ನವದೆಹಲಿ: ಇಡೀ ವಿಶ್ವದಲ್ಲಿ ಕೊರೊನಾ ಮಹಾಮಾರಿಗೆ ಅತ್ಯಂತ ಹೆಚ್ಚು ಪ್ರಭಾವಿತವಾದ ದೇಶವೆಂದರೆ ಅಂದು ಅಮೇರಿಕಾ. ಇಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಸುಮಾರು ಒಂದು ಲಕ್ಷಕ್ಕೆ ತಲುಪಿದೆ. ಅಮೇರಿಕನ್ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿದವರಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ. COVID-19 ನಿಂದ ಸಾವನ್ನಪ್ಪಿದ 1000 ಜನರ ಹೆಸರನ್ನು ಭಾನುವಾರ ಪತ್ರಿಕೆಯಲ್ಲಿ ಮುಖಪುಟದಲ್ಲಿ ಮುದ್ರಿಸಲಾಗಿದೆ.
ಇದಕ್ಕಾಗಿ ನ್ಯೂಯಾರ್ಕ್ ಟೈಮ್ಸ್ ಒಂದು ಶೀರ್ಷಿಕೆಯನ್ನು ನೀಡಿದೆ- 'U.S. DEATHS NEAR 100,000, AN INCALCULABLE LOSS ' (ಯುಎಸ್ನಲ್ಲಿ ಸುಮಾರು 100,000 ಸಾವುಗಳು, ಹಾನಿಗೆ ಲೆಕ್ಕವಿಲ್ಲ). ಈ ಶೀರ್ಷಿಕೆ ಬರೆದು ಅದರ ಕೆಳಗಡೆ - 'They were not simply names in a list, they were us' (ಇದು ಕೇವಲ ಅವರ ಪಟ್ಟಿಯಲ್ಲ, ಅವರು ನಮ್ಮವರು).
ಪತ್ರಿಕೆಯಲ್ಲಿ ಪ್ರಕಟವಾದ 1,000 ಜನ ಮೃತಪಟ್ಟ ದುರ್ದೈವಿಗಳ ಹೆಸರುಗಳು ಅಮೆರಿಕದಲ್ಲಿ ಮೃತಪಟ್ಟ ಒಟ್ಟು ದುರ್ದೈವಿಗಳ ಶೇ.1ರಷ್ಟಿದೆ. ಇಲ್ಲಿ ವಿಶೇಷವೆಂದರೆ ಯಾವುದೇ ಜಾಹೀರಾತು, ಗ್ರಾಫಿಕ್ಸ್ ಅಥವಾ ಸುದ್ದಿಗಳನ್ನು ಮೊದಲ ಪುಟದಲ್ಲಿ ಪ್ರಕಟಿಸಲಾಗಿಲ್ಲ. ಗೌರವ ಸಲ್ಲಿಸಲು, ಈ 1000 ಮೃತಪಟ್ಟವರ ಹೆಸರು ಹಾಗೂ ಮಾಹಿತಿಯನ್ನು ಸಂತಾಪ ಸೂಚಕ ಸಂದೇಶ ಎಂಬಂತೆ ಪ್ರಕಟಿಸಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ಗ್ರಾಫಿಕ್ಸ್ ಡೆಸ್ಕ್ನ ಸಹಾಯಕ ಸಂಪಾದಕಿ ಸಿಮೋನೆ ಲ್ಯಾಂಡನ್, ಇಷ್ಟೊಂದು ಹೆಚ್ಚಿನ ಸಂಖ್ಯೆಯ ಜನರು ಹೇಗೆ ಮೃತಪಟ್ಟರು ಮತ್ತು ಅವರು ಯಾರು ಎಂಬುದನ್ನು ತೋರಿಸಲು ಬಯಸಿದ್ದರು. ಈ ಕುರಿತು ಹೇಳುವ ಅವರು- 'ನಾವು ಒಂದು ಲಕ್ಷ ಅಂಕಿಯನ್ನು ಸಮೀಪಿಸುತ್ತಿದ್ದೇವೆ ಎಂಬುದು ನಮಗೆ ತಿಳಿದಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯನ್ನು ಲೆಕ್ಕಹಾಕಲು ಒಂದು ಪದ್ಧತಿ ಇದೆ ಎಂಬುದು ನಮಗೆ ತಿಳಿದಿತ್ತು' ಎಂದಿದ್ದಾರೆ.
ಅವರು 100,000 ಚುಕ್ಕೆಗಳನ್ನು ಇಡುವ ಬದಲು ಜನರ ಹೆಸರನ್ನು ಬರೆಯಲು ಆಯ್ಕೆ ಮಾಡಿಕೊಂಡರು, ಏಕೆಂದರೆ ಈ ಜನರು ಯಾರು ಮತ್ತು ಅವರು ದೇಶಕ್ಕೆ ಎಷ್ಟು ಮೌಲ್ಯಯುತವಾಗಿದ್ದರು ಎಂಬುದು ಯಾರೂ ತಿಳಿಯಲು ಸಾಧ್ಯವಿಲ್ಲ
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಅಂಶಗಳ ಪ್ರಕಾರ ಯುಎಸ್ನಲ್ಲಿ ಶನಿವಾರ COVID-19 ರಿಂದ ಕಳೆದ 24 ಗಂಟೆಗಳಲ್ಲಿ 1,127 ಸಾವುಸಂಭವಿಸಿದ್ದು, ಒಟ್ಟು ಸಾವುಗಳ ಸಂಖ್ಯೆ 97,048 ಕ್ಕೆ ತಲುಪಿದೆ. ದೇಶದಲ್ಲಿ ಇದುವರೆಗೆ ಒಟ್ಟು 1,621,658 ಜನರು ಈ ಮಾರಕ ಸೋಂಕಿಗೆ ಒಳಗಾಗಿದ್ದಾರೆ.