ನವದೆಹಲಿ : ಮುಂಬರುವ ತಿಂಗಳಲ್ಲಿ ಅಂದರೆ ಜುಲೈನಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಬ್ಯಾಂಕಿಂಗ್ ಕೆಲಸದಿಂದ ಹಿಡಿದು ಸಾಮಾನ್ಯ ಜೀವನಕ್ಕೂ ಇದು ಪರಿಣಾಮ ಬೀರುತ್ತದೆ. ಈ ಪರಿಣಾಮವು ನಿಮ್ಮ ಜೇಬಿನ ಮೇಲೆ ನೆರವಾಗಿ ಪ್ರಭಾವ ಬೀರಲಿದೆ. ಹೌದು ನಿಮ್ಮ ಹಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳು ಆಗಸ್ಟ್ 1 ರಿಂದ ದೇಶದಲ್ಲಿ ಬದಲಾಗಲಿವೆ. ಬ್ಯಾಂಕ್ ಸಾಲ, ಪಿಎಂ ಕಿಸಾನ್ ಯೋಜನೆ, ಬ್ಯಾಂಕುಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಮುಂತಾದ ನಿಯಮಗಳಲ್ಲಿ ಬದಲಾವಣೆ ಇರುತ್ತದೆ. ನಿಯಮಗಳಲ್ಲಿನ ಬದಲಾವಣೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಯಮಗಳ ಬದಲಾವಣೆಯೊಂದಿಗೆ ಕಾರುಗಳು ಮತ್ತು ಬೈಕುಗಳನ್ನು ಖರೀದಿಸುವುದೂ ಸ್ವಲ್ಪ ಅಗ್ಗವಾಗಬಹುದು.
1. ಕಾರು ಮತ್ತು ಬೈಕು ಖರೀದಿ ಕೊಂಚ ಅಗ್ಗ:
ಮೋಟಾರು ವಾಹನ ವಿಮೆಯಲ್ಲಿನ ಬದಲಾವಣೆಗಳಿಂದಾಗಿ ಆಗಸ್ಟ್ 1 ರಿಂದ ಹೊಸ ಕಾರು ಅಥವಾ ಬೈಕು ಖರೀದಿಸುವುದು ಸ್ವಲ್ಪ ಅಗ್ಗವಾಗಬಹುದು. ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ಪ್ರಕಾರ ಹೊಸ ವಾಹನವನ್ನು ಖರೀದಿಸುವುದು ದೀರ್ಘಾವಧಿಯ ಪ್ಯಾಕೇಜ್ ನೀತಿಯಿಂದಾಗಿ ಜನರಿಗೆ ದುಬಾರಿಯಾಗಿದೆ. ಆಗಸ್ಟ್ 1 ರ ನಂತರ ನೀವು ವಾಹನ ವಿಮೆಗಾಗಿ ಕಡಿಮೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಐಆರ್ಡಿಎ 'ಮೋಟಾರ್ ಥರ್ಡ್ ಪಾರ್ಟಿ' ಮತ್ತು 'ಆನ್ ಡ್ಯಾಮೇಜ್ ಇನ್ಶುರೆನ್ಸ್' ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಾಗುವುದು. ಐಆರ್ಡಿಎಐ ಸೂಚನೆಗಳ ಪ್ರಕಾರ ಆಗಸ್ಟ್ 1 ರಿಂದ ಹೊಸ ಕಾರು ಖರೀದಿದಾರರು 3 ಮತ್ತು 5 ವರ್ಷಗಳವರೆಗೆ ವಿಮೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದಿಲ್ಲ.
