Ram Mandir Pran Pratishtha : ಜನವರಿ 17 ರಂದು ಗರ್ಭಗುಡಿ ಪ್ರವೇಶಿಸಲಿರುವ ಶ್ರೀ ರಾಮ! ಆ ದಿನದ ಶೃಂಗಾರ ಹೇಗಿರಲಿದೆ ಗೊತ್ತಾ ?

Ramlala in Garbhagriha:  ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಗರ್ಭಗುಡಿ ಈಗಾಗಲೇ ಸಿದ್ಧವಾಗಿದೆ. ಗರ್ಭಗುಡಿಯಲ್ಲಿ ಚಿನ್ನದ ಬಾಗಿಲುಗಳನ್ನು ಕೂಡಾ ಅಳವಡಿಸಲಾಗಿದೆ. ಅಲ್ಲದೆ ಜನವರಿ 17ರಂದು  ಶ್ರೀರಾಮಣ ಮೂರ್ತಿ ಗರ್ಭಗುಡಿ ತಲುಪಲಿದೆ ಎಂಬ ಮಾಹಿತಿ ದೇವಸ್ಥಾನ ಟ್ರಸ್ಟ್‌ನಿಂದ  ಹೊರ ಬಿದ್ದಿದೆ.  

Written by - Ranjitha R K | Last Updated : Jan 15, 2024, 12:08 PM IST
  • ಶ್ರೀ ರಾಮಣ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ಹೊರ ಬಿದ್ದಿದೆ ಮಾಹಿತಿಗಳು
  • ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಗರ್ಭಗುಡಿ ಈಗಾಗಲೇ ಸಿದ್ಧವಾಗಿದೆ.
  • ಜನವರಿ 17ರಂದು ಗರ್ಭಗುಡಿ ತಲುಪಲಿದೆ ಶ್ರೀರಾಮನ ಮೂರ್ತಿ
Ram Mandir Pran Pratishtha : ಜನವರಿ 17 ರಂದು ಗರ್ಭಗುಡಿ ಪ್ರವೇಶಿಸಲಿರುವ ಶ್ರೀ ರಾಮ! ಆ ದಿನದ ಶೃಂಗಾರ ಹೇಗಿರಲಿದೆ ಗೊತ್ತಾ ?  title=

Ramlala in Garbhagriha: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮಣ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಮಾಹಿತಿಗಳು ಹೊರಬರುತ್ತಿವೆ.ಒಂದು ವಾರದ ವಿಶೇಷ ಆಚರಣೆಯು ಜನವರಿ 16, 2024 ರಿಂದ ಪ್ರಾರಂಭವಾಗಲಿದೆ. ಜನವರಿ 22 ರಂದು ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಮುಕ್ತಾಯಗೊಳ್ಳಲಿದೆ. ಪ್ರಾಣ ಪ್ರತಿಷ್ಟೆ ಕಾರ್ಯಕ್ರಮದ ಆತಿಥ್ಯವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಗರ್ಭಗುಡಿ ಈಗಾಗಲೇ ಸಿದ್ಧವಾಗಿದೆ. ಗರ್ಭಗುಡಿಯಲ್ಲಿ ಚಿನ್ನದ ಬಾಗಿಲುಗಳನ್ನು ಕೂಡಾ ಅಳವಡಿಸಲಾಗಿದೆ. ಅಲ್ಲದೆ ಜನವರಿ 17ರಂದು  ಶ್ರೀರಾಮನ ಮೂರ್ತಿ ಗರ್ಭಗುಡಿ ತಲುಪಲಿದೆ ಎಂಬ ಮಾಹಿತಿ ದೇವಸ್ಥಾನ ಟ್ರಸ್ಟ್‌ನಿಂದ  ಹೊರ ಬಿದ್ದಿದೆ.  

ರಾಮಲಾಲ ಗರ್ಭಗುಡಿಯ ಪ್ರವೇಶ  : 
'ಪ್ರತಿಷ್ಠೆಯ ದೃಷ್ಟಿಯಿಂದ ಬೇಕಾದ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಒಂದೆಡೆ ಭವ್ಯ ಮಂದಿರ ನಿರ್ಮಾಣವಾಗಿದ್ದು, ಇನ್ನೊಂದೆಡೆ ಅಯೋಧ್ಯೆಯನ್ನು ಅಲಂಕರಿಸಲಾಗುತ್ತಿದೆ. ಭಗವಾನ್  ಶ್ರೀರಾಮ ಜನವರಿ 17 ರಂದು ತನ್ನ ದೇವಾಲಯವನ್ನು ಪ್ರವೇಶಿಸುತ್ತಾನೆ ಎಂದು  ಶ್ರೀ ರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ದೇವ ಗಿರಿ ಮಹಾರಾಜ್  ಹೇಳಿದ್ದಾರೆ. 

ಇದನ್ನೂ ಓದಿ Ram Mandir: ರಾಮ್ ಲಾಲಾ ಗರ್ಭಗುಡಿಯ ಚಿನ್ನದ ದ್ವಾರ ಸಿದ್ಧ..!

ಹೊಸ ಉಡುಪು ಪ್ರಧಾನ ಅರ್ಚಕರಿಗೆ ಹಸ್ತಾಂತರ :
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನದಂದು ಭಗವಾನ್ ರಾಮನ ವೇಷಭೂಷಣವು ತುಂಬಾ ವಿಶೇಷವಾಗಿರುತ್ತದೆ.ಈ ಕುರಿತು ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರಿಗೆ ಹೊಸ ಉಡುಗೆ ಮತ್ತು ಧ್ವಜವನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಈ ಉಡುಪನ್ನು ರಾಮ್ ದಳ ಅಯೋಧ್ಯೆಯ ಅಧ್ಯಕ್ಷ ಕಲ್ಕಿ ರಾಮ್ ದಾಸ್ ಮಹಾರಾಜ್ ಅವರು ಅರ್ಪಿಸಿದ್ದಾರೆ.ಪ್ರತಿಷ್ಠಾಪಿಸುವ ಧ್ವಜವನ್ನೂ ಲೋಕಾರ್ಪಣೆ ಮಾಡಲಾಗಿದೆ. ಮಹಾಮಸ್ತಕಾಭಿಷೇಕ ಮುಗಿದ ನಂತರ  ಶ್ರೀರಾಮನಿಗೆ ಹೊಸ ಬಟ್ಟೆ ತೊಡಿಸಲಾಗುವುದು.

ಬೆಳ್ಳಿ ