VIDEO: ಬಿಜೆಪಿ ಕಾರ್ಯಕ್ರಮದಲ್ಲಿ ಕುಸಿದ ವೇದಿಕೆ; ಹಲವರಿಗೆ ಗಾಯ

ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಅವಧೇಶ್‌ ಯಾದವ್‌ ಸೇರಿದಂತೆ ಅನೇಕ ಕಾರ್ಯಕರ್ತರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

Last Updated : Mar 23, 2019, 01:17 PM IST
VIDEO: ಬಿಜೆಪಿ ಕಾರ್ಯಕ್ರಮದಲ್ಲಿ ಕುಸಿದ ವೇದಿಕೆ; ಹಲವರಿಗೆ ಗಾಯ title=

ಸಂಬಲ್: ಉತ್ತರಪ್ರದೇಶದ ಸಂಬಲ್ ಜಿಲ್ಲೆಯಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಹೋಳಿ ಮಿಲನ್ ಸಮಾರೋಪ ಸಮಾರಭದಲ್ಲಿ ಇದ್ದಕ್ಕಿದ್ದಂತೆ ವೇದಿಕೆ ಕುಸಿದು ಹಲವರು ಗಾಯಗೊಂಡಿದ್ದಾರೆ. 

ಕಾರ್ಯಕ್ರಮದಲ್ಲಿ ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಂದು ಶುಭಾಶಯ ಕೋರುತ್ತಿದ್ದ ಸಂದರ್ಭದಲ್ಲಿ ವೇದಿಕೆ ಇದ್ದಕ್ಕಿದ್ದಂತೆ ಕುಸಿದ ಪರಿಣಾಮ,  ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಅವಧೇಶ್‌ ಯಾದವ್‌ ಸೇರಿದಂತೆ ಅನೇಕ ಕಾರ್ಯಕರ್ತರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಸದ್ಯ ವೇದಿಕೆ ಕುಸಿಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಒಂದೇ ಬಾರಿಗೆ ವೇದಿಕೆ ಮೇಲೆ ಹತ್ತಿದ್ದರಿಂದ ಒತ್ತಡ ತಡೆಯಲಾಗದೆ ವೇದಿಕೆ ಕುಸಿದಿದೆ ಎನ್ನಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
 

Trending News