ತಮಿಳುನಾಡಿನಲ್ಲಿ ಟಿಟಿವಿ ದಿನಕರನ್ ಗೆ ಸಿಕ್ತು 'ಉಡುಗೊರೆ ಪ್ಯಾಕ್' ಚಿಹ್ನೆ..!

 ಇಂದು ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಉಪ ಚುನಾವಣೆಗಾಗಿ ಟಿಟಿವಿ ದಿನಕರನ್ ಅವರ ಅಮ್ಮಾ ಮಕಲ್ ಮುನ್ನೆತ್ರ ಕಳಗಮ್ ಪಕ್ಷಕ್ಕೆ "ಉಡುಗೊರೆ ಪ್ಯಾಕ್" ಚಿಹ್ನೆಯನ್ನು ನೀಡಿದೆ. 

Last Updated : Mar 29, 2019, 02:56 PM IST
ತಮಿಳುನಾಡಿನಲ್ಲಿ ಟಿಟಿವಿ ದಿನಕರನ್ ಗೆ ಸಿಕ್ತು 'ಉಡುಗೊರೆ ಪ್ಯಾಕ್' ಚಿಹ್ನೆ..!  title=
Photo courtesy: Twitter

ನವದೆಹಲಿ: ಇಂದು ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಉಪ ಚುನಾವಣೆಗಾಗಿ ಟಿಟಿವಿ ಧಿನಕರನ್ ಅವರ ಅಮ್ಮಾ ಮಕಲ್ ಮುನ್ನೆತ್ರ ಕಳಗಮ್ ಪಕ್ಷಕ್ಕೆ "ಉಡುಗೊರೆ ಪ್ಯಾಕ್" ಚಿಹ್ನೆಯನ್ನು ನೀಡಿದೆ. 

ಸುಪ್ರೀಂ ಕೋರ್ಟ್ ಮಂಗಳವಾರವಷ್ಟೇ ಪ್ರೆಸ್ಸರ್ ಕುಕ್ಕರ್ ಚಿಹ್ನೆಯನ್ನು ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು, ಅಲ್ಲದೆ ಈಗ ಲಭ್ಯವಿರುವ ಚಿಹ್ನೆಗಳಲ್ಲಿ ಸಾಮಾನ್ಯವಾಗಿರುವ ಚಿಹ್ನೆಯನ್ನು ನೀಡಲು ಸೂಚನೆ ನೀಡಿತ್ತು.ಇನ್ನೊಂದೆಡೆಗೆ ದಿನಕರನ್ ಗುಂಪನ್ನು ಪ್ರತ್ಯೇಕ ಗುಂಪು ಎಂದು ಪರಿಗಣಿಸುವ ಬದಲು ಸ್ವತಂತ್ರ ಎಂದು ಪರಿಗಣಿಸುತ್ತದೆ ಎಂದು ಹೇಳಿತ್ತು. ಈಗ ಚುನಾವಣಾ ಆಯೋಗವು ದಿನಕರನ್ ಪಕ್ಷಕ್ಕೆ ಉಡುಗೊರೆ ಪ್ಯಾಕ್ ನೀಡಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ನೀಡಿರುವ ಚಿಹ್ನೆಗೆ ದಿನಕರನ್  ವಂಡರ್ ಫುಲ್ ಚಿಹ್ನೆ ಎಂದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಕಳೆದ ವರ್ಷ ದಿನಕರನ್ ಅವರು ಆರ್.ಕೆ ನಗರ್ ಉಪಚುನಾವಣೆಯಲ್ಲಿ ಪ್ರೆಸರ್ ಕುಕ್ಕರ್ ಚಿಹ್ನೆ ಅಡಿಯಲ್ಲಿ ಗೆಲುವು ಸಾಧಿಸಿದ್ದರು.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಿನಕರನ್ ಅವರ ಪಕ್ಷ 39 ರಲ್ಲಿ 38 ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದೆ. ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆ ಏಪ್ರಿಲ್ 17 ರಂದು ನಡೆಯಲಿದೆ. ಮೇ 23 ರಂದು ಅಂತಿಮ ಫಲಿತಾಂಶ ಹೊರಬಿಳಲಿದೆ.

Trending News