ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ ಮುಂದುವರೆದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಭಂದ ವಿಧಿಸಲಾಗುವುದು ಎಂದು ಹಿರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಭಾರತಡ ಹಲವಡೆ ದಟ್ಟವಾದ ಹೊಂಜು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಈಗ ಅಧಿಕಾರಿಗಳು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.ಪ್ರತಿವರ್ಷ ಚಳಿಗಾಲ ಬಂದಾಗ ಉತ್ತರ ಭಾರತದ ಭಾಗಗಳಲ್ಲಿ ರೈತರು ಬೆಳೆಗಳನ್ನು ಸುಡುತ್ತಾರೆ. ಇದರಿಂದಾಗಿ ಹೊಗೆಯೊಂದಿಗೆ ಮಂಜು ಸೇರಿ ಅದು ತೀವ್ರವಾದ ಉಸಿರಾಟದ ತೊಂದರೆಯನ್ನು ಸೃಷ್ಟಿಸುತ್ತದೆ.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ಭೂರೆ ಲಾಲ್ " ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗದಿರಲಿ ಎಂದು ಆಶಿಸೋಣ, ಒಂದು ವೇಳೆ ಮಾಲಿನ್ಯದಲ್ಲಿ ತೀವ್ರ ಹೆಚ್ಚಳ ಕಂಡುಬಂದಲ್ಲಿ ಖಾಸಗಿ ವಾಹನ ಓಡಾಟಕ್ಕೆ ನಿರ್ಭಂದ ವಿಧಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಮಾಲಿನ್ಯದ ವಿಚಾರವಾಗಿ ಸಮಿತಿಯೊಂದು ತಮಗೆ ಸಲಹೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.