡ್ಡ ಬ್ಯಾಂಕ್ ಗಳ ಮೂಲಕ ನಿಯಂತ್ರಿಸಲಾಗುತ್ತದೆ. ಈ ಬ್ಯಾಂಕ್ ಗಳು ಆರ್ಥಿಕ ವ್ಯವಸ್ಥೆ ಹಾಗೂ ಎಲ್ಲ ಸಾಲಗಳ ಶೇ.50 ರಷ್ಟನ್ನು ನಿಯಂತ್ರಿಸುತ್ತವೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಭ್ರಷ್ಟಾಚಾರದ ಪ್ರಕರಣಗಳೂ ಕೂಡ ಚೀನಾದ ಆರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. 2019 ರಿಂದ ಚೀನಾದ ಉದ್ಯಮಗಳಿಂದ ಪಡೆಯಲಾಗಿರುವ 20 ಬಿಲಿಯನ್ ಡಾಲರ್ ಸಾಲ ಇನ್ನೂ ಮರುಪಾವತಿಯಾಗಿಲ್ಲ. ಹೀಗಾಗಿ ಒಟ್ಟಾರೆ ಹೇಳುವುದಾದರೆ ಚೀನಾದ ಅರ್ಥವ್ಯವಸ್ಥೆಗೆ ಸೋಂಕು ತಗುಲಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆ ಅಧೋಗತಿಗೆ  ತಲುಪುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

Trending News