ಜೂನ್ 21ರಂದು ಸಂಭವಿಸಲಿದೆ ಚೂಡಾಮಣಿ ಸೂರ್ಯಗ್ರಹಣ, ಕಾದಿದೆ ಎರಡು ಗಂಡಾಂತರ

ಜ್ಯೋತಿಷ್ಯ ಶಾಸ್ತ್ರದ ಅನುಸಾರ ನಿಮ್ಮ ಜೀವನದ ಮೇಲೆ ಈ ಗ್ರಹಣ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ಜೋತಿಷ್ಯ ಆಚಾರ್ಯ ಸುಧಾಕರ್ ಪ್ರುರೋಹಿತ್ ಹೇಳಿದ್ದಾರೆ.

Last Updated : Jun 19, 2020, 11:01 AM IST
ಜೂನ್ 21ರಂದು ಸಂಭವಿಸಲಿದೆ ಚೂಡಾಮಣಿ ಸೂರ್ಯಗ್ರಹಣ, ಕಾದಿದೆ ಎರಡು ಗಂಡಾಂತರ title=

ನವದೆಹಲಿ: ಈ ವರ್ಷದ ಅತಿ ದೊಡ್ಡ ಸೂರ್ಯಗ್ರಹಣ ಜೂನ್ 21ರಂದು ಸಂಭವಿಸಲಿದೆ. ಆಧ್ಯಾತ್ಮ ವಿಜ್ಞಾನದ ಅನುಸಾರ ಈ ಸೂರ್ಯಗ್ರಹಣ ಮಾನವ, ಜೀವ-ಜಂತುಗಳು, ವನಸ್ಪತಿ, ನದಿ, ಸಾಗರ ಇತ್ಯಾದಿಗಳ ಮೇಲೆ ಪ್ರಭಾವ ಬೀರಲಿದೆ. ಜೋತಿಷ್ಯಶಾಸ್ತ್ರದ ಅನುಸಾರ ಈ ಸೂರ್ಯಗ್ರಹಣ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯುವುದು ಮಹತ್ವದ್ದಾಗಿದೆ. ಜೈಪುರದ ಪ್ರಸಿದ್ಧ ಜ್ಯೋತಿಷಾಚಾರ್ಯ ಸುಧಾಕರ್ ಪುರೋಹಿತ್ ಪ್ರಕಾರ ಇದೊಂದು ಭಯ ಹುಟ್ಟಿಸುವ ಸೂರ್ಯಗ್ರಹಣವಾಗಿದೆ.

ಸುಧಾಕರ್ ಪುರೋಹಿತ್ ಹೇಳುವ ಪ್ರಕಾರ ಇದೊಂದು ಕಂಕಣ ಆಕೃತಿಯ ಸೂರ್ಯಗ್ರಹಣವಾಗಿದೆ. ಖಗೋಳಶಾಸ್ತ್ರದ ಘಟನೆಗಳಲ್ಲಿ ಗ್ರಹಣ ಒಂದು ವಿಲಕ್ಷಣ ಹಾಗೂ ದುರ್ಲಭ ಘಟನೆ ಎನ್ನಲಾಗುತ್ತದೆ. ಎಲ್ಲಾ ಗ್ರಹಣಗಳಲ್ಲಿ ಸೂರ್ಯಗ್ರಹಣದ ಪ್ರಭಾವ ಅತ್ಯಧಿಕವಾಗಿರುತ್ತದೆ. ವೈದಿಕ ಕಾಲದಿಂದಲೂ ಸೂರ್ಯಗ್ರಹಣ ಭೂಮಿಯ ಮೇಲೆ ವಾಸಿಸುವವರ ಪಾಲಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ ಎನ್ನಲಾಗುತ್ತದೆ. ಆದರೆ, ಇಂದಿನ ವಿಜ್ಞಾನ ಇದನ್ನು ಪೂರ್ಣರೂಪದಲ್ಲಿ ನಂಬುವುದಿಲ್ಲ. ಆದರೆ, ಹಲವು ವಿಜ್ಞಾನಿಗಳು ಗ್ರಹಣ ಸಂಭವಿಸಿದ ಆಸುಪಾಸಿನಲ್ಲಿ ಕೆಲ ನೈಸರ್ಗಿಕ ಘಟನೆಗಳು ಸಂಭವಿಸಿ ಭೂಮಿಯ ಮೇಲಿರುವ ಜೀವ-ಜಂತು ಹಾಗೂ ಮಾನವರಲ್ಲಿ ಭೀತಿ ಪಸರಿಸುತ್ತದೆ. ಜೂನ್ 21ರಂದು ಸಂಭವಿಸಲಿರುವ ಸೂರ್ಯಗ್ರಹಣ ಒಂದು ಕಂಕಣ ಆಕೃತಿಯ ಸೂರ್ಯಗ್ರಹಣವಾಗಿದ್ದು, ಇದಕ್ಕೆ ಚೂಡಾಮಣಿ ಸೂರ್ಯ ಗ್ರಹಣ ಎಂದೂ ಕೂಡ ಹೇಳುತ್ತಾರೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಬೆಳಗ್ಗೆ 9.16ಕ್ಕೆ ಆರಂಭಗೊಂಡು ಮಧ್ಯಾಹ್ನ 3.04ಕ್ಕೆ ಮುಕ್ತಾಯಗೊಳ್ಳಲಿದೆ. ಈ ಗ್ರಹಣದ ಕಂಕಣಾಕೃತಿ ರಾಜಸ್ಥಾನ, ಹರಿಯಾಣಾ, ಉತ್ತರಾಖಂಡದ ಉತ್ತರ ಭಾಗ ಹಾಗೂ ಪಂಜಾಬ್ ನ ದಕ್ಷಿಣ ಭಾಗದಲ್ಲಿರುವ ಕೆಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ. ಇನ್ನುಳಿದಂತೆ ಭಾರದದ 23 ರಾಜ್ಯಗಳಲ್ಲಿ ಈ ಗ್ರಹಣ ಖಂಡಗ್ರಾಸ ರೂಪದಲ್ಲಿ ಗೋಚರಿಸಲಿದೆ. ಭಾರತವನ್ನು ಹೊರತುಪಡಿಸಿ ಈ ಸೂರ್ಯಗ್ರಹಣ ಆಫ್ರಿಕಾ, ಪೂರ್ವ-ದಕ್ಷಿಣ ಯುರೋಪ್, ಆಸ್ಟ್ರೇಲಿಯಾದ ಉತ್ತರ ಭಾಗ ಹಾಗೂ ಮಧ್ಯ-ಪೂರ್ವ ಏಷ್ಯಾದ ಎಲ್ಲ ದೇಶಗಳಲ್ಲಿ ಗೋಚರಿಸಲಿದೆ.

