Farmers Protest : ರೈತರೊಂದಿಗೆ ಚರ್ಚೆಗೆ ದಿನ ನಿಗದಿಪಡಿಸಿದ ಕೇಂದ್ರ ಸರ್ಕಾರ

ಡಿ. 30ರಂದು ರೈತರು ಮತ್ತು ಸರ್ಕಾರದ ಮಧ್ಯೆ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ರೈತರ ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯಲಿದೆ.   

Written by - Zee Kannada News Desk | Last Updated : Dec 28, 2020, 08:07 PM IST
  • ಡಿ. 30ರಂದು ರೈತರು ಮತ್ತು ಸರ್ಕಾರದ ಮಧ್ಯೆ ಮಾತುಕತೆ
  • ಮಾತುಕತೆಗೆ ಸಿದ್ಧ ಎಂದು ಪತ್ರದ ಮೂಲಕ ತಿಳಿಸಿದ ರೈತಸಂಘ
  • 2 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಭೆ
Farmers Protest : ರೈತರೊಂದಿಗೆ ಚರ್ಚೆಗೆ ದಿನ ನಿಗದಿಪಡಿಸಿದ ಕೇಂದ್ರ ಸರ್ಕಾರ title=
ಡಿ. 30ರಂದು ರೈತರು ಮತ್ತು ಸರ್ಕಾರದ ಮಧ್ಯೆ ನಡೆಯಲಿದೆ ಮಾತುಕತೆ (file photoe)

ನವದೆಹಲಿ : ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 33 ದಿನ ಪೂರೈಸಿದೆ.  ಈ ಮಧ್ಯೆ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ದಿನ ನಿಗದಿ ಮಾಡಿದೆ. ಡಿ. 30ರಂದು ರೈತರು ಮತ್ತು ಸರ್ಕಾರದ ಮಧ್ಯೆ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ರೈತರ ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯಲಿದೆ. 

ಇದಕ್ಕೂ ಮೊದಲು ಸರ್ಕಾರ ರೈತರನ್ನು (Farmer) ಮಾತುಕತೆಗೆ ಬರುವಂತೆ ಆಹ್ವಾನಿಸಿತ್ತು. ಈ ಬಗ್ಗೆ ಸಭೆ ನಡೆಸಿದ ರೈತಸಂಘಗಳು, ಡಿ.29ರಂದು 11 ಗಂಟೆಗೆ ಮೀಟಿಂಗ್ ನಿಗದಿಪಡಿಸುವಂತೆ ಪತ್ರ ಬರೆದಿತ್ತು. ಈ ಪತ್ರದ ಮೂಲಕ ತಮ್ಮ ಷರತ್ತುಗಳನ್ನು ಕೂಡಾ ರೈತಸಂಘ ಸರ್ಕಾರದ ಗಮನಕ್ಕೆ ತಂದಿದೆ ಎನ್ನಲಾಗಿದೆ. ಇದೀಗ ಕೊನೆಗೂ ಮಾತುಕತೆಗೆ ಸ್ಥಳ, ದಿನ ನಿಗದಿಯಾಗಿದೆ.

ALSO READ : 'ರೈತರ ಪ್ರತಿಭಟನೆಯನ್ನು 5 ನಿಮಿಷದಲ್ಲಿ ಕೊನೆಗೊಳಿಸಬಹುದು'

ರೈತರು ಸರ್ಕಾರದ ಮುಂದಿಟ್ಟಿರುವ ಷರತ್ತುಗಳು :
1. ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಮಾತುಕತೆ ವೇಳೆ ಚರ್ಚೆ ನಡೆಯಬೇಕು
2. ಕನಿಷ್ಟ ಬೆಂಬಲ ಬೆಲೆಯ ವಿಚಾರ ಮಾತುಕತೆಯ  ಅಜೆಂಡವಾಗಿರಬೇಕು
3. ದೆಹಲಿ ವಾಯು ಮಾಲಿನ್ಯ ತಡೆ ಸುಗ್ರೀವಾಜ್ಞೆ ವಿಧಿಸಿದ ಶಿಕ್ಷೆಯಿಂದ ರೈತರಿಗೆ ವಿನಾಯಿತಿ ನೀಡುವುದು
4.ಎಲೆಕ್ಟ್ರಿಸಿಟಿ ಅಮೆಂಡ್ ಮೆಂಟ್ ಬಿಲ್ ನಲ್ಲಿ ಬದಲಾವಣೆ ತರುವ ಬಗ್ಗೆಯೂ ಚರ್ಚೆ ನಡೆಯಬೇಕು

ರೈತರು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ನಿನ್ನೆ ನಡೆದ ಪ್ರಧಾನಮಂತ್ರಿ ನರೇಂದ್ರ  ಮೋದಿ ಅವರ (PM Narendra Modi) ಮನ್ ಕಿ ಬಾತ್ (Man Ki Baath) ಸಂದರ್ಭದಲ್ಲಿಯೂ ರೈತರು ಚಪ್ಪಾಳೆ ತಟ್ಟುವ ಮೂಲಕ ತಮ್ಮ  ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ರೈತ ನಾಯಕ ಗುರುನಾಮ್ ಸಿಂಗ್ ಚಡೂನಿ ಎಂಬವರು ತಮ್ಮ ಬೂಟಿನ ಮೂಲಕ ಚಪ್ಪಾಳೆ ತಟ್ಟಿದ್ದ ದೃಶ್ಯ ಕೂಡಾ ಕಂಡುಬಂದಿತ್ತು. ರೈತ ನಾಯಕನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ALSO READ : Farmers Protest: ಸಿಂಗು ಗಡಿಯಲ್ಲಿಂದು ರೈತರ ಉಪವಾಸ ಸತ್ಯಾಗ್ರಹ

ಸರ್ಕಾರ ಸೆಪ್ಟೆಂಬರ್ ನಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ಕಾಯ್ದೆಗಳು ರೈತರ ಹಿತಕ್ಕೆ ಮಾರಕವಾಗಿದ್ದು, ಇವುಗಳನ್ನು ಕೂಡಲೇ ರದ್ದುಗೊಳಿಸಬೇಕೆ ಎಂದು ಆಗ್ರಹಿಸಿ ರೈತರು ಪ್ರತಿಭಟನೆ ( Farmer Protest) ಆರಂಭಿಸಿದ್ದರು. ನ. 26ರಿಂದ ಆರಂಭವಾದ ಪ್ರತಿಭಟನೆ ಇತ್ತೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News