ಉತ್ತರಪ್ರದೇಶದಲ್ಲಿ ಗೋಹತ್ಯೆ ವಿಚಾರವಾಗಿ ಹಿಂಸಾಚಾರ, ಪೋಲಿಸ್ ಇನ್ಸ್ಪೆಕ್ಟರ್ ಸಾವು

 ಉತ್ತರಪ್ರದೇಶದ ಬುಲಂದಶಾಹರ್ನಲ್ಲಿ ಸೋಮವಾರದಂದು ಗೋಹತ್ಯೆ ವಿಚಾರವಾಗಿ  ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಘರ್ಷಣೆಯ ಸಂದರ್ಭದಲ್ಲಿ ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾನೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.

Last Updated : Dec 3, 2018, 08:19 PM IST
ಉತ್ತರಪ್ರದೇಶದಲ್ಲಿ ಗೋಹತ್ಯೆ ವಿಚಾರವಾಗಿ ಹಿಂಸಾಚಾರ, ಪೋಲಿಸ್ ಇನ್ಸ್ಪೆಕ್ಟರ್ ಸಾವು title=
Photo:ANI

ನವದೆಹಲಿ: ಉತ್ತರಪ್ರದೇಶದ ಬುಲಂದಶಾಹರ್ನಲ್ಲಿ ಸೋಮವಾರದಂದು ಗೋಹತ್ಯೆ ವಿಚಾರವಾಗಿ  ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಘರ್ಷಣೆಯ ಸಂದರ್ಭದಲ್ಲಿ ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾನೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.

ಅಕ್ರಮ ಕಸಾಯಿಖಾನೆಗಳಲ್ಲಿ ಗೋಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೆ ಮೋಟಾರ್ ಸೈಕಲ್ ಗಳಿಗೆ ಬೆಂಕಿಯನ್ನು ಹಚ್ಚಿ ಧ್ವಂಸಗೊಳಿಸಿದ್ದಾರೆ.ಐಎಎನ್ಎಸ್ ಪ್ರಕಾರ, ಹಲವಾರು ಹಿಂದೂ ಸಂಘಟನೆಗಳ ಸದಸ್ಯರು ಸತ್ತ ಗೋವನ್ನು ಬುಲಂದ್ಶಹರ್-ಸೈನಾ ರಸ್ತೆಯಲ್ಲಿಟ್ಟು ಪೊಲೀಸ್ ಸಿಬ್ಬಂದಿಗೆ ಕಲ್ಲು ತೂರಾಟ ನಡೆಸಿದರು.

ಹಿಂದೂ ಯುವ ವಾಹಿನಿ ಮತ್ತು ಬಜರಂಗ ದಳ ಕಾರ್ಯಕರ್ತರು ವಾಹನಗಳನ್ನು ಧ್ವಂಸಗೊಳಿಸಿ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದರು. ಹಾದುಹೋಗುವ ಅನೇಕ ವಾಹನಗಳನ್ನು ಸುಟ್ಟುಹಾಕಿದರು.ಹಿಂಸಾಚಾರದಲ್ಲಿ ಸಿಯಾನಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಮತ್ತು ನಾಲ್ಕು ಪೇದೆಗಳು ಗಾಯಗೊಂಡಿದ್ದರು ನಂತರ ಅವರನ್ನು ಔರಂಗಾಬಾದ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

Trending News