ಈಗ ನಿಮ್ಮ ಬ್ಯಾಂಕಿಂಗ್ ಕೆಲಸವನ್ನು ವಾಟ್ಸಾಪ್ನಿಂದ ಸುಲಭವಾಗಿ ಪೂರ್ಣಗೊಳಿಸಿ
2. ಮಿನಿಮಂ ಬ್ಯಾಲೆನ್ಸ್ ಮತ್ತು ವಹಿವಾಟು ನಿಯಮಗಳಲ್ಲಿ ಬದಲಾವಣೆ:
ನಗದು ಒಳಹರಿವು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು, ಹಲವಾರು ಬ್ಯಾಂಕುಗಳು ಆಗಸ್ಟ್ 1 ರಿಂದ ಕನಿಷ್ಠ ಬಾಕಿ ವಿಧಿಸುವುದಾಗಿ ಘೋಷಿಸಿವೆ. ಬ್ಯಾಂಕುಗಳಲ್ಲಿ ಮೂರು ಉಚಿತ ವಹಿವಾಟಿನ ನಂತರವೂ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಆರ್ಬಿಎಲ್ ಬ್ಯಾಂಕ್ನಲ್ಲಿ ಸಂಗ್ರಹಿಸಲಾಗುವುದು. ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಉಳಿತಾಯ ಖಾತೆ ಹೊಂದಿರುವವರು ಮೆಟ್ರೊ ಮತ್ತು ನಗರ ಪ್ರದೇಶಗಳಲ್ಲಿ ಕನಿಷ್ಠ 2,000 ರೂ. ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ, ಅದು ಮೊದಲು 1,500 ರೂ. ಮಿನಿಮಂ ಬ್ಯಾಲೆನ್ಸ್ ಬ್ಯಾಂಕ್ ಮೆಟ್ರೊ ಮತ್ತು ನಗರ ಪ್ರದೇಶಗಳಿಗೆ 75 ರೂ., ಅರೆ ನಗರ ಪ್ರದೇಶಗಳಿಗೆ 50 ರೂ. ಮತ್ತು ಗ್ರಾಮೀಣ ಪ್ರದೇಶಗಳಿಗೆ 20 ರೂ. ಇರಲಿದೆ.
3. ಉಳಿತಾಯ ಖಾತೆಗಳಲ್ಲಿನ ನಿಯಮಗಳನ್ನು ಬದಲಿಸಿದ ಆರ್ಬಿಐ :
ಆರ್ಬಿಐ (RBI) ಇತ್ತೀಚೆಗೆ ಉಳಿತಾಯ ಖಾತೆಯ ಬಡ್ಡಿದರಗಳನ್ನು ಬದಲಾಯಿಸಿದೆ. ಹೊಸ ದರಗಳು ಆಗಸ್ಟ್ 1 ರಿಂದ ಅನ್ವಯವಾಗುತ್ತವೆ. ಈಗ ನೀವು ಒಂದು ಲಕ್ಷ ರೂಪಾಯಿಗಳವರೆಗೆ ಉಳಿತಾಯ ಖಾತೆ ಠೇವಣಿಗಳಿಗೆ ವಾರ್ಷಿಕವಾಗಿ 4.75 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ 1-10 ಲಕ್ಷ ರೂ.ವರೆಗಿನ ಠೇವಣಿಗಳ ಮೇಲೆ 6 ಪ್ರತಿಶತ ಮತ್ತು 10 ಲಕ್ಷ ರೂ.ಗಳಿಂದ 5 ಕೋಟಿ ರೂ.ವರೆಗಿನ ಠೇವಣಿಗಳ ಮೇಲೆ ಶೇ .6.75 ರಷ್ಟು ಬಡ್ಡಿ ನೀಡಲಾಗುವುದು. ಡೆಬಿಟ್ ಕಾರ್ಡ್ (Debit Card) ಕಳೆದುಹೋದರೆ ಅಥವಾ ಹಾನಿಗೊಳಗಾದರೆ 200 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಈಗ ನೀವು ಟೈಟಾನಿಯಂ ಡೆಬಿಟ್ ಕಾರ್ಡ್ಗಾಗಿ ವಾರ್ಷಿಕವಾಗಿ 250 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಗ್ರಾಹಕರು ಈಗ ಎಟಿಎಂನಿಂದ ತಿಂಗಳಿಗೆ 5 ಬಾರಿ ಉಚಿತವಾಗಿ ಹಣವನ್ನು ಹಿಂಪಡೆಯಬಹುದು.
