ಆರ್ಟಿಕಲ್ 370 ರದ್ದು: ಟ್ವೀಟ್ ಮೂಲಕ ಕಾಶ್ಮೀರದ ವಿರುದ್ಧ ವದಂತಿ ಹರಿಡಿದ್ದ ಪಾಕ್ ರಾಷ್ಟ್ರಪತಿಗೆ ಟ್ವಿಟ್ಟರ್ ನೋಟೀಸ್

ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಆರ್ಟಿಕಲ್ 370 ನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರದ ವಿರುದ್ಧ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ನಂಬಲಾಗಿದೆ.

Last Updated : Aug 26, 2019, 05:30 PM IST
ಆರ್ಟಿಕಲ್ 370 ರದ್ದು: ಟ್ವೀಟ್ ಮೂಲಕ ಕಾಶ್ಮೀರದ ವಿರುದ್ಧ ವದಂತಿ ಹರಿಡಿದ್ದ ಪಾಕ್ ರಾಷ್ಟ್ರಪತಿಗೆ  ಟ್ವಿಟ್ಟರ್ ನೋಟೀಸ್ title=
Photo Courtesy: Twitter

ನವದೆಹಲಿ: ಆರ್ಟಿಕಲ್ 370 ನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಆದರೆ ವಿಶ್ವದ ಹಲವು ರಾಷ್ಟ್ರಗಳು ಈ ವಿಚಾರವಾಗಿ ಭಾರತಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ವಿಶ್ವಸಂಸ್ಥೆ ಕೂಡ ಪಾಕಿಸ್ತಾನದ ಮನವಿಯನ್ನು ನಿರ್ಲಕ್ಷಿಸಿದೆ. ಈ ಎಲ್ಲದರ ಹೊರತಾಗಿಯೂ, ಪಾಕಿಸ್ತಾನದ ನಾಯಕರು ಸೋಷಿಯಲ್ ಮೀಡಿಯಾ ಮೂಲಕ ನಿರಂತರವಾಗಿ ಬೆಂಕಿ ಹರಡುವ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಕೂಡ ಇದಕ್ಕೆ ಹೊರತಾಗಿಲ್ಲ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್ ರಾಷ್ಟ್ರಪತಿ ಮಾಡಿದ್ದ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಟ್ವಿಟ್ಟರ್ ಅವರಿಗೆ ನೋಟೀಸ್ ನೀಡಿದೆ. 

370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮಿರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ಅರ್ಥದ ವೀಡಿಯೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಿದ್ದರು. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಆಲ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ಬಂದಿರುವುದಾಗಿ ಟ್ವೀಟರ್ ತಿಳಿಸಿದೆ.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರಿನ್ ಮಜಾರಿ ಈ ನೋಟಿಸ್ ಬಗ್ಗೆ ಟ್ವೀಟ್ ಮಾಡಿದ್ದು, ನೋಟೀಸ್ ಅನ್ನು ಟ್ವಿಟರ್ ಕಂಪನಿ ತಾರತಮ್ಯ ಎಂದು ಬಣ್ಣಿಸಿದ್ದಾರೆ. ಇದಲ್ಲದೆ, ಅವರು ಕಂಪನಿಯು ನೀಡಿರುವ ನೋಟಿಸ್‌ನ ಸ್ಕ್ರೀನ್ ಶಾಟ್ ಅನ್ನು ರಾಷ್ಟ್ರಪತಿ ಆರಿಫ್‌ಗೆ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ 370 ನೇ ವಿಧಿ ವಿರುದ್ಧ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ನಂಬಲಾಗಿದೆ.

ಆರಿಫ್ ಅಲ್ವಿ ಆಗಸ್ಟ್ 24 ರಂದು 1.30 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕರ್ಫ್ಯೂ, ನಿಷೇಧ, ಬ್ಲ್ಯಾಕೌಟ್ಸ್, ಟಿಯರ್‌ಗಾಸ್ ಮತ್ತು ಗುಂಡಿನ ಹೊರತಾಗಿಯೂ ಇದು ನಿನ್ನೆ ಶ್ರೀನಗರ. ಭಾರತದ ವಿರುದ್ಧದ ಕಾಶ್ಮೀರಿಗಳ ಅಸಮಾಧಾನವನ್ನು ನಿಗ್ರಹಿಸಲು ಯಾವುದೇ ದಬ್ಬಾಳಿಕೆ ಮತ್ತು ಕ್ರೂರತೆ ಸಾಧ್ಯವಿಲ್ಲ. ಅವರು ಯಾವುದೇ ವೆಚ್ಚದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಾರೆ. ದಯವಿಟ್ಟು ರಿಟ್ವೀಟ್ ಮಾಡಿ ಮತ್ತು ಜಗತ್ತಿಗೆ ತಿಳಿಸಿ ಇದು ಕಾಶ್ಮೀರದ ಪರಿಸ್ಥಿತಿ. ಆದ್ದರಿಂದ ಈ ಟ್ವೀಟ್ ಅನ್ನು ಸಾಧ್ಯವಾದಷ್ಟು ರಿಟ್ವೀಟ್ ಮಾಡಬೇಕು ಎಂದು ಬರೆದಿದ್ದಾರೆ. ಅವರ ಟ್ವೀಟ್ ಅನ್ನು ಇದುವರೆಗೆ 9300 ಬಾರಿ ರಿಟ್ವೀಟ್ ಮಾಡಲಾಗಿದೆ. ಅಲ್ಲದೆ, 16.9 ಸಾವಿರ ಲೈಕ್‌ಗಳು ಮತ್ತು 1600 ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ.

Trending News