ಆನೆ ಹೊಗೆ ಬಿಡುವುದನ್ನು ಎಂದಾದರೂ ನೋಡಿದ್ದೀರಾ ? ಇಲ್ಲಿದೆ ವಿಡಿಯೋ

Elephant viral video : ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಆನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. 

Written by - Ranjitha R K | Last Updated : Aug 26, 2022, 03:21 PM IST
  • ಆನೆಗಳು ವಿಶ್ವದ ಅತಿದೊಡ್ಡ ಭೂ ಪ್ರಾಣಿಗಳಾಗಿವೆ.
  • ಆನೆಗಳಿಗೆ ಮದವೇರಿದಾಗ ಎಲ್ಲವನ್ನೂ ಸರ್ವನಾಶ ಮಾಡಿ ಬಿಡುತ್ತವೆ.
  • ಆನೆಗಳ ಬಾಯಿಯಿಂದ ಬರುತ್ತಿದೆ ಹೊಗೆ
ಆನೆ ಹೊಗೆ ಬಿಡುವುದನ್ನು ಎಂದಾದರೂ ನೋಡಿದ್ದೀರಾ ? ಇಲ್ಲಿದೆ ವಿಡಿಯೋ  title=
Elephant video

Elephant viral video : ಹೆಚ್ಚಿನವರು  ಸಾಮಾಜಿಕ ಮಾಧ್ಯಮದಲ್ಲಿರುವ ವಿಡಿಯೋಗಳನ್ನು ನೋಡಿಕೊಂಡೇ ಕಾಲ ಕಳೆಯುತ್ತಾರೆ.  ಕೆಲವರು ಪ್ರಾಣಿಗಳ ವಿಡಿಯೋಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಾರೆ. ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿ ಯೋಗಳಿದ್ದರೆ ಜನ ಅದನ್ನು ಬಹಳ ಇಷ್ಟಪಡುತ್ತಾರೆ. ಪ್ರಾಣಿಗಳು ಯಾವ ಹೊತ್ತಿನಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಆನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. 

ಆನೆಗಳು ವಿಶ್ವದ ಅತಿದೊಡ್ಡ ಭೂ ಪ್ರಾಣಿಗಳಾಗಿವೆ. ಆನೆಯು ಸರಿಯಾದ ಬೆಳವಣಿಗೆ ಹೊಂದಲು 16 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಂಪೂರ್ಣವಾಗಿ ಬೆಳೆವಣಿಗೆಯಾದ ಆನೆ ದಿನಕ್ಕೆ 400 ಕೆಜಿ ಆಹಾರ ತಿನ್ನುತ್ತದೆ ಮತ್ತು 150 ಲೀಟರ್ ನೀರನ್ನು ಕುಡಿಯುತ್ತದೆಯಂತೆ.  ಆನೆಯನ್ನು ಇಷ್ಟಪಡದವರು ಬಹಳ ಕಡಿಮೆ. ಆದರೆ ಆನೆಗಳಿಗೆ ಮದವೇರಿದಾಗ ಮಾತ್ರ ಅವುಗಳು ಎಲ್ಲವನ್ನೂ ಸರ್ವನಾಶ ಮಾಡಿ ಬಿಡುತ್ತವೆ. ಆನೆಗಳು ಶಾಂತವಾಗಿದ್ದಾಗ ಅವುಗಳನ್ನು ನೋಡುವುದೇ ಚಂದ. ಅವುಗಳ ನೀರಾಟವಂತೂ ಬಲು ಸೊಗಸು. ಇದೇ ಕಾರಣಕ್ಕೆ ಆನೆಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬರುತ್ತಿದ್ದಂತೆಯೇ ಅದು ವೈರಲ್ ಆಗಿ ಬಿಡುತ್ತವೆ. 

ಇದನ್ನೂ ಓದಿ : Viral Video: ಸಮುದ್ರದ ತೀರದಲ್ಲಿ ಉಡಗಳ ಆಲಿಂಗನ

ಇದೀಗ  ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆ ಬಾಯಿಯಿಂದ ಹೊಗೆ ಬಿಡುವುದನ್ನು ನೋಡಬಹುದು. ಸೊಂಡಿಲಿನಿಂದ ಅದೇನನ್ನೋ ಬಾಯಿಗೆ ಹಾಕಿಕೊಂಡ ಆನೆಯ ಬಾಯಿಯಿಂದ ಹೊಗೆ ಬರಲು ಆರಂಭವಾಗುತ್ತದೆ. ಆದರೆ ಆನೆ ಏನನ್ನು ಎತ್ತಿಕೊಂಡು ಬಾಯಿಗೆ ಹಾಕುತ್ತದೆ ಎನ್ನುವುದು ಮಾತ್ರ ಸ್ಪಷ್ಟವಾಗುವುದಿಲ್ಲ. ಇದು ಕಾಡ್ಗಿಚ್ಚಿನಿಂದ ಉಳಿದಿರುವ ಸುಟ್ಟ ಮರದ ತುಂಡು ಎಂದು ಹೇಳಲಾಗುತ್ತಿದೆ. ಹಲ್ಲು ನೋವು ಕಾಣಿಸಿಕೊಂಡಾಗ ಆನೆಗಳು ಇದನ್ನು ಬಳಸುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.   

 

ಉತ್ತರಾಖಂಡ್ ಲೈವ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿಯ ತಜ್ಞರು ಚಿತ್ರೀಕರಿಸಿದ ವಿಡಿಯೋ ಇದು.

ಇದನ್ನೂ ಓದಿ : Viral Video : ನಿಂತಿದ್ದ ವಾಹನದ ಮೇಲೇರಿ ಹೋಗುತ್ತಿತ್ತು ಹೆಬ್ಬಾವು.! ಇಷ್ಟುದ್ದದ ಹಾವನ್ನು ನೋಡಿರಲು ಸಾಧ್ಯವೇ ಇಲ್ಲ .!

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News