ಎಸ್ಬಿಐ ಖಾತೆದಾರರಿಗೆ ಪ್ರಮುಖ ಸುದ್ದಿ: ಬದಲಾದ ATM ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ
4. ಇ-ಕಾಮರ್ಸ್ ಕಂಪನಿಗಳ ನಿಯಮಗಳಲ್ಲಿ ಬದಲಾವಣೆ:
ಆಗಸ್ಟ್ 1 ರಿಂದ, ಇ-ಕಾಮರ್ಸ್ (E-commerce) ಕಂಪನಿಗಳಿಂದ ಉತ್ಪನ್ನದ ಮೂಲವನ್ನು ಹೇಳುವುದು ಅಗತ್ಯವಾಗಿರುತ್ತದೆ. ಉತ್ಪನ್ನ ಎಲ್ಲಿದೆ ಯಾರು ಮಾಡಿದ್ದಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಆದಾಗ್ಯೂ ಹೆಚ್ಚಿನ ಕಂಪನಿಗಳು ಈಗಾಗಲೇ ಈ ಮಾಹಿತಿಯನ್ನು ನೀಡಲು ಪ್ರಾರಂಭಿಸಿವೆ. ಇವುಗಳಲ್ಲಿ ಫ್ಲಿಪ್ಕಾರ್ಟ್, ಮಿಂತ್ರಾ ಮತ್ತು ಸ್ನ್ಯಾಪ್ಡೀಲ್ ಮುಂತಾದ ಕಂಪನಿಗಳು ಸೇರಿವೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ (ಡಿಪಿಐಐಟಿ) ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಹೊಸ ಉತ್ಪನ್ನ ಪಟ್ಟಿಗಳ ಮೂಲದ ದೇಶವನ್ನು ಆಗಸ್ಟ್ 1 ರೊಳಗೆ ನವೀಕರಿಸಲು ಕೇಳಿದೆ. ಮೇಕ್ ಇನ್ ಇಂಡಿಯಾ ಉತ್ಪನ್ನವನ್ನು ಉತ್ತೇಜಿಸಲು ಇದನ್ನು ಮಾಡಲಾಗುತ್ತಿದೆ.
5. ಪಿಎಂ-ಕಿಸಾನ್ನ ಆರನೇ ಕಂತು:
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM KISAN SAMMAN NIDHI Yoajana)ಯಡಿ ರೈತರಿಗೆ ಆರನೇ ಕಂತನ್ನು ಬಿಡುಗಡೆ ಮಾಡಲಾಗುವುದು. ಆಗಸ್ಟ್ 1 ರಿಂದ ಮೋದಿ ಸರ್ಕಾರ ಆರನೇ ಕಂತಿನ 2000 ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಯೋಜನೆಯ ಪ್ರಾರಂಭದಿಂದಲೂ ದೇಶದ 9.85 ಕೋಟಿ ರೈತರಿಗೆ ಸರ್ಕಾರ ನಗದು ಸೌಲಭ್ಯಗಳನ್ನು ನೀಡಿದೆ. ಯೋಜನೆಯ ಐದನೇ ಕಂತು 1 ಏಪ್ರಿಲ್ 2020 ರಂದು ಬಿಡುಗಡೆಯಾಯಿತು.
6. ಎಲ್ಪಿಜಿ ದರ:
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಎಲ್ಪಿಜಿ (LPG) ಸಿಲಿಂಡರ್ ಮತ್ತು ವಾಯು ಇಂಧನದ ಹೊಸ ಬೆಲೆಗಳನ್ನು ಪ್ರಕಟಿಸುತ್ತವೆ. ಕಳೆದ ಕೆಲವು ತಿಂಗಳುಗಳಿಂದ ಬೆಲೆಗಳು ಹೆಚ್ಚುತ್ತಿವೆ. ಆಗಸ್ಟ್ 1 ರಂದು ಎಲ್ಪಿಜಿ ಬೆಲೆಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.