ಐಶ್ವರ್ಯ ರೈಯನ್ನು ವರಿಸಿದ ತೇಜ್ ಪ್ರತಾಪ್ ಯಾದವ್

     

Last Updated : May 12, 2018, 11:55 PM IST
ಐಶ್ವರ್ಯ ರೈಯನ್ನು ವರಿಸಿದ ತೇಜ್ ಪ್ರತಾಪ್ ಯಾದವ್  title=

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ  ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್  ಆರ್ಜೆಡಿ ನಾಯಕ ಚಂದ್ರಿಕಾ ಪ್ರಸಾದ್ ಯಾದವ್ ರವರ ಮಗಳಾದ ಐಶ್ವರ್ಯಾ ರೈಯನ್ನು ವರಿಸಿದ್ದಾರೆ.

ಪಾಟ್ನಾದಲ್ಲಿನ  ಪಶುವೈದ್ಯ ಕಾಲೇಜು ಮೈದಾನದಲ್ಲಿ ಜರುಗಿದ ವಿವಾಹ ಕಾರ್ಯಕ್ರಮಕ್ಕೆ ಹಲವಾರು ಪ್ರಮುಖ ರಾಜಕೀಯ ಗಣ್ಯರು ಸಾಕ್ಷಿಯಾದರು.ಲಾಲು ಪ್ರಸಾದ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ವಾದ್ರಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್, ಕಾಂಗ್ರೆಸ್ ನಾಯಕರು ದಿಗ್ವಿಜಯ್ ಸಿಂಗ್ ಮತ್ತು ಪ್ರಫುಲ್ ಪಟೇಲ್ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮತ್ತು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ  ಮುಂತಾದ ನಾಯಕರಿಗೆ ಮದುವೆಯ ಆಹ್ವಾನ ನೀಡಿದ್ದರು ಎನ್ನಲಾಗಿದೆ.

ಈ ವಿವಾಹ ಕಾರ್ಯಕ್ರಮಕ್ಕೆಂದೇ ಸುಮಾರು 100 ಕ್ಕೂ ಅಧಿಕ ಅಡಿಗೆ ತಯಾರಕರನ್ನು ಕರೆಸಲಾಗಿತ್ತು. ಊಟದ ಮೆನುವಿನಲ್ಲಿ   ಗುಲಾಬ್ ಜಮುನ್, ಬುಂಡಿ ಮಲೈ, ಇಮಾರ್ತಿ, ಕಧಾಯಿ ಪನೀರ್, ತರಕಾರಿ ಕೊಫ್ಟಾ, ಪರ್ವಾಲ್, ದಮ್ ಆಲೂ, ಕಾಶ್ಮೀರಿ ದಳ, ತರಕಾರಿ ಬಿರಿಯಾನಿ, ಮೀತಾ ದಾಹಿ ವಾಡಾ, ನಾನ್, ಮಿಸ್ಸಿ ರೋಟಿ, ಪಂಜಾಬಿ ಕುಲ್ಚಾ, ಪಂಜಾಬಿ ಛೋಲೆ, ಪುರಿ , ಪುಲೋವೊ, ಲಿಟ್ಟಿ ಚೋಖಾ ಬಗೆಬಗೆಯ ತಿನಿಸುಗಳನ್ನು ಮದುವೆಗೆ ಬಂದಂತಹ ಅತಿಥಿಗಳಿಗೆ ಬಡಿಸಲಾಗಿತ್ತು.

 

Trending News