ತ್ರಿವಳಿ ತಲಾಖ್ ಮಸೂದೆ ಸಮರ್ಥಿಸಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದೇನು?

 ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡಿಸಿದ ಕ್ರಮವನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಮರ್ಥಿಸಿಕೊಂಡಿದ್ದಾರೆ. ತ್ರಿವಳಿ ಮಸೂದೆಗೆ ವಿಚಾರವಾಗಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಿಡಿ ಕಾರಿದ ನಖ್ವಿ, ಈ ಮಸೂದೆಗೆ ಧರ್ಮಕ್ಕೂ ತಪ್ಪು ಆಚರಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 

Last Updated : Jun 23, 2019, 12:56 PM IST
ತ್ರಿವಳಿ ತಲಾಖ್ ಮಸೂದೆ ಸಮರ್ಥಿಸಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದೇನು? title=
file photo

ನವದೆಹಲಿ:  ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡಿಸಿದ ಕ್ರಮವನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಮರ್ಥಿಸಿಕೊಂಡಿದ್ದಾರೆ. ತ್ರಿವಳಿ ಮಸೂದೆಗೆ ವಿಚಾರವಾಗಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಿಡಿ ಕಾರಿದ ನಖ್ವಿ, ಈ ಮಸೂದೆಗೆ ಧರ್ಮಕ್ಕೂ ತಪ್ಪು ಆಚರಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 

ಈ ವಿಚಾರವಾಗಿ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು 'ಮಹಿಳಾ ಸಬಲೀಕರಣ ಮತ್ತು ಭದ್ರತೆಗಾಗಿ ಕಾನೂನುಗಳನ್ನು ರೂಪಿಸುವ ಮಾರ್ಗವನ್ನು ಕಾಂಗ್ರೆಸ್ ನಾಯಕರು ತಡೆದರು. ತ್ರಿವಳಿ ತಲಾಖ್‌ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಅದು ತಪ್ಪು ಸಂಪ್ರದಾಯಗಳು ಮತ್ತು ತಪ್ಪು ಅಭ್ಯಾಸಗಳಿಗೆ ಸಂಬಂಧಿಸಿದೆ' ಎಂದು ಅವರು ತಿಳಿಸಿದರು. ಇದೇ ವೇಳೆ ಅವರು ಬಾಲ್ಯವಿವಾಹ ಮತ್ತು ಸತಿ ವ್ಯವಸ್ಥೆಗಳನ್ನು ಉಲ್ಲೇಖಿಸಿ, ಅದೇ ರೀತಿ ತ್ರಿವಳಿ ತಲಾಖ್‌ ಸಂಪ್ರದಾಯವನ್ನು ಸಹಿತ ಕೊನೆಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು, ವಿರೋಧ ಪಕ್ಷಗಳು ಈಗಾಗಲೇ ಸುಪ್ರೀಂಕೋರ್ಟ್ ಈ ವಿಚಾರವಾಗಿ ತೀರ್ಪನ್ನು ನೀಡಿದೆ, ಆದ್ದರಿಂದ ಮಸೂದೆಯ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದವು. ಮಸೂದೆ ಪರವಾಗಿ 186 ಸದಸ್ಯರು ಮತ್ತು ವಿರುದ್ಧವಾಗಿ 74 ಸದಸ್ಯರು ಮತ ಚಲಾಯಿಸಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತನಾಡಿ ಮುಸ್ಲಿಂ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ಈ ಮಸೂದೆ ಏನೂ ಮಾಡುವುದಿಲ್ಲ ಎಂದು ಹೇಳಿದರು.

ಕಳೆದ ವರ್ಷ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2018 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ ಹಿಂದಿನ ಲೋಕಸಭಾ ವಿಸರ್ಜನೆಯ ನಂತರ ರಾಜ್ಯಸಭೆಯಲ್ಲಿ ಮಸೂದೆ ಬಾಕಿ ಉಳಿದಿತ್ತು. ಈ ಹಿನ್ನಲೆಯಲ್ಲಿ ಈಗ ಮತ್ತೆ ನೂತನ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

Trending News