ಆಂಧ್ರ ಪ್ರದೇಶ : ವಿಶಾಖಪಟ್ಟಣಂ ವ್ಯಾಪ್ತಿಯ ದುವ್ವಾಡ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿದ್ದ ಅಣ್ಣಾವರಂ ಯುವತಿ ಎಂ.ಶಶಿಕಲಾ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದುವ್ವಾಡದಲ್ಲಿ ಎಂಸಿಎ ಓದುತ್ತಿದ್ದ ಆಕೆ ಬುಧವಾರ ಬೆಳಗ್ಗೆ ಅಣ್ಣಾವರಂನಿಂದ ಗುಂಟೂರು - ರಾಯಗಡ ರೈಲಿನಲ್ಲಿ ದುವ್ವಾಡ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಗುರಿಯಾಗಿದ್ದಳು.
ರೈಲ್ವೆ ರಕ್ಷಣಾ ತಂಡವು ಪ್ಲಾಟ್ಫಾರ್ಮ್ ಹಾಗೂ ರೈಲಿನ ಮಧ್ಯ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾಹಿತಿ ಪಡೆದ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ಮಗಳ ಸ್ಥಿತಿ ಕಂಡು ಮನ ಕಲಕಿತು. ತಂದೆ-ತಾಯಿ, ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರು ಮಾತ್ರವಲ್ಲದೆ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಘಟನೆ ನೋಡಿದ ಎಲ್ಲರೂ ಶಶಿಕಲಾ ಬೇಗ ಗುಣಮುಖಳಾಗಲಿ... ಸುರಕ್ಷಿತವಾಗಿ ಮನೆಗೆ ಬರಲಿ... ಉನ್ನತ ಶಿಕ್ಷಣಕ್ಕೆ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು.. ಅವಳನ್ನು ಸಾವಿನ ಅಂಚಿಗೆ ನೂಕಿತ್ತು.
ಇದನ್ನೂ ಓದಿ: Cylinder Blast: ಜೋಧ್ಪುರದಲ್ಲಿ ಮದುವೆ ಸಮಾರಂಭದಲ್ಲಿ 5 ಸಿಲಿಂಡರ್ ಸ್ಫೋಟ, 60 ಜನರಿಗೆ ಗಾಯ, ನಾಲ್ವರ ದುರ್ಮರಣ
ನಿನ್ನೆಯವರೆಗೂ ಜೊತೆಗಿದ್ದ ಗೆಳತಿ ಶಶಿಕಲಾ ಇನ್ನಿಲ್ಲ ಎಂದು ತಿಳಿದು ಸಹ ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಸಾವಿನೊಂದಿಗೆ ಶಶಿಕಲಾ ಅವರ 30 ಗಂಟೆಗಳ ಹೋರಾಟ ಮುಗಿದಿದೆ. ಈ ಸುದೀರ್ಘ ಹೋರಾಟದಲ್ಲಿ ವಿಧಿಗೆ ಜಯವಾಗಿದೆ. ಗುರುವಾರ ಬೆಳಗ್ಗೆ ವಿಶಾಖಪಟ್ಟಣದ ಆಸ್ಪತ್ರೆಗೆ ಆಗಮಿಸಿ ಶಶಿಕಲಾ ನೋಡಲು ಬಂದ ಸ್ನೇಹಿತರು ಅವಳ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದರು. ಅವರಿಗೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಾಗಲಿಲ್ಲ.
The Railway authorities & the Railway Protection Force, rescued a 20 year old girl student #Sasikala, who was caught between a compartment & a platform accidentally while getting down from a train at #DuvvadaRailway station, on the outskirts of the #PortCity in #AndhraPradesh. pic.twitter.com/79OV2cjDZW
— Hate Detector 🔍 (@HateDetectors) December 7, 2022
ಶಶಿಕಲಾ ಮೇರಪಾಲ ಬಾಬುರಾವ್ ಮತ್ತು ವೆಂಕಟಲಕ್ಷ್ಮಿ ದಂಪತಿಯ ಏಕೈಕ ಪುತ್ರಿ. ಕಳೆದ ತಿಂಗಳು 20 ರಿಂದ ದುವ್ವಾಡದ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು. ಪ್ರತಿದಿನ ಬೆಳಗ್ಗೆ ಅಣ್ಣಾವರಂ ನಿಲ್ದಾಣದಿಂದ ಗುಂಟೂರು-ರಾಯಗಡ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ದುವ್ವಾಡದ ಹಾಸ್ಟೆಲ್ನಲ್ಲಿ ಉಳಿದುಕೊಂಡು ಓದಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಇತ್ತ ಶಾಲೆಯಲ್ಲಿಯೂ ಸಹ ತಮ್ಮ ವಿದ್ಯಾರ್ಥಿಯನ್ನು ನೆನೆದು ಶಿಕ್ಷಕರು ಕಣ್ಣೀರು ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.