UP Assembly election 2022: ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ನಿರಾಕರಿಸಿದ AIMIM 

ಈ ಮೈತ್ರಿಯನ್ನ ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಾನು ಅಥವಾ ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರು ಈ ಕುರಿತು ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Jul 25, 2021, 11:32 AM IST
  • ನಾನು ಅಥವಾ ಎಐಐಎಂ ಮುಖ್ಯಸ್ಥ ಒವೈಸಿ ಅವರು ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ
  • ಈ ಮೈತ್ರಿಯನ್ನ ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ
  • 2017 ರ ವಿಧಾನಸಭಾ ಚುನಾವಣೆಯಲ್ಲಿ, ಎಐಎಂಐಎಂ 38 ಮತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು
UP Assembly election 2022: ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ನಿರಾಕರಿಸಿದ AIMIM  title=

ನವದೆಹಲಿ : ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಯನ್ನ ಎಐಎಂಐಎಂ ನಿರಾಕರಿಸಿದೆ. 

ಈ ಕುರಿತು ಮಾತನಾಡಿರುವ ಎಐಎಂಐಎಂ(AIMIM) ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ, ಉತ್ತರಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಖಿಲೇಶ್ ಯಾದವ್ ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಎಐಎಂಐಎಂ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ನಾವು ಎಂದೂ ಹೇಳಿಲ್ಲ.ಈ ಮೈತ್ರಿಯನ್ನ ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಾನು ಅಥವಾ ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರು ಈ ಕುರಿತು ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದ್ದರೆ ಸಿಗಲಿದೆ ಈ ಲಾಭ

ಹಿಂದಿನ ಚುನಾವಣೆ(Election)ಗಳಲ್ಲಿ ಎಸ್‌ಪಿ ಶೇ 20 ರಷ್ಟು ಮುಸ್ಲಿಂ ಮತಗಳನ್ನು ಪಡೆದಿದ್ದು ಅಧಿಕಾರಕ್ಕೆ ಬಂದಿದೆ. ಆದರೆ ಅವರು ಯಾವುದೇ ಮುಸ್ಲಿಮರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂದು ತಿಳಿಸಿಯಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav) ಯಾವುದೇ ಮುಸ್ಲಿಂ ಶಾಸಕರನ್ನು ಉತ್ತರಪ್ರದೇಶದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಒಪ್ಪಿದರೆ ಅವರು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಅಸದುದ್ದೀನ್ ಒವೈಸಿ ಶನಿವಾರ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಐಎಂಐಎಂ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಒವೈಸಿ(Asaduddin Owaisi) ಈ ಹಿಂದೆ ಹೇಳಿದ್ದರು. ಯುಪಿಯಲ್ಲಿ ಪ್ರಸ್ತುತ, 110 ವಿಧಾನಸಭಾ ಕ್ಷೇತ್ರಗಳಿವೆ, ಅಲ್ಲಿ ಮುಸ್ಲಿಂ ಮತದಾರರು ಶೇ. 30-39ರಷ್ಟಿದ್ದಾರೆ. 44 ಮತ ಕ್ಷೇತ್ರಗಳಲ್ಲಿ ಇವರು ಶೇ. 40-49 ಕ್ಕೆ ಏರಿದರೆ, 11 ಸ್ಥಾನಗಳಲ್ಲಿ, ಮುಸ್ಲಿಂ ಮತದಾರರು ಶೇ. 50-65ರಷ್ಟಿದ್ದಾರೆ.

ಒವೈಸಿ ಈ ಹಿಂದೆ ಲಕ್ನೋಗೆ ಭೇಟಿ ನೀಡಿದ್ದರು. ಈ ಸಾಯದಲ್ಲಿ ಇಲ್ಲಿನ ಸಣ್ಣ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದ ಅವರು, 'ಭಾಗೀದರಿ ಸಂಕಲ್ಪ ಮೋರ್ಚ'ದ ಭಾಗವಾಗಿದ್ದಾರೆ. ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷ (SBSP), ಶಿವಪಾಲ್ ಸಿಂಗ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಕ್ಷ (ಪಿಎಸ್‌ಪಿ), ಕೇಶವ್ ದೇವ್ ಮೌರ್ಯ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಪಟೇಲರ ಅಪ್ನಾ ದಳ.

ಇದನ್ನೂ ಓದಿ : LIC New Jeevan Shanti Policy: ಎಲ್ ಐಸಿಯ ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪಿಂಚಣಿ

2017 ರ ವಿಧಾನಸಭಾ ಚುನಾವಣೆಯಲ್ಲಿ, ಎಐಎಂಐಎಂ 38 ಮತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಆದರೆ ಒಂದು ಕ್ಷೇತ್ರವನ್ನು ಸಹ ಗೆಲ್ಲಲು ಸಾಧ್ಯವಾಗಲಿಲ್ಲ. ಉತ್ತರಪ್ರದೇಶದಲ್ಲಿ ನಡೆದ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಆದರೆ, ಓವೈಸಿ ಭಾರತೀಯ ಜನತಾ ಪಕ್ಷ (BJP) ವಿರುದ್ಧ ಪ್ರಚಾರ ನಡೆಸಿದರು.

2017 ರಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. 403 ಸದಸ್ಯರ ವಿಧಾನಸಭೆಯ ಚುನಾವಣೆ(Assembly Election)ಯಲ್ಲಿ ಪಕ್ಷವು ಶೇ 39.67 ರಷ್ಟು ಮತಗಳನ್ನು ಗಳಿಸಿದೆ. ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು, ಬಿಎಸ್‌ಪಿ 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

 

Trending News