ನವ ದೆಹಲಿ: ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗಾಗಿ ಡಿಸೆಂಬರ್ 4 ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಕಾಂಗ್ರೇಸ್ ನಲ್ಲಿ "ರಾಹುಲ್ ಯುಗ" ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಇದುವರೆಗೂ ಬೇರೆ ಯಾವ ಅಭ್ಯರ್ಥಿಯು ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ಇಂದು ನಾಮಪತ್ರ ವಾಪಸಾತಿಗೆ ಕೊನೆಯ ದಿನಾಂಕವಾಗಿದೆ. ಇಂದು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆಂದು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಈಗಾಗಲೇ 89 ನಾಮಪತ್ರಗಳನ್ನು ಕಾನೂನುಬದ್ಧವಾಗಿ ಪರಿಗಣಿಸಲಾಗಿದೆ.
ಕಾಂಗ್ರೆಸ್ನ ಕೇಂದ್ರ ಚುನಾವಣಾ ಪ್ರಾಧಿಕಾರ (ಸಿಇಎ) ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಮತ್ತು ಸಿಇಎ ಸದಸ್ಯ ಮಧುಸೂದನ್ ಮಿಸ್ತ್ರಿ ಮತ್ತು ಭುವನೇಶ್ವರ ಕಲಿತಾ ಅವರು ರಾಹುಲ್ ಮಾತ್ರ ಉನ್ನತ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಘೋಷಿಸುತ್ತಾರೆ. ರಾಹುಲ್ ಗಾಂಧಿಯವರ ಪ್ರಮಾಣಪತ್ರವನ್ನು ಸೋನಿಯಾ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಡಿಸೆಂಬರ್ 16 ರಂದು ಹಸ್ತಾಂತರಿಸಲಾಗುವುದು ಎಂದು ರಾಮಚಂದ್ರನ್ ಹೇಳಿದರು. ಸೋನಿಯಾ ಗಾಂಧಿ ಅವರು 132 ವರ್ಷದ ಪಾರ್ಟಿಯ ಅಧಿಕಾರವನ್ನು ತನ್ನ ಮಗನಿಗೆ ಡಿಸೆಂಬರ್ 16 ರಂದು ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ದೇಶದ ನಾಯಕರನ್ನು ಭೇಟಿಯಾಗಲಿದ್ದಾರೆ.
ತಲೆಮಾರು ಬದಲಾವಣೆಗಳು
ರಾಹುಲ್ ಗಾಂಧಿಯವರ ಪಟ್ಟಾಭಿಷೇಕದ ಮೂಲಕ, ರಾಹುಲ್ ತಾಯಿ ಹಾಗೂ ದೀರ್ಘಕಾಲದ ವರೆಗೆ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ಔಪಚಾರಿಕವಾಗಿ ರಾಹುಲ್ ಅವರನ್ನು ಅಧಿಕಾರಕ್ಕೆ ತರುವುದರಿಂದ ಪಕ್ಷದಲ್ಲಿ ಒಂದು ಪೀಳಿಗೆ ಬದಲಾಗುತ್ತದೆ. ಈ ಬದಲಾವಣೆಯು ದೇಶದ ಹಳೆಯ ಪಕ್ಷದ ಹೊಸ ಯುಗವನ್ನು ಪ್ರಚೋದಿಸುತ್ತದೆ. ಸ್ವಾತಂತ್ರದ ನಂತರ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸಿದೆ. ನೆಹರು-ಗಾಂಧಿ ಕುಟುಂಬದ 47 ವರ್ಷದ ರಾಹುಲ್ ಇನ್ನು ಕಾಂಗ್ರೇಸ್ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
5 ರಾಜ್ಯಗಳಲ್ಲಿ ಕಾಂಗ್ರೇಸ್ ಅಧಿಕಾರ
ಇಡೀ ದೇಶವನ್ನು ನಿಯಂತ್ರಿಸಲ್ಪಡುತ್ತಿದ್ದ ಕಾಂಗ್ರೇಸ್ ಒಂದು ಕಾಲದಲ್ಲಿತ್ತು. ಆದರೆ ಪ್ರಸ್ತುತ 5 ರಾಜ್ಯಗಳಲ್ಲಿ ಮಾತ್ರ ಕಾಂಗ್ರೇಸ್ ತನ್ನ ಅಧಿಕಾರವನ್ನು ಹೊಂದಿದೆ. 2014ರ ಲೋಕಸಭೆ ಚುನಾವಣೆಯ ನಂತರ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೇಸ್ ಸೋಲು ಅನುಭವಿಸಿದೆ. ಅದಾಗ್ಯೂ, ಪಂಜಾಬ್ ಚುನಾವಣೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆ ಫಲಿತಾಂಶದ ಎರಡು ದಿನ ಮುಂಚಿತವಾಗಿ ರಾಹುಲ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.
ಗುಜರಾತ್ ಚುನಾವಣೆ
ಗುಜರಾತ್ನಲ್ಲಿ ರಾಹುಲ್ ಕಾಂಗ್ರೆಸ್ಗೆ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಒಂದುವೇಳೆ ಈ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದರೆ, ಅದು ಅವರಿಗೆ ಸಂಜೀವನಿಯಾಗಿ ಕೆಲಸ ಮಾಡುತ್ತದೆ.