ಸುಧಾಕರ್ ಪುರೋಹಿತ್ ಹೇಳುವ ಪ್ರಕಾರ ಈ ಗ್ರಹಣದ ಹಿನ್ನೆಲೆ ಎರಡು ಗಂಡಾಂತರಗಳು ಕಾದಿವೆ. ಮೊದಲನೆಯದಾಗಿ ಈ ಗ್ರಹಣ ಅಯನ್ ಪರಿವರ್ತನೆಯ ವೇಳೆ ಸಂಭವಿಸುತ್ತಿದೆ. ಈ ದಿನ ಸೂರ್ಯನ ದಕ್ಷಿಣಾಯನ ಪ್ರಾರಂಭವಾಗುತ್ತಿದೆ. ಅಂದರೆ, ಈ ದಿನ ಸಂಜೆ ಸೂರ್ಯದೇವ ಕರ್ಕರಾಶಿಗೆ ಪ್ರವೇಶಿಸುತ್ತಲೇ ಗ್ರಹಣಯೋಗ ಆರಂಭಗೊಳ್ಳುತ್ತದೆ. ಈ ಘಟನೆ ಎಚ್ಚರಿಕೆಯ ಮುನ್ಸೂಚನೆಯಾಗಿದೆ. ಎರಡನೆಯದು ಧರ್ಮ ಹಾಗೂ ಶ್ರದ್ಧೆಗೆ ಸಂಬಂಧಪಟ್ಟಿದೆ. ಸೂರ್ಯದೇವ ಆರ್ದ್ರಾ ನಕ್ಷತ್ರಕ್ಕೆ ಪ್ರವೇಶಿಸುತ್ತಲೇ, ಭೂಮಿ ತಾಯಿ ರಜಸ್ವಲಾ ಆಗುತ್ತಾಳೆ ಹಾಗೂ ಕಾಮಾಖ್ಯಾ ಶಕ್ತಿಪೀಠ, ಗುವಾಹಾಟಿಯಲ್ಲಿ ಮೂರು ದಿನಗಳ ಅಂಬುವಾಸಿ ಉತ್ಸವ ಆರಂಭವಾಗುತ್ತದೆ. 21 ಜೂನ್ ರಾತ್ರಿ 11.28 ಗಂಟೆಗೆ ಸೂರ್ಯ ದೇವ ಗ್ರಹಣ ಮೋಕ್ಷದ ನಂತರ ಆರ್ದ್ರಾ ನಕ್ಷತ್ರಕ್ಕೆ ಪ್ರವೇಶಿಸುತ್ತಾರೆ. ಇಂತಹ ಘಟನೆಗಳ ಸಂಯೋಗ ನೋಡಲು ಸಿಗುವುದು ತುಂಬಾ ವಿರಳವಾಗಿರುತ್ತದೆ. ಮೊದಲಿನಿಂದಲೇ ಕೊವಿಡ್-19 ಮಹಾಮಾರಿಯಿಂದ ತತ್ತರಿಸಿಹೋಗಿರುವ ಮಾನವ ಜಾತಿಗೆ ಈ ರೀತಿಯ ಸಂಯೋಗ ಶುಭಕರ ವಲ್ಲ ಎಂದು ಸುಧಾಕರ್ ಪುರೋಹಿತ್ ಹೇಳುತ್ತಾರೆ.

