ಚೆನ್ನೈನಲ್ಲಿ ಮತ್ತೊಮ್ಮೆ ಯಾಕೆ ಸಂಪೂರ್ಣ ಲಾಕ್ ಡೌನ್ ವಿಧಿಸಬಾರದು ?-ಮದ್ರಾಸ್ ಹೈಕೋರ್ಟ್

ಚೆನ್ನೈನಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ನಗರ ಮತ್ತು ಅದರ ಉಪನಗರಗಳಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಆದ್ದರಿಂದ ಸ್ವಲ್ಪ ಸಮಯದವರೆಗೆ ಸಂಪೂರ್ಣ ಲಾಕ್‌ಡೌನ್ ಏಕೆ ಜಾರಿಗೆ ತರಲು ಸಾಧ್ಯವಿಲ್ಲ? ಎಂದು ಮದ್ರಾಸ್ ಹೈಕೋರ್ಟ್ (Madras High Court ) ಗುರುವಾರ  ಸರ್ಕಾರವನ್ನು ಪ್ರಶ್ನಿಸಿದೆ.

Last Updated : Jun 11, 2020, 05:43 PM IST
ಚೆನ್ನೈನಲ್ಲಿ ಮತ್ತೊಮ್ಮೆ ಯಾಕೆ ಸಂಪೂರ್ಣ ಲಾಕ್ ಡೌನ್ ವಿಧಿಸಬಾರದು ?-ಮದ್ರಾಸ್ ಹೈಕೋರ್ಟ್  title=
file photo

ನವದೆಹಲಿ: ಚೆನ್ನೈನಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ನಗರ ಮತ್ತು ಅದರ ಉಪನಗರಗಳಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಆದ್ದರಿಂದ ಸ್ವಲ್ಪ ಸಮಯದವರೆಗೆ ಸಂಪೂರ್ಣ ಲಾಕ್‌ಡೌನ್ ಏಕೆ ಜಾರಿಗೆ ತರಲು ಸಾಧ್ಯವಿಲ್ಲ? ಎಂದು ಮದ್ರಾಸ್ ಹೈಕೋರ್ಟ್ (Madras High Court ) ಗುರುವಾರ  ಸರ್ಕಾರವನ್ನು ಪ್ರಶ್ನಿಸಿದೆ.

ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿಯೂ, ಪ್ರಕರಣಗಳ ಸಂಖ್ಯೆ "ತೀವ್ರವಾಗಿ ಏರುತ್ತಿದೆ ಮತ್ತು ಪರಿಸ್ಥಿತಿ ಆತಂಕಕಾರಿಯಾಗಿದೆ", ವಿಶೇಷವಾಗಿ ಮಹಾನಗರ ಮತ್ತು ಅದರ ಹೊರವಲಯದಲ್ಲಿ, ಎಂದು ನ್ಯಾಯಮೂರ್ತಿಗಳಾದ ವಿನೀತ್ ಕೊಥಾರಿ ಮತ್ತು ಆರ್ ಸುರೇಶ್ ಕುಮಾರ್ ಅವರ ನ್ಯಾಯಪೀಠ  ಹೇಳಿದೆ.

'ಆದ್ದರಿಂದ, ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ಹರಡುವಿಕೆಯನ್ನು ತಡೆಗಟ್ಟಲು ಸಂಪೂರ್ಣ ಲಾಕ್ ಡೌನ್ ಅಥವಾ ಕರ್ಫ್ಯೂ ಒಳಗೊಂಡ ಯಾವುದೇ ವಿಶೇಷ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ" ಎಂದು ನ್ಯಾಯಾಧೀಶರು ವರ್ಚುವಲ್ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಾದಕ ವಿ.ಜಯಪ್ರಕಾಶ್ ನಾರಾಯಣ್ ಅವರನ್ನು ಕೇಳಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಅವರು ರಾಜ್ಯ ಮತ್ತು ನಗರದ ಪ್ರಜೆಗಳಾಗಿ ಲಾಕ್ ಡೌನ್ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ ಮತ್ತು ಯಾವುದೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆಯನ್ನು ಪ್ರಾರಂಭಿಸುತ್ತಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಸುಮಾರು 26,000 ಪ್ರಕರಣಗಳೊಂದಿಗೆ, ಚೆನ್ನೈ ರಾಜ್ಯದ ಶೇಕಡಾ 70 ಕ್ಕಿಂತಲೂ ಹೆಚ್ಚಿನದಾಗಿದೆ ಮತ್ತು ಹೆಚ್ಚುತ್ತಿರುವ ಸಾವುಗಳು (326) ನ್ಯಾಯಾಲಯವನ್ನು ಚಿಂತೆಗೀಡು ಮಾಡಿದೆ.

 

Trending News