Video: ಪುಣೆಯಲ್ಲಿ ಗಣಪತಿಗೆ 126 ಕೆ.ಜಿ. ತೂಕದ ಮೋದಕ ನೈವೇದ್ಯ

 ಪುಣೆಯ ದಗದುಷೆತ್ ಹಲ್ವಾಯಿ ಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ನೈವೇದ್ಯವಾಗಿ ಬೃಹದಾಕಾರದ ಮೋದಕವನ್ನು ತಯಾರಿಸಲಾಗಿದೆ. 

Last Updated : Sep 14, 2018, 03:00 PM IST
Video: ಪುಣೆಯಲ್ಲಿ ಗಣಪತಿಗೆ 126 ಕೆ.ಜಿ. ತೂಕದ ಮೋದಕ ನೈವೇದ್ಯ title=

ಪುಣೆ: ಈ ಬಾರಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪುಣೆಯ ದಗದುಷೆತ್ ಹಲ್ವಾಯಿ ಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ನೈವೇದ್ಯವಾಗಿ ಬೃಹದಾಕಾರದ ಮೋದಕವನ್ನು ತಯಾರಿಸಲಾಗಿದೆ. 

ಕಳೆದ ಬಾರಿ 120 ಕೆ.ಜಿ ತೂಕದ ಮೋದಕ ತಯಾರಿಸಲಾಗಿತ್ತು, ಆದರೆ ಈ ಬಾರಿ 126 ಕೆ.ಜಿ. ತೂಕದ ಮೋದಕ ತಯಾರಿಸಲಾಗಿದೆ. ಈ ಮೋದಕದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ದ್ರಾಕ್ಷಿ ಮೊದಲಾದ ಡ್ರೈ ಫ್ರೂಟ್ಸ್ ಬಳಸಿ ಈ ಬೃಹದಾಕಾರದ ಆಕರ್ಷಕ ಮೋದಕ ತಯಾರಿಸಲಾಗಿದೆ. ಇದನ್ನು ನೈವೇದ್ಯಕ್ಕಿಟ್ಟು ಮಹಾ ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುವುದು. 

ದೇಶಾದ್ಯಂತ ಗಣೇಶನ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. 10 ದಿನಗಳ ಕಾಲ ಗಣೇಶನ ಮೂರ್ತಿ ಕೂರಿಸಿ, ಪೂಜಿಸಿ ಕಡೆಗೆ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. 

Trending News