ಈ ರಾಜ್ಯದಲ್ಲಿ 1 ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸಲು ಸರ್ಕಾರದ ನಿರ್ದೇಶನ

ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿಕೊಂಡು, ಚಿಕ್ಕ ಮಕ್ಕಳ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.   

Written by - Ranjitha R K | Last Updated : Aug 18, 2021, 05:45 PM IST
  • ಉತ್ತರಪ್ರದೇಶದಲ್ಲಿ ಸಣ್ಣ ತರಗತಿಗಳನ್ನು ತೆರೆಯಲು ನಿರ್ಧಾರ
  • ಸೆಪ್ಟೆಂಬರ್ ನಿಂದ 1 ರಿಂದ 5 ರವರೆಗಿನ ಶಾಲೆಗಳನ್ನು ತೆರೆಯಲಾಗುವುದು
  • ಆಗಸ್ಟ್ 23 ರಿಂದ 6 ರಿಂದ 8 ರವರೆಗಿನ ತರಗತಿಗಳನ್ನು ತೆರೆಯಲು ನಿರ್ಧಾರ
ಈ ರಾಜ್ಯದಲ್ಲಿ 1 ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸಲು ಸರ್ಕಾರದ ನಿರ್ದೇಶನ  title=
ಸೆಪ್ಟೆಂಬರ್ ನಿಂದ 1 ರಿಂದ 5 ರವರೆಗಿನ ತರಗತಿಗಳನ್ನು ತೆರೆಯಲಾಗುವುದು ( file photo)

ಲಕ್ನೋ : ಉತ್ತರ ಪ್ರದೇಶ ಸರ್ಕಾರ (Uttar Pradesh Government) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೊರೋನ (Coronavirus) ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಭಿಸುವ (Schools Reopen) ನಿರ್ಧಾರಕ್ಕೆ ಬಂದಿದೆ. ಉತ್ತರ ಪ್ರದೇಶದಲ್ಲಿ 1 ರಿಂದ 8 ರವರೆಗಿನ  ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ದೇಶನ ನೀಡಿದೆ. 6 ರಿಂದ 8 ರವರೆಗಿನ  ತರಗತಿಗಳು ಆಗಸ್ಟ್ 23 ರಿಂದ ಆರಂಭವಾಗಲಿದೆ. 1 ರಿಂದ 5 ರವರೆಗಿನ ತರಗತಿಗಳು ಸೆಪ್ಟೆಂಬರ್ 1 ರಿಂದ ತೆರೆಯಲಿವೆ.

ಸೂಚನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್ : 
ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ (Coronavirus) ಸಾಂಕ್ರಾಮಿಕವನ್ನು ನಿಯಂತ್ರಿಸಿದ ನಂತರ, ಜೀವನವನ್ನು ಸಾಮಾನ್ಯಗೊಳಿಸುವ ಅಭಿಯಾನದಲ್ಲಿ ಸರ್ಕಾರ ತೊಡಗಿದೆ. ಕೋವಿಡ್ ಪ್ರೋಟೋಕಾಲ್ (Coronavirus Pandemic) ಅನ್ನು ಅನುಸರಿಸಿಕೊಂಡು, ಚಿಕ್ಕ ಮಕ್ಕಳ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸೋಮವಾರ, ಒಂಭತ್ತು ಸದಸ್ಯರ ತಂಡದೊಂದಿಗೆ ಸಭೆ ನಡೆಸಿದ ಬಳಿಕ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath Government) ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.  ರಕ್ಷಾ ಬಂಧನದ ನಂತರ, 6 ರಿಂದ 8 ರವರೆಗಿನ ತರಗತಿಗಳನ್ನು ಆಗಸ್ಟ್ 23 ರಿಂದ ಮತ್ತು 1 ರಿಂದ 5 ರವರೆಗೆ ತರಗತಿಯನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ಇದನ್ನೂ ಓದಿ : ಸಮಾಜವಾದಿ ಸಂಸದನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಆರೋಗ್ಯ ತಜ್ಞರ ಸಲಹಾ ಸಮಿತಿಯ ಸಲಹೆ : 
ರಾಜ್ಯದಲ್ಲಿ ಕರೋನಾ ನಿಯಂತ್ರಣವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ಆರೋಗ್ಯ ತಜ್ಞರ ಸಲಹಾ ಸಮಿತಿಯು ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು. ಸಮಿತಿಯ ಶಿಫಾರಸಿನ ಪ್ರಕಾರ, ರಕ್ಷಾ ಬಂಧನದ (Raksha Bandhan)  ನಂತರ, 6 ರಿಂದ 8 ನೇ ತರಗತಿಗಳಿಗೆ ಆಗಸ್ಟ್ 23 ರಿಂದ ಮತ್ತು 1 ರಿಂದ 5ರವರೆಗಿನ ತರಗತಿಗಳನ್ನೂ ಸೆಪ್ಟೆಂಬರ್ ನಿಂದ ತೆರೆಯಲು ನಿರ್ಧರಿಸಲಾಗಿದೆ.  ಕಳೆದ ಸೋಮವಾರದಿಂದ ರಾಜ್ಯದಲ್ಲಿ 9 ರಿಂದ 12 ರವರೆಗಿನ ತರಗತಿಗಳನ್ನು ತೆರೆಯಲಾಗಿದೆ. ಕಿರಿಯ ಮಕ್ಕಳಿಗಾಗಿ ತರಗತಿಗಳು ಎರಡು ಪಾಳಿಯಲ್ಲಿ ನಡೆಯಲಿವೆ.  

ಇದನ್ನೂ ಓದಿ : ಮೂವರು ಮಹಿಳಾ ನ್ಯಾಯಾಧೀಶರನ್ನು ಸುಪ್ರೀಂಗೆ ನೇಮಿಸಲು ಕೊಲಿಜಿಯಂ ಶಿಫಾರಸ್ಸು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News