ಮನೆಯ ಕರೆಂಟ್ ಬಿಲ್ ನೋಡಿ ಗ್ರಾಹಕನಿಗೆ ಶಾಕ್!

 ವಿದ್ಯುತ್ ಇಲಾಖೆ ನಿಗದಿತ ಸಮಯಕ್ಕೆ ಬಿಲ್ ಕಳುಹಿಸದೆ ಒಂದೇ ಬಾರಿಗೆ ಸೆಟಲ್ಮೆಂಟ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದೆ ಎಂದು ಅಬ್ದುಲ್ ವಾಜೀದ್ ಆರೋಪಿಸಿದ್ದಾರೆ.

Last Updated : Jan 23, 2019, 04:58 PM IST
ಮನೆಯ ಕರೆಂಟ್ ಬಿಲ್ ನೋಡಿ ಗ್ರಾಹಕನಿಗೆ ಶಾಕ್!  title=

ಕನೌಜ್: ಸಾಮಾನ್ಯವಾಗಿ ವಿದ್ಯುತ್ ತಗುಲಿದರೆ ಶಾಕ್ ಹೊಡೆಯುವ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲಿ ವಿದ್ಯುತ್ ನೋಡಿಯೇ ವ್ಯಕ್ತಿಯೋಬ್ಬರಿಗೆ ಶಾಕ್ ಹೊಡೆದಂತಾಗಿದೆ. ಹೌದು, ಉತ್ತರಪ್ರದೇಶದ ಕನೌಜ್'ನ ಗ್ರಾಹಕರಿಗೆ ವಿದ್ಯುತ್ ಇಲಾಖೆ ಕಳುಸಿಸಿದ ಬಿಲ್ ನೋಡಿ ನಿಜಕ್ಕೂ ಆಘಾತವಾಗಿದೆ. ಕೇವಲ 178 ಯೂನಿಟ್ ಬಳಕೆಗೆ ಬರೋಬ್ಬರಿ 23.71 ಕೋಟಿ ರೂ.ಗಳ ಬಿಲ್ ಕಳುಹಿಸಿದೆ. 

ಕನೌಜ್ ಜಿಲ್ಲೆಯ ಸದರ್ ಕೊತ್ವಾಲಿ ಪ್ರದೇಶದಲ್ಲಿ ಅಬ್ದುಲ್ ವಾಜಿದ್ ಎಂಬುವರು ತಮ್ಮ ಮನೆಯ ವಿದ್ಯುತ್ ಬಿಲ್ ನೋಡಿ ನಿಜಕ್ಕೂ ಶಾಕ್ ಆಗಿದ್ದಾರೆ. ಇದುವರೆಗೂ 2 ಸಾವಿರ ರೂ.ಗಳಷ್ಟು ಬರುತ್ತಿದ್ದ ವಿದ್ಯುತ್ ಬಿಲ್, ಈ ಬಾರಿ 23 ಕೋಟಿ 71 ಲಕ್ಷ ರೂ. ಬಂದಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್ ವಾಜೀದ್, ವಿದ್ಯುತ್ ಇಲಾಖೆ ನಿಗದಿತ ಸಮಯಕ್ಕೆ ಬಿಲ್ ಕಳುಹಿಸದೆ ಒಂದೇ ಬಾರಿಗೆ ಸೆಟಲ್ಮೆಂಟ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 2018ರಲ್ಲಿ ತಮ್ಮ ಮನೆಗೆ 2 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ವಿದ್ಯುತ್ ಇಲಾಖೆ ಯಾವುದೇ ಬಿಲ್ ಕಳುಹಿಸಿಲ್ಲ. ಈ ಬಗ್ಗೆ ಈಗಾಗಲೇ ದೂರು ಸಲ್ಲಿಸಿದ್ದರೂ ಸಹ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೀಗ ಇದ್ದಕ್ಕಿದ್ದಂತೆ 23.17 ಕೋಟಿ ರೂ. ಬಿಲ್ ಕಳುಹಿಸಿರುವುದು ನೋಡಿ ನಿಜಕ್ಕೂ ಶಾಕ್ ಆಗಿದೆ ಎಂದಿದ್ದಾರೆ. 

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡಿದ್ದಾರೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ವಾಜೀದ್ ಆರೋಪಿಸಿದ್ದಾರೆ.

Trending News