ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಲ್ಲಿ ಯಾವ ಸರ್ಕಾರ ಬರಲಿದೆ? ಇಂದು ಮತ ಎಣಿಕೆ...

ಗುಜರಾತ್ ಚುನಾವಣಾ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾದರೂ, ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಈ ಪರೀಕ್ಷೆಯಲ್ಲಿ ಸಫಲರಾಗುವರೇ ಎಂಬುದು ಸಹ ಕುತೂಹಲಕಾರಿಯಾಗಿದೆ.

Last Updated : Dec 18, 2017, 07:15 AM IST
  • ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 68.41 ಮತದಾನ ನಡೆದಿದೆ.
  • ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸರಾಸರಿ ಶೇ. 74.61 ಮತದಾನ ನಡೆದಿದೆ.
  • ಎರಡೂ ರಾಜ್ಯಗಳಲ್ಲಿ ಮತ ಎಣಿಕೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಲ್ಲಿ ಯಾವ ಸರ್ಕಾರ ಬರಲಿದೆ? ಇಂದು ಮತ ಎಣಿಕೆ... title=

ಅಹ್ಮದಾಬಾದ್/ಶಿಮ್ಲಾ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇಂದು ಘೋಷಿಸಲ್ಪಡಲಿವೆ. ಗುಜರಾತ್ ಚುನಾವಣಾ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾದರೂ, ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಈ ಪರೀಕ್ಷೆಯಲ್ಲಿ ಸಫಲರಾಗುವರೇ ಎಂಬುದು ಸಹ ಕುತೂಹಲಕಾರಿಯಾಗಿದೆ. ಗುಜರಾತ್ನಲ್ಲಿ, ಬಿಜೆಪಿ ಆರನೆಯ ಅವಧಿಗೆ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಸುಮಾರು ಎರಡು ದಶಕಗಳ ಕಾಲ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಹ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಬೆಟ್ಟದ ನಾಡಾದ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಬ್ಬರೂ ತಮ್ಮ ಸರ್ಕಾರದ ರಚನೆಯ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶಗಳು, ವಿಶೇಷವಾಗಿ ಗುಜರಾತ್ ಚುನಾವಣಾ ಫಲಿತಾಂಶ 2019 ರ ಲೋಕಸಭೆ ಚುನಾವಣೆಯಲ್ಲಿ  ತಮ್ಮ ಪ್ರಭಾವ ಬೀರಲಿವೆ. 2014 ರಲ್ಲಿ ಗುಜರಾತ್ನ 'ಅಭಿವೃದ್ಧಿ ಮಾದರಿಯ' ಆಧಾರದ ಮೇಲೆ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಯಲಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 68.41 ಮತದಾನ ನಡೆದಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಒಂದು ದಿನ ಮೊದಲು, ಅಂದರೆ ಭಾನುವಾರ ಎರಡೂ ಪಕ್ಷಗಳು ತಮ್ಮ ತಮ್ಮ ಗೆಲುವಿನ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿವೆ. ಬಿಜೆಪಿ ವಕ್ತಾರ ವಿ.ಎಲ್. ನರಸಿಂಹರಾವ್ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಅವರ ಧನಾತ್ಮಕ ಮತ್ತು ಕಾರ್ಯಕ್ಷಮತೆಯ ಕೇಂದ್ರಿತ ರಾಜಕೀಯದ ಕಾರಣ ಸತತ ಆರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಮೇಲುಗೈ ಸಾಧಿಸುತ್ತಿದೆ, ಚುನಾವಣಾ ಫಲಿತಾಂಶಗಳು ಮತ್ತೊಮ್ಮೆ ಇದನ್ನು ಸಾಬೀತು ಪಡಿಸುತ್ತವೆ. ಜನರು ಋಣಾತ್ಮಕ ಪ್ರಚಾರ ಮತ್ತು ಅಸಹಿಷ್ಣುತೆಯಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ನರಸಿಂಹ ರಾವ್ ಹೇಳಿದ್ದಾರೆ. 

