ಉತ್ತರ ಪ್ರದೇಶ: ಸಿಡಿಲು ಬಡಿದು 35 ಜನರ ಸಾವು

ಕಾನ್ಪುರ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

Last Updated : Jul 22, 2019, 02:09 PM IST
ಉತ್ತರ ಪ್ರದೇಶ: ಸಿಡಿಲು ಬಡಿದು 35 ಜನರ ಸಾವು title=

ಲಕ್ನೋ: ಉತ್ತರ ಪ್ರದೇಶದಲ್ಲಿ ಅನೇಕ ಸ್ಥಳಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದಲ್ಲದೆ ಸಿಡಿಲು ಬಡಿದು ಸುಮಾರು 35 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಮಿಂಚು ಹೊಡೆದು ಸುಮಾರು 13 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕಾನ್ಪುರ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದ ಪರಿಣಾಮ ಅತಿ ಹೆಚ್ಚು ಜನ ಸಾವನ್ನಪ್ಪ್ದಿದ್ದಾರೆ. ಅಧಿಕೃತ ವರದಿಗಳ ಪ್ರಕಾರ, ಕಾನ್ಪುರ ಮತ್ತು ಫತೇಪುರದಲ್ಲಿ 7-7 ಜನರು ಸಾವನ್ನಪ್ಪಿದ್ದಾರೆ. ಕಾನ್ಪುರ ದೇಶದಲ್ಲಿ ಒಬ್ಬ ವ್ಯಕ್ತಿಸಾವನ್ನಪ್ಪಿದ್ದಾರೆ. ಬುಂದೇಲ್‌ಖಂಡ್ ಜಾಲೌನ್ ನಲ್ಲಿ 5, ಜಲ್ನಾದಲ್ಲಿ 4 ಜನರು, ಹಮೀರ್‌ಪುರದಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಪೂರ್ವಾಂಚಲ್‌ನಲ್ಲಿ, ಗಾಜಿಪುರದಲ್ಲಿ 2 ಮತ್ತು ಜಾನ್‌ಪುರದಲ್ಲಿ 1 ಮತ್ತು ಪ್ರತಾಪಗಢದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭಿಸಿದೆ.

ಸಿಡಿಲು ಬಡಿದು ಹಾಗೂ ಹಾವು ಕಚ್ಚಿ ಸಾವನ್ನಪ್ಪಿರುವ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಸಾರ್ವಜನಿಕ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಸಿಡಿಲು ಬಡಿದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಮತ್ತು ಪರಿಹಾರ ಕಾರ್ಯಗಳಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Trending News