ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ವಿಶೇಷ ಹಸು ಸಂರಕ್ಷಣಾ ಕಾರ್ಯಪಡೆ ಸಮಿತಿ ಮತ್ತು ವಿಶೇಷ ಹಸು ಸಂರಕ್ಷಣಾ ಕಾರ್ಯಪಡೆ (ಎಸ್ಸಿಪಿಎಫ್)ಯನ್ನು ಸ್ಥಾಪಿಸಲು ಹರಿಯಾಣ ಸರ್ಕಾರ ಶುಕ್ರವಾರ ಅಧಿಸೂಚನೆ ನೀಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತವಿರೋಧಿ, ಜನವಿರೋಧಿ ಕಾಯಿದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ "ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು" ಎಂಬ ಕಿರು ಹೊತ್ತಿಗೆಯನ್ನು ಇಂದು ಬಿಡುಗಡೆಗೊಳಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಿರುವ ಸಿ ಟಿ ರವಿ ಗೋವಾದಲ್ಲಿ ಗೋಹತ್ಯೆ ನಿಷೇಧ ಮಾಡುವ ಧೈರ್ಯ ಯಾಕೆ ತೋರಿಸಿ್ಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಾನು ಸಗಣಿ ಎತ್ತಿದ್ದೇನೆ, ಗಂಜಲ ಬಾಚಿದ್ದೇನೆ. ಇವರು ಯಾವತ್ತಾದ್ರೂ ಸಗಣಿ ಎತ್ತಿದ್ದಾರಾ? ಗೋವನ್ನು ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇವರು ಹಸುಗಳಿಗೆ ಹುಲ್ಲು ಹಾಕಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಉತ್ತರಪ್ರದೇಶದ ಬುಲಂದಶಾಹರ್ನಲ್ಲಿ ಸೋಮವಾರದಂದು ಗೋಹತ್ಯೆ ವಿಚಾರವಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಘರ್ಷಣೆಯ ಸಂದರ್ಭದಲ್ಲಿ ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಮೃತಪಟ್ಟಿದ್ದಾನೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.
ಗೋವುಗಳನ್ನು ಕೊಲ್ಲುವುದು ಹಿಂದುಗಳ ಭಾವನೆಗೆ ಧಕ್ಕೆಯನ್ನು ತರುತ್ತದೆ,ಆದ್ದರಿಂದ ಯಾರೊಬ್ಬರು ಕೂಡ ಮತ್ತೊಬ್ಬರ ಭಾವನೆಗಳಿಗೆ ತೊಂದರೆ ನೀಡಬಾರದು.ಇಲ್ಲವಾದರೆ ಕೇರಳದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೀವು ನೋಡಬಹುದು.
ಕಳೆದ ವರ್ಷ 349 ಗೋವುಗಳು ಸಾವನ್ನಪ್ಪಿದ್ದವು. 2015-16 ರಲ್ಲಿ ದೇಶಾದ್ಯಂತ 2,183 ಪ್ರಕರಣಗಳು ಸಂಭವಿಸಿದ್ದವು ಆದರೆ 2018 ರ ಮಾರ್ಚ್ನಲ್ಲಿ ಈ ಸಂಖ್ಯೆ10,105ಕ್ಕೆ ಹೆಚ್ಚಳವಾಗಿದೆ. ಅಂದ್ರೆ ಒಟ್ಟು 362 ಪ್ರತಿ ಶತದಷ್ಟು ಹೆಚ್ಚಳ ಕಂಡಿದೆ.ಈ ವರ್ಷ ಎಪ್ರಿಲ್ ನಿಂದ ವೇಗದ ರೈಲುಗಳಿಗೆ ಸಿಲುಕಿ ಒಟ್ಟು 6,900 ಹಸುಗಳು ಮೃತಪಟ್ಟಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.