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಗುಜರಾತ್ ಜನರು ಬದಲಾವಣೆ ಬಯಸಿದ್ದಾರೆ, ಆ ನಿಟ್ಟಿನಲ್ಲಿ ಮತ ಚಲಾಯಿಸಿದ್ದಾರೆ. "ಜನರು ಸರ್ಕಾರವನ್ನು ಬದಲಿಸಲು ಬಯಸುತ್ತಾರೆ, ಯುವಜನರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ಸೇರಿದಂತೆ ಸಮಾಜದ ಪ್ರತಿಯೊಂದು ವಿಭಾಗಕ್ಕೂ ಕಾಂಗ್ರೆಸ್ ತನ್ನ ದೃಷ್ಟಿ ನೀಡಿದೆ" ಎಂದು ಅವರು ತಮ್ಮ  ಸಂಸದೀಯ ಕ್ಷೇತ್ರವಾದ ಮಧ್ಯಪ್ರದೇಶದ ಗುನಾದಲ್ಲಿ ಹೇಳಿದರು. ಗುಜರಾತ್ನಲ್ಲಿ ಕೆಲಸ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದ್ದಾರೆ.

ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶವು ಸಹ ಇಂದೇ ಪ್ರಕಟಗೊಳ್ಳಲಿದೆ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಸೇರಿದಂತೆ 337 ಅಭ್ಯರ್ಥಿಗಳ ಚುನಾವಣೆಯ ಭವಿಷ್ಯವನ್ನು ಇದು ನಿರ್ಧರಿಸಲಿದೆ. ರಾಜ್ಯದಲ್ಲಿ, ಪ್ರತಿಸ್ಪರ್ಧಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಯೋಜಿಸಿವೆ. ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ಪ್ರತಿ ಚುನಾವಣೆಯ ನಂತರ, ಸರ್ಕಾರವನ್ನು ಬದಲಿಸುವ ಸಂಪ್ರದಾಯ ಇದೆ. ಹೇಗಾದರೂ, ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಜಯ ಸಾಧಿಸಲಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳಿಗೆ ಸೋಮವಾರ ಶಾಂತಿಯುತ ಎಣಿಕೆಯನ್ನು ಖಚಿತಪಡಿಸಲು ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನವೆಂಬರ್ 9 ರಂದು ರಾಜ್ಯದಲ್ಲಿ ಮತದಾನ ನಡೆಯಿತು. ಮುಖ್ಯ ತನಿಖಾಧಿಕಾರಿ ಪುಷ್ಪೇಂದ್ರ ರಜಪೂತ್ 42 ಕೇಂದ್ರಗಳಲ್ಲಿ ಎಣಿಸಲಾಗುವುದು ಮತ್ತು ಡಿಸೆಂಬರ್ 18 ರ ಮಧ್ಯಾಹ್ನ ಘೋಷಣೆಯ ಸಂಭವನೀಯತೆಯನ್ನು ಘೋಷಿಸಲಾಗುವುದು ಎಂದು ಹೇಳಿದರು. ಎಲ್ಲ ಎಣಿಕೆಯ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಎಣಿಕೆಯ ಕೇಂದ್ರಗಳಲ್ಲಿ, ಎಂಟು ರಿಂದ ಹತ್ತು ಅಡಿ ಎತ್ತರದ ಬಾರಿಕೇಡ್ಗಳನ್ನು ಸ್ಥಾಪಿಸಲಾಗಿದೆ ಮತ್ತು ಎಣಿಕೆಯ ಸಿಬ್ಬಂದಿ ಮತ್ತು ಏಜೆಂಟ್ ಪ್ರವೇಶಕ್ಕಾಗಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ರಜಪೂತ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 74.61 ರಷ್ಟು ಮತದಾನ ನಡೆದಿದೆ.

Trending News