ಈ ರಾಜ್ಯದ ಸರ್ಕಾರಿ ನೌಕರರಿಗೆ ಬಡ್ತಿ ನಿಷೇಧಿಸಿದ ಹೈಕೋರ್ಟ್!

ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶ ಡಾ.ಎಸ್.ಎನ್.ಪಾಠಕ್ ಅವರ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಪೊಲೀಸ್ ಇಲಾಖೆಯ ಇತ್ತೀಚಿನ ನಿರ್ಧಾರದಿಂದ ಸಾಮಾನ್ಯ ವರ್ಗದ ನೌಕರರ ಬಡ್ತಿ ಪಡೆಯುವ ಅವಕಾಶಕ್ಕೆ ಅಡ್ಡಿಯಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ವಕೀಲ ದಿವಾಕರ್ ಉಪಾಧ್ಯಾಯ ವಾದ ಮಂಡಿಸಿದರು

Written by - Bhavishya Shetty | Last Updated : Aug 5, 2022, 09:47 AM IST
  • ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದ ಕೋರ್ಟ್‌
  • ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶರಿಂದ ಮಹತ್ವದ ಆದೇಶ
  • ಈ ಹಿಂದೆ 2020ರಲ್ಲಿ ಆದೇಶ ಹೊರಡಿಸಿದ್ದ ಜಾರ್ಖಂಡ್‌ ಸರ್ಕಾರ
ಈ ರಾಜ್ಯದ ಸರ್ಕಾರಿ ನೌಕರರಿಗೆ ಬಡ್ತಿ ನಿಷೇಧಿಸಿದ ಹೈಕೋರ್ಟ್! title=
High Court

ಜಾರ್ಖಂಡ್‌ನ ಸರ್ಕಾರಿ ಅಧಿಕಾರಿಗಳಿಗೆ ಅಲ್ಲಿನ ಹೈಕೋರ್ಟ್‌ ಶಾಕ್‌ ನ್ಯೂಸ್‌ ಒಂದನ್ನು ನೀಡಿದೆ. ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಬಡ್ತಿ ನೀಡುವುದನ್ನು ನಿಷೇಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ಈ ಆದೇಶವು ತಕ್ಷಣವೇ ಜಾರಿಗೆ ಬರುವಂತೆ ಸೂಚಿಸಿದೆ. ಸದ್ಯ ರಾಜ್ಯದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗೆ ಬಡ್ತಿ ಸಿಗುವುದಿಲ್ಲ.

ಇದನ್ನೂ ಓದಿ: ಇನ್ಮುಂದೆ ನೀವು ಡ್ರೈವಿಂಗ್ ಲೈಸನ್ಸ್ ಗಾಗಿ ಆರ್‌ಟಿಒ ಬಳಿ ಡ್ರೈವಿಂಗ್ ಟೆಸ್ಟ್ ಮಾಡುವಂತಿಲ್ಲ...!

ಬಡ್ತಿಗೆ ತಡೆ ನೀಡಿ ಹೈಕೋರ್ಟ್ ಆದೇಶ: 
ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶ ಡಾ.ಎಸ್.ಎನ್.ಪಾಠಕ್ ಅವರ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಪೊಲೀಸ್ ಇಲಾಖೆಯ ಇತ್ತೀಚಿನ ನಿರ್ಧಾರದಿಂದ ಸಾಮಾನ್ಯ ವರ್ಗದ ನೌಕರರ ಬಡ್ತಿ ಪಡೆಯುವ ಅವಕಾಶಕ್ಕೆ ಅಡ್ಡಿಯಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ವಕೀಲ ದಿವಾಕರ್ ಉಪಾಧ್ಯಾಯ ವಾದ ಮಂಡಿಸಿದರು.

ಈಗ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲಿಯವರೆಗೆ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಬಡ್ತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 2020 ರಲ್ಲಿ ಸರ್ಕಾರವು ಸರ್ಕಾರಿ ಅಧಿಕಾರಿಗಳ ಬಡ್ತಿಯನ್ನು ನಿಷೇಧಿಸಿತ್ತು.  ಇದಾದ ಬಳಿಕ ಈ ವರ್ಷದ ಜನವರಿಯಲ್ಲಿ ಹೈಕೋರ್ಟ್‌ ಬಡ್ತಿ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಎಲ್ಲ ಇಲಾಖೆಗಳಲ್ಲಿ ಸಮರ್ಥ ಅಧಿಕಾರಿಗಳಿಗೆ ಬಡ್ತಿ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು. 23 ಜೂನ್ 2022 ರಂದು, ASI ಯನ್ನು SI ಆಗಿ ಬಡ್ತಿ ನೀಡುವುದಾಗಿ ಜಾರ್ಖಂಡ್‌ನ DGP ಆದೇಶವನ್ನು ಹೊರಡಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಕೇಡರ್ ಸಾಮಾನ್ಯ ವರ್ಗದಲ್ಲೂ ಬಡ್ತಿ ಪಡೆಯಬಹುದು ಎಂದು ಈ ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ: CWG 2022:ಭಾರತಕ್ಕೆ ಮತ್ತೊಂದು ಪದಕ: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಬ್ಬಂದಿ ಇಲಾಖೆ ಕಾರ್ಯದರ್ಶಿಯ ಆದೇಶಕ್ಕೆ ತಡೆ ನೀಡಿದೆ. ಇದರೊಂದಿಗೆ ಡಿಜಿಪಿಯಿಂದ ಉತ್ತರ ಕೇಳಲಾಗಿದೆ. ಕಳೆದ ತಿಂಗಳಷ್ಟೇ ಸರ್ಕಾರಿ ನೌಕರರ ಬಡ್ತಿಯನ್ನು ಎರಡು ವರ್ಷಗಳ ಕಾಲ ನಿಷೇಧಿಸಿ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿರುವುದು ಗಮನಾರ್ಹ. ಆದರೆ ಇದೀಗ ಮತ್ತೊಮ್ಮೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಆಗಸ್ಟ್ 18 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News