ಚಂಡೀಘಡ : ಭಾರತದಲ್ಲಿ, ಕೊರೊನಾವೈರಸ್ (Coronavirus) ಸೋಂಕು ಹೆಚ್ಚುತ್ತಲೇ ಇದೆ. ಈ ಮಧ್ಯೆ ಅನೇಕ ರಾಜ್ಯಗಳು ರೆಮ್ಡೆಸಿವಿರ್ ಇಂಜೆಕ್ಷನ್ (Remdesivir Injection) ಕೊರತೆಯನ್ನು ಕೂಡಾ ಎದುರಿಸುತ್ತಿವೆ. ಆದರೆ , ಪಂಜಾಬ್ನ ರೋಪರ್ನ ಸಲೆಂಪೂರ್ ಗ್ರಾಮದ ಬಳಿಯ ಭಾಖ್ಡಾ ಕಾಲುವೆಯಲ್ಲಿ ಸಾವಿರಾರು ರೆಮ್ಡೆಸಿವಿರ್ ಇಂಜೆಕ್ಷನ್ ದೊರೆತಿದೆ. ಇದರೊಂದಿಗೆ, ಸೇಫ್ ಪೆರಾಜೋನ್ ಆಂಟಿ ಬಯೋಟಿಕ್ ಇಂಜೆಕ್ಷನ್ ಕೂಡಾ ಸಿಕ್ಕಿದೆ.
ಈ ಇಂಜೆಕ್ಷನ್ ಗಳು ಅಸಲಿಯೋ ನಕಲಿಯೋ ದೃಢಪಟ್ಟಿಲ್ಲ :
ಸುಮಾರು 671 ರೆಮ್ಡೆಸಿವಿರ್ (Remdesivir ) ಚುಚ್ಚುಮದ್ದುಗಳು, 1456 ಕ್ಕೂ ಹೆಚ್ಚು ಆಂಟಿಬಯೋಟಿಕ್ ಚುಚ್ಚುಮದ್ದು ಸೇಫ್ ಪೆರಾಜೋನ್ ಮತ್ತು 849 ಇತರ ಚುಚ್ಚುಮದ್ದುಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಡ್ರಗ್ ಇನ್ಸ್ಪೆಕ್ಟರ್ ತೇಜಿಂದರ್ ಸಿಂಗ್ ತಿಳಿಸಿದ್ದಾರೆ. ನೀರಿನಲ್ಲಿದ್ದ ಕಾರಣ ಈ ಇಂಜೆಕ್ಷನ್ ಗಳ ಪ್ರಿಂಟ್ ಅಳಿಸಿಹೋಗಿವೆ. ಆರಂಭದಲ್ಲಿ, ಈ ಚುಚ್ಚುಮದ್ದುಗಳು ನಕಲಿಯಂತೆ ಕಂಡುಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಈ ಇಂಜೆಕ್ಷನ್ ಗಳು (Injection) ಅಸಲಿಯೋ ನಕಲಿಯೋ ಎಂಬುದು ಪತ್ತೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : PM Kisan : Rft ಸಹಿ ಮಾಡಿದ ರಾಜ್ಯ ಸರ್ಕಾರಗಳು; ಶೀಘ್ರದಲ್ಲೇ ರೈತರ ಖಾತೆಗೆ ಹಣ
ತನಿಖೆ ನಡೆಸುತ್ತಿರುವ ಪೊಲೀಸರು :
ಅಮರ್ ಉಜಲಾ ವರದಿಯ ಪ್ರಕಾರ, ಸಲೆಂಪೂರ್ ಗ್ರಾಮದ ನಿವಾಸಿ ಭಾಗ್ ಸಿಂಗ್, ಭಾಖ್ಡಾಕಾಲುವೆಯಲ್ಲಿ ಈ ಚುಚ್ಚುಮದ್ದಗಳನ್ನು ನೋಡಿ ಪೊಲೀಸ್ (Police) ಮತ್ತು ಆರೋಗ್ಯ ಇಲಾಖೆಗೆ (Health Department) ತಿಳಿಸಿದ್ದಾರೆ. ಇದಾದ ನಂತರ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಲಸಿಕೆಯ ಮೇಲೆ Not for sale ಎಂದು ಬರೆಯಲಾಗಿದೆ :
ವರದಿಯ ಪ್ರಕಾರ, ರೆಮೆಡೆಸಿವಿರ್ ಲಸಿಕೆಯ ಮೇಲೆ ಮಾನಿಫ್ಯಾಕ್ಚರಿಂಗ್ ತಾರೀಕು ಮಾರ್ಚ್ 2021 ಮತ್ತು ಎಕ್ಸ್ಪೈರಿ ಡೇಟ್ ನವೆಂಬರ್ 2021 ಎಂದು ನಮೂದಿಸಲಾಗಿದೆ. ಅಲ್ಲದೆ ಇದರ ಎಂಆರ್ಪಿ 5400 ರೂ ಎಂದಿದೆ. ಅದೇ ಸಮಯದಲ್ಲಿ, ಸೆಫೋಪೆರಾಜೋನ್ ಚುಚ್ಚುಮದ್ದಿನ ಮಾನಿಫ್ಯಾಕ್ಚರಿಂಗ್ ತಾರೀಕು ಏಪ್ರಿಲ್ 2021 ಮತ್ತು ಎಕ್ಸ್ಪೈರಿ ಡೇಟ್ ಮಾರ್ಚ್ 2023 ಎಂದಿದೆ. ಎಲ್ಲಾ ಲಸಿಕೆಗಳ ಮೇಲೆ ಗವರ್ನ್ ಮೆಂಟ್ ಸಪ್ಲೈ (Government supply) ನಾಟ್ ಫಾರ್ ಸೇಲ್ ಎಂದು ಬರೆಯಲಾಗಿದೆ.
ಇದನ್ನೂ ಓದಿ : MK Stalin : ತಮಿಳುನಾಡು 8ನೇ ಸಿಎಂ ಆಗಿ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.