ಅಂದು 165 ರೂ.ಗಾಗಿ ವಾಚ್‌ಮ್ಯಾನ್‌ ಕೆಲಸ ಮಾಡಿದ ಈತ ಇಂದು ಸ್ಟಾರ್‌ ನಟ ಮಾತ್ರವಲ್ಲ ಯಶಸ್ವಿ ರಾಜಕಾರಣಿಯೂ ಹೌದು! ಇದು ಗುರು ಸಕ್ಸಸ್‌ ಅಂದ್ರೆ..

Star Actor success Story: ಒಂದು ಕಾಲದಲ್ಲಿ 165 ರೂಪಾಯಿ ಸಂಬಳಕ್ಕೆ ವಾಚ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಇಂದು ಭಾರಿ ಸಂಭಾವನೆ ಪಡೆಯುವ ಕಲಾವಿದನಾಗಿದ್ದಾನೆ. 

Written by - Savita M B | Last Updated : Jan 13, 2025, 12:12 PM IST
  • ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೇ ಸೂಕ್ತ ಪ್ರತಿಫಲ ಸಿಗುತ್ತದೆ
  • ಈಗಿನ ಚಿತ್ರರಂಗದ ಬಹುತೇಕ ತಾರೆಯರು ತಿಂಗಳಿಗೆ 100 ಅಥವಾ 1000 ಸಂಬಳಕ್ಕೆ ದುಡಿಯುತ್ತಿದ್ದವರೇ.
ಅಂದು 165 ರೂ.ಗಾಗಿ ವಾಚ್‌ಮ್ಯಾನ್‌ ಕೆಲಸ ಮಾಡಿದ ಈತ ಇಂದು ಸ್ಟಾರ್‌ ನಟ ಮಾತ್ರವಲ್ಲ ಯಶಸ್ವಿ ರಾಜಕಾರಣಿಯೂ ಹೌದು! ಇದು ಗುರು ಸಕ್ಸಸ್‌ ಅಂದ್ರೆ..  title=

Actor sayaji shinde: ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೇ ಸೂಕ್ತ ಪ್ರತಿಫಲ ಸಿಗುತ್ತದೆ. ಈಗಿನ ಚಿತ್ರರಂಗದ ಬಹುತೇಕ ತಾರೆಯರು ತಿಂಗಳಿಗೆ 100 ಅಥವಾ 1000 ಸಂಬಳಕ್ಕೆ ದುಡಿಯುತ್ತಿದ್ದವರೇ. ದಕ್ಷಿಣ ಮತ್ತು ಉತ್ತರದಲ್ಲಿ ಬಿಡುವಿಲ್ಲದ ಕಲಾವಿದನಾಗಿ ಖ್ಯಾತಿ ಗಳಿಸಿರುವ ಸಯಾಜಿ ಶಿಂಧೆ.. ಈ ಖ್ಯಾತ ಖಳನಾಯಕನದೂ ಇದೇ ಕಥೆ. 

ಸಯಾಜಿ ಶಿಂಧೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ. ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಯಾಜಿ ತಮ್ಮ ನಟನಾ ವೃತ್ತಿಯನ್ನು ‘ಶೂಲ್’ ಚಿತ್ರದ ಮೂಲಕ ಆರಂಭಿಸಿದರು. ಈ ಹಿಂದೆ ಅವರು ಅನೇಕ ಮರಾಠಿ ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸಯಾಜಿ ಅವರು 1978 ರಲ್ಲಿ ಮರಾಠಿ ನಾಟಕಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಈ ನಾಟಕಗಳಲ್ಲಿ ಭಾಗವಹಿಸಲು ಅವರು ಕಷ್ಟಪಡಬೇಕಾಗಿತ್ತು.

ಇದನ್ನೂ ಓದಿ-Video Viral| ಮಗ ಹೊಡೆದ ಸಿಕ್ಸರ್ ಗೆ ಕ್ಯಾಚ್ ಹಿಡಿದ ತಂದೆ! ಬಿಗ್ಬಾಷ್ ಲೀಗ್ ನಲ್ಲಿ ಕುತೂಹಲಕಾರಿ ಘಟನೆ

ಮೂಲತಃ ಸಯಾಜಿ ಮಹಾರಾಷ್ಟ್ರದ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದರು. ಈ ಮಹಾನ್ ನಟನ ತಂದೆ ಒಬ್ಬ ಸರಳ ರೈತ. ಸ್ವಲ್ಪ ಸಮಯದ ನಂತರ, ಸಯಾಜಿ ಗ್ರಾಮವನ್ನು ತೊರೆದು ಸತಾರಾ ನಗರದಲ್ಲಿ ನೆಲೆಸಿದರು. ಓದಿದ್ದು ಸತಾರಾದಲ್ಲಿ. ಓದುವ ಜತೆಗೆ ವಾಚ್ ಮ್ಯಾನ್ ಆಗಿಯೂ ಕೆಲಸ ಮಾಡುತ್ತಿದ್ದ ಇವರಿಗೆ ತಿಂಗಳಿಗೆ 165 ರೂ. ಸಂಬಳ ನೀಡಲಾಗುತ್ತಿತ್ತಂತೆ.. ಈ ವೇಳೆ ರಂಗನಟ ಸುನೀಲ್ ಕುಲಕರ್ಣಿ ಅವರನ್ನು ಭೇಟಿಯಾದರು.

ಇದನ್ನೂ ಓದಿ-2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!

ಸುನೀಲ್ ಕುಲಕರ್ಣಿ ಅವರನ್ನು ಭೇಟಿಯಾದ ನಂತರ ಸಯಾಜಿ ನಾಟಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಹಲವಾರು ಮರಾಠಿ ನಾಟಕಗಳಲ್ಲಿ ನಟಿಸಿದರು ಆದರೆ 1987 ರ 'ಜುಲ್ವಾ' ನಾಟಕದಿಂದ ಜನಮನ್ನಣೆ ಗಳಿಸಿದರು. ಈ ನಾಟಕದಲ್ಲಿ ಸಯಾಜಿ ಅವರ ಅಭಿನಯ ಅನೇಕರ ಗಮನ ಸೆಳೆಯಿತು. ಮರಾಠಿ ನಾಟಕಗಳ ನಂತರ ಅವರು ಮುಂಬೈ ತಲುಪಿದರು ಮತ್ತು ಅಲ್ಲಿ ಹಲವಾರು ರಂಗಭೂಮಿ ಕಾರ್ಯಾಗಾರಗಳನ್ನು ನಡೆಸಿದರು. ಇದೆಲ್ಲದರ ಜೊತೆಗೆ ನಟನೆಯ ಶಿಕ್ಷಣವನ್ನೂ ಮುಗಿಸಿದರು. ಬಳಿಕ ನಟ ತಮ್ಮ ಮೊದಲ ಮರಾಠಿ ಚಿತ್ರ 'ಅಬೋಲಿ'ಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

ಮರಾಠಿ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ ನಂತರ ಅವರು ಹಿಂದಿ ಚಿತ್ರಗಳಿಗೆ ಪ್ರವೇಶಿಸಿದರು. ಸಯಾಜಿ ಅವರು ತಮ್ಮ ಮೊದಲ ಹಿಂದಿ ಚಿತ್ರ 'ಶೂಲ್' ನಲ್ಲಿ ಬಚು ಯಾದವ್ ಪಾತ್ರವನ್ನು ನಿರ್ವಹಿಸಿದರು, ಅದು ಜನಮನದಲ್ಲಿ ಹಿಟ್ ಆಗಿತ್ತು. ಸಯಾಜಿ ಮರಾಠಿ, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್ ಮತ್ತು ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಯಶಸ್ವಿ ವೃತ್ತಿಜೀವನದ ನಂತರ, ಅವರು ಈಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಯಾಜಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News