ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವಿಲ್ಲ- 'ಸುಪ್ರಿಂ' ಹೇಳಿಕೆಗೆ ಕೇಂದ್ರದ ಉತ್ತರ

ಇತ್ತೀಚಿಗೆ ಮಾನವ ಹಕ್ಕು ಹೋರಾಟಗಾರ ಬಂಧಿಸಿರುವ ಹಿನ್ನಲೆಯಲ್ಲಿ  ಸುಪ್ರಿಂಕೋರ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಗೃಹ ಸಚಿವ ರಾಜನಾಥ್ ಸಿಂಗ್ "ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವನ್ನು  ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

Last Updated : Sep 2, 2018, 12:06 PM IST
ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವಿಲ್ಲ- 'ಸುಪ್ರಿಂ' ಹೇಳಿಕೆಗೆ ಕೇಂದ್ರದ ಉತ್ತರ title=

ಲಖನೌ: ಇತ್ತೀಚಿಗೆ ಮಾನವ ಹಕ್ಕು ಹೋರಾಟಗಾರ ಬಂಧಿಸಿರುವ ಹಿನ್ನಲೆಯಲ್ಲಿ  ಸುಪ್ರಿಂಕೋರ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಗೃಹ ಸಚಿವ ರಾಜನಾಥ್ ಸಿಂಗ್ "ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವನ್ನು  ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಇತ್ತೀಚಿಗೆ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದಕ್ಕೆ "ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ,ಒಂದು ವೇಳೆ ಇದಕ್ಕೆ ಆಸ್ಪದ ನಿಡದಿದ್ದರೆ ಪ್ರೆಸರ್ ಕುಕ್ಕರ್ ಸಹಿತ ಸಿಡಿದುಹೋಗುತ್ತದೆ"ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈ ಸುಪ್ರಿಂ ಹೇಳಿಕೆ ಹಿನ್ನಲೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ "ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ ಎನ್ನುವುದನ್ನು ನಾನು ಸ್ಪಷ್ಟಪಡಿಸುತ್ತೇನೆ.ಎಲ್ಲರಿಗೆ  ಮಾತನಾಡುವ ಹಕ್ಕಿದೆ ಪ್ರಜಪ್ರಬುತ್ವದ ಅಡಿಯಲ್ಲಿ ಅವರು ತಮಗಿಚ್ಚೆ ಬಂದಿದ್ದನ್ನು ಮಾಡಬಹುದು, ಆದರೆ ಯಾರು ಕೂಡ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು" ಎಂದು ಅವರು ತಿಳಿಸಿದರು. 

Trending News