How To Get Naturally Long Hair: ನಟಿ ಸಾಯಿಪಲ್ಲವಿ ಗ್ಲಾಮರ್ ಟ್ರೆಂಡ್ ಆಗಿರಬಹುದು, ಫ್ಯಾಷನ್ ಲುಕ್ ಆಗಿರಬಹುದು, ಆಕೆ ಇವೆಲ್ಲವನ್ನೂ ಫಾಲೋ ಮಾಡೋದಿಲ್ಲ. ಆಕೆ ಅನುಸರಿಸೋದು ವಿಭಿನ್ನ ಶೈಲಿ. ಈ ಶೈಲಿಯಿಂದಾಗಿ ಆಕೆ ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿರೋದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಟಿ ಸಾಯಿಪಲ್ಲವಿ ಗ್ಲಾಮರ್ ಟ್ರೆಂಡ್ ಆಗಿರಬಹುದು, ಫ್ಯಾಷನ್ ಲುಕ್ ಆಗಿರಬಹುದು, ಆಕೆ ಇವೆಲ್ಲವನ್ನೂ ಫಾಲೋ ಮಾಡೋದಿಲ್ಲ. ಆಕೆ ಅನುಸರಿಸೋದು ವಿಭಿನ್ನ ಶೈಲಿ. ಈ ಶೈಲಿಯಿಂದಾಗಿ ಆಕೆ ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿರೋದು.
ಅಂದಹಾಗೆ ಸಾಯಿಪಲ್ಲವಿ ತನ್ನ ನಟನೆಯ ಹೊರತಾಗಿ, ಉದ್ದ ಮತ್ತು ದಪ್ಪ ಕೂದಲಿನ ಬಗ್ಗೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೊಂಟದವರೆಗೆ ಕೂದಲು ಬೆಳೆಸಿಕೊಂಡಿರುವ ಸಾಯಿಪಲ್ಲವಿ, ಇಂತಹ ವಿಷಯಗಳಿಂದಲೇ ಎಲ್ಲೆಡೆ ಮನೆಮಾತಾಗಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಕಾಡುತ್ತಿದೆ. ಎಲ್ಲಾ ವಯಸ್ಸಿನ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಕೂದಲನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ ಈ ಸಮಸ್ಯೆ ಕಾಡುವುದಿಲ್ಲ.
ಉದ್ದ ಕೂದಲು ಬೆಳೆಯಬೇಕೆಂದರೆ ವಾರಕ್ಕೆ ಮೂರು ಬಾರಿಯಾದರೂ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಇನ್ನು ನೆತ್ತಿಯ ಸುತ್ತ ರಕ್ತ ಪರಿಚಲನೆ ಸುಧಾರಿಸಲು ಮಸಾಜ್ ಉಪಕರಣಗಳ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್, ತೆಂಗಿನ ಎಣ್ಣೆಯಂತಹ ಕೂದಲಿನ ಎಣ್ಣೆಯಿಂದ ತಲೆ ಮಸಾಜ್ ಮಾಡಿ. ಇದು ಕೂದಲು ಬೆಳೆಯಲು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ವಿಧಾನವಾಗಿದೆ. ಕೂದಲಿಗೆ ಎಣ್ಣೆ ಹಚ್ಚಿದ ನಂತರ, ಸುಮಾರು 30 ನಿಮಿಷಗಳ ಕಾಲ ಬಿಟ್ಟು ನಂತರ ಶಾಂಪೂ ಸಹಾಯದಿಂದ ತಲೆಯನ್ನು ತೊಳೆಯಿರಿ.
ಇನ್ನು ನಟಿ ಸಾಯಿಪಲ್ಲವಿ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುತ್ತಾರಂತೆ. ಈ ವಿಧಾನವನ್ನು ವಾರಕ್ಕೆ 2 ಬಾರಿ ಅನುಸರಿಸುವ ಕಾರಣ, ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುತ್ತಿದೆ. ಜೊತೆಗೆ ವಾರಕ್ಕೆ ಮೂರು ಬಾರಿ ತಲೆಸ್ನಾನ ಮಾಡುತ್ತೇನೆ ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)