ಡೆಹರಾಡೂನ್ : ಉತ್ತರಾಖಂಡ್'ನ ಡೆಹರಾಡೂನ್'ನಲ್ಲಿನ ಮದರಸಾಗಳ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಾಲಿಸಲು ಹಲವು ಮದರಸಾಗಳು ನಿರಾಕರಿಸಿದ್ದು, 'ಧಾರ್ಮಿಕ ಅಂಶ'ಗಳ ಆಧಾರದ ಮೇಲೆ ಮದರಸಾ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಇಸ್ಲಾಮಿಕ್ ಶೈಕ್ಷಣಿಕ ಸಂಸ್ಥೆಗಳು ಸರ್ಕಾರದ ನಿರ್ದೇಶನವನ್ನು ಅನುಸರಿಸುವುದಿಲ್ಲ ಎಂದು ಉತ್ತರಾಖಂಡ್ ಮದರಸಾ ಶಿಕ್ಷಣ ಮಂಡಳಿ (ಯುಎಂಇಬಿ) ಶುಕ್ರವಾರ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ UMEB ನ ಅಧಿಕೃತ ಅಧಿಕಾರಿಯೊಬ್ಬರು, "ಮದ್ರಸಾದಲ್ಲಿ ಯಾವುದೇ ಚಿತ್ರ ಹಾಕುವುದಕ್ಕೆ ಇಸ್ಲಾಂ ಧರ್ಮದಲ್ಲಿ ಯಾವುದೇ ಅವಕಾಶವಿಲ್ಲದ ಕಾರಣ, ಪ್ರಧಾನ ಮಂತ್ರಿಯ ಫೋಟೋವನ್ನು ಅದರ ಆವರಣದೊಳಗೆ ಹಾಕುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನ 2017 ರ ನಂತರ ಸರ್ಕಾರ ಮದರಸಾಗಳಿಗೆ ಈ ನಿರ್ದೇಶನ ನೀಡಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ 2022 ರ ಹೊತ್ತಿಗೆ ನವ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಗೆ ಬೆಂಬಲ ನೀಡಬೇಕೆಂದು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ಈ ನಿರ್ದೇಶನ ನೀಡಲಾಗಿತ್ತು.
ಅಲ್ಲದೆ, ಇದರೊಂದಿಗೆ ಶಾಲೆಗಳ ಪ್ರಗತಿಯ ವರದಿಯನ್ನು ನೀಡುವಂತೆಯೂ ಸರ್ಕಾರ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಹಾಗೆಯೇ ಈ ಆದೇಶವನ್ನು ಉತ್ತರಾಖಂಡ್ ಅಲ್ಪಸಂಖ್ಯಾತ ನಿರ್ದೇಶನಾಲಯವೂ ಪಾಲಿಸಬೇಕೆಂದು ಸರ್ಕಾರ ಹೇಳಿತ್ತು.
ಅಂತೆಯೇ, ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ಎಲ್ಲ ಮದರಸಾಗಳಲ್ಲಿಯೂ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಹಾಕುವಂತೆ ಹೇಳಿತ್ತು.