ನಿಮ್ಮ ಉಗುರುಗಳ ಮೇಲೆ ʻಈʼ ಲಕ್ಷಣಗಳು ಕಾಣಿಸಿಕೊಂಡರೆ, ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿದೆ ಎಂದು ಅರ್ಥ! ಹೃದಯಾಘಾತದ ಮುನ್ನೆಚ್ಚರಿಕೆ ಇದು

High Cholestrol Signs: ದೇಹದಲ್ಲಿ ಕೊಲೆಸ್ಟ್ರಾಲ್‌ ಒಂದು ಗಂಭೀರವಾದ ಆರೋಗ್ಯ ಸಮಸ್ಯೆ, ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿದ್ದಾರೆ ಇದು ಹೃದಯಾಘಾತ ಹಾಗೂ ಪಾಶ್ವರ್ವಾಯುಗಳಂತಹ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ದೇಹದಲ್ಲಿನ ಕೊಲೆಸ್ಟ್ರಾಲ್‌ ಹೆಚ್ಚಾಗಿರುವುದನ್ನು ಮೊದಲೆ ಗುರುತಿಸಿಕೊಂಡರೆ, ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಅಪಾಯವನ್ನು ತಪ್ಪಿಸಬಹುದು.  

Written by - Zee Kannada News Desk | Last Updated : Jan 14, 2025, 12:58 PM IST
  • ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿದ್ದಾರೆ ಇದು ಹೃದಯಾಘಾತ ಹಾಗೂ ಪಾಶ್ವರ್ವಾಯುಗಳಂತಹ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
  • ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಅಪಾಯವನ್ನು ತಪ್ಪಿಸಬಹುದು.
  • ರಕ್ತದ ಹರಿವಿಗೆ ಅಡಚಣೆಯನ್ನುಂಟು ಮಾಡಿ, ಮಾರಣಾಂತಿಕ ರೋಗಗಳಿಗೆ ಕಾರಣವಾಗಬಹದು.
ನಿಮ್ಮ ಉಗುರುಗಳ ಮೇಲೆ ʻಈʼ ಲಕ್ಷಣಗಳು ಕಾಣಿಸಿಕೊಂಡರೆ, ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿದೆ ಎಂದು ಅರ್ಥ! ಹೃದಯಾಘಾತದ ಮುನ್ನೆಚ್ಚರಿಕೆ ಇದು title=

High Cholestrol Signs: ದೇಹದಲ್ಲಿ ಕೊಲೆಸ್ಟ್ರಾಲ್‌ ಒಂದು ಗಂಭೀರವಾದ ಆರೋಗ್ಯ ಸಮಸ್ಯೆ, ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿದ್ದಾರೆ ಇದು ಹೃದಯಾಘಾತ ಹಾಗೂ ಪಾಶ್ವರ್ವಾಯುಗಳಂತಹ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ದೇಹದಲ್ಲಿನ ಕೊಲೆಸ್ಟ್ರಾಲ್‌ ಹೆಚ್ಚಾಗಿರುವುದನ್ನು ಮೊದಲೆ ಗುರುತಿಸಿಕೊಂಡರೆ, ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಅಪಾಯವನ್ನು ತಪ್ಪಿಸಬಹುದು.

ಬೆರಳಿನ ಉಗುರು ಹಾಗೂ ಕಾಲ್ಬೆರಳ ಉಗುರಿನ ಮೂಲಕ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗಿರುವುದನ್ನು ನೀವು ಪತ್ತೆ ಹಚ್ಚಬಹುದು. ಇದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸಾವಿನ ಅಪಾಯವನ್ನು ತಪ್ಪಿಸಬಹುದು.ದೇಹಕ್ಕೆ ಕೊಬ್ಬು ಅವಶ್ಯಕ, ಆದರೆ ಮಿತಿಗೂ ಮೀರಿ ದೇಹದಲ್ಲಿ ಕೊಬ್ಬು ಹೆಚ್ಚಾದರೆ, ಇದು ಹೃದಯಾಘಾತಕ್ಕೆ ಎಡೆ ಮಾಡಿಕೊಡುತ್ತದೆ. ರಕ್ತದ ಹರಿವಿಗೆ ಅಡಚಣೆಯನ್ನುಂಟು ಮಾಡಿ, ಮಾರಣಾಂತಿಕ ರೋಗಗಳಿಗೆ ಕಾರಣವಾಗಬಹದು.

ಸಾಮಾನ್ಯವಾಗಿ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾದರೆ, ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ರಕ್ತನಾಳಗಳಲ್ಲಿ ಸಂಗ್ರಹವಾಗಿ, ದೇಹದ ಕೆಲ ಭಾಗಗಳಲ್ಲಿ ಇದರ ಲಕ್ಷಣಗಳನ್ನು ತೋರಿಸುತ್ತದೆ.