ವೈಯಕ್ತಿಕವಾಗಿ ನೋಡುವುದಾದರೆ ಈ ಸೂರ್ಯಗ್ರಹಣ ಮ್ರುಗಶೀರಾ ನಕ್ಷತ್ರ ಹಾಗೂ ಮಿಥುನರಾಶಿಯಲ್ಲಿ ಸಂಭವಿಸುತ್ತಿದೆ. ಮಿಥುನರಾಶಿಯ ಜೊತೆಗೆ ವೃಶ್ಚಿಕ ಹಾಗೂ ಕರ್ಕ ರಾಶಿಯ ಜನರ ಪಾಲಿಗೆ ಈ ಗ್ರಹಣ ಶುಭಕರವಲ್ಲ. ಹೀಗಾಗಿ ಈ ರಾಶಿಯ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಜೋತಿಷಾಚಾರ್ಯ ಹೇಳುತ್ತಾರೆ.

ಈ ಗ್ರಹಣದ ಸೂತಕ ಕಾಲ ನಾಳೆ ಅಂದರೆ, ಜೂನ್ 20, 2020ರ ರಾತ್ರಿ 9.55ಕ್ಕೆ ಆರಂಭಗೊಂಡು ಗ್ರಹಣದ ಮೋಕ್ಷಕಾಲ ಅಂದರೆ ಗ್ರಹಣ ಸಮಾಪ್ತಿಯವರೆಗೆ ಇರಲಿದೆ. ಸೂತಕ ಆರಂಭವಾಗುತ್ತಿದ್ದಂತೆ, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿದರನ್ನು ಹೊರತುಪಡಿಸಿ ಅನ್ಯರಿಗೆ ಭೋಜನ ಮಾಡುವುಡು ನಿಷಿಧ್ಧ ಎಂದು ಹೇಳಲಾಗಿದೆ. ಆದರೆ, ಇದೊಂದು ಧಾರ್ಮಿಕ ಮಾನ್ಯತೆಯಾಗಿದೆ. ಇದಲ್ಲದೆ ಗ್ರಹಣ ಕಾಲದಲ್ಲಿ ಮಲಗುವುದು, ಸ್ನಾನ ಮಾಡುವುದು, ಶರೀರದ ಮೇಲೆ ವಿವಿಧ ರೀತಿಯ ಲೇಪನ ಹಚ್ಚಿಕೊಳ್ಳುವುದು, ಹಣ್ಣು-ಹಂಪಲ-ತರಕಾರಿ ಕತ್ತರಿಸುವುದು ಅಥವಾ ಸೇವಿಸುವುದನ್ನೂ ಕೂಡ ನಿಷಿದ್ಧ ಎಂದು ಹೇಳಲಾಗಿದೆ. ಸೂತಕ ಕಾಲದಲ್ಲಿ ದ್ರವ ಹಾಗೂ ರಸಭರಿತ ಪದಾರ್ಥಗಳ ಶುದ್ಧತೆಗಾಗಿ ಕುಶಾ ಬಳಸಲಾಗುತ್ತದೆ.

ಈ ಸೂರ್ಯಗ್ರಹಣ ರವಿವಾರ ಸಂಭವಿಸುತ್ತಿರುವ ಕಾರಣ ಇದಕ್ಕೆ ಚೂಡಾಮಣಿ ಸೂರ್ಯಗ್ರಹಣ ಎಂದು ಸಂಬೋಧಿಸಲಾಗುತ್ತದೆ. ಗ್ರಹಣದ ಪುಷ್ಯಕಾಲದಲ್ಲಿ ಸ್ನಾನ, ದಾನ ಹಾಗೂ ಜಪ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಈ ದಿನ ಗ್ರಹಣದ ಪುಣ್ಯಕಾಲ ಅಂದರೆ ಗ್ರಹಣ ಸಮಾಪ್ತಿಯ ಬಳಿಕ ಪವಿತ್ರ ತೀರ್ಥಗಳಿಗೆ ಹೋಗಿ ಸ್ನಾನ ಮಾಡಬೇಕು ಹಾಗೂ ದಾನ ಮಾಡುವುದು ಶುಭಕರ ಎಂದು ಹೇಳಲಾಗುತ್ತದೆ.
 

Trending News