1. ಉಗುರು ಹಳದಿಯಾಗುವುದು: 
ಉಗುರುಗಳ ಮೇಲೆ ಹಳದಿ ಕಲೆಗಳು ಕಾಣಿಸಿಕೊಂಡರೆ ಇದನ್ನು ಕ್ಸಾಂಥೋಮಾಸ್‌ ಎಂದು ಕರೆಯಲಾಗುತ್ತದೆ. ಈ ರೀತಿ ನಿಮ್ಮ ಉಗುರು ಹಳದಿ ಬಣ್ಣಕ್ಕೆ ತಿರುಗಿದ್ದರೆ, ನಿಮ್ಮ ದೇಹದಲ್ಲಿ ಹಾನಿಕಾರಕ ಕೊಬ್ಬು ಶೇಕರಣೆಯಾಗಿದೆ ಎಂದು ಅರ್ಥ. ಉಗುರುಗಳಲ್ಲಿ ರಕ್ತದ ಹರಿವು ಕಡಿಮೆಯಾದರೆ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಸಾಮಾನ್ಯವಾಗಿ ಅಧಿಕ LDL ಕೊಲೆಸ್ಟ್ರಾಲ್ ಇರುವವರಲ್ಲಿ ಇದು ಲಕ್ಷಣ ಕಂಡುಬರುತ್ತದೆ. ಈ ಹಳದಿ ಕಲೆಗಳು ಉಗುರುಗಳು, ಮೊಣಕೈಗಳು, ಉಗುರುಗಳ ನಡುವೆ ಮತ್ತು ಕೆಲವು ಜನರಲ್ಲಿ ಎಡ ಅಥವಾ ಬಲ ಕಾಲಿನ ಮೇಲೆ ಕಾಣಿಸಿಕೊಳ್ಳುತ್ತವೆ.

2. ಉಗುರುಗಳಲ್ಲಿ ಬಣ್ಣ ಬದಲಾವಣೆ:
ಉಗುರುಗಳಿಗೆ ರಕ್ತ ಪರಿಚಲನರ ಸರಿಯಾಗಿ ಆಗದೆ ಇದ್ದೆರ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿರುವ ಲಕ್ಷಣ ಕಂಡು ಬಂದರೆ, ಇದು ರಕ್ತನಾಳಗಳಲ್ಲಿ ಸಮಸ್ಯೆಯಿದೆ ಎಂಬುದರ ಸಂಕೇತವಾಗಿದೆ. ಆದ್ದರಿಂದ ನಿಮ್ಮ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದ್ದರೆ ಅದು ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂಬುದರ ಸಂಕೇತವೆಂದು ಅರ್ಥ.

3. ಉಗುರುಗಳಲ್ಲಿ ನೋವು:
ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚಾದಾಗ ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ. ರಕ್ತದ ಹರಿವಿನಲ್ಲಿ ಅಡಚಣೆ ಎದುರಾದರೆ, ಉಗುರುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಉಗುರುಗಳಲ್ಲಿ ಉರಿ ಹಾಗೂ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಉಗುರುಗಳಲ್ಲಿ ನೋವು ಕಾಣಿಸಿಕೊಂಡರೆ ವೈದ್ಯರನ್ನು ಭೆಟಿ ಮಾಡುಮಾಡುವುದು ಉತ್ತಮ.

4. ತಣ್ಣನೆಯ ಉಗುರು:
ಕೊಲೆಸ್ಟ್ರಾಲ್‌ ಹೆಚ್ಚಾಗಿದ್ದರೆ, ಇದು ದೇಹದ ಹಲವು ಭಾಗಗಳಿಗೆ ಸರಿಯಾಗಿ ರಕ್ತದ ಪರಿಚಲನೆಯಾಗದಂತೆ ತಡೆದು ಹಾಕುತ್ತದೆ, ಹೀಗೆ ಸರಿಯಾಗಿ ರಕ್ತದ ಹರಿವು ಇಲ್ಲದಿದ್ದರೆ, ಬೆರಳಿನ ಉಗುರು ತಣ್ಣಗಾಗುವಂತೆ ಮಾಡುತ್ತದೆ, ರಕ್ತದ ಹರಿವು ಬಹುತೇಕ ಸ್ಥಗಿತಗೊಂಡಾಗ ಉಗುರುಗಳು ತಣ್ಣಗಾಗುತ್ತದೆ ಹಾಗೂ ನಿರ್ಜೀವವಾಗುತ್ತದೆ.

5. ಉಗುರು ಮೇಲೆ ಕಪ್ಪು ಗೆರೆ: 
ಈ ಲಕ್ಷಣ ಕೆಲವೊಂದೆ ಜನರಲ್ಲಿ ಕಂಡು ಬರುತ್ತದೆ. ಉಗುರುಗಳಲ್ಲಿನ ಕಪ್ಪು ಗೆರೆಗಳು, ದೇಹದಲ್ಲಿನ ಹೆಚ್ಚು ಕೊಲೆಸ್ಟ್ರಾಲ್‌ನ ಲಕ್ಷಣವಿರಬಹುದು. ಇದನ್ನು ಸ್ಪ್ಲಿಂಟರ್‌ ಹೆಮರೇಜ್‌ ಎಂದು ಕರೆಯಲಾಗುತ್ತದೆ. ಉಗುರುಗಳ ಮೇಲೆ ಈ ಕಪ್ಪು ಗೆರೆಗಳು ಕಂಡು ಬಂದರೆ, ಇದು ಹೃದ್ರOಗದ ಅಪಾಯವನ್ನು ಸೂಚಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಗಳನ್ನು ಆಧರಿಸಿದೆ. ಇದನ್ನು Zee Kannada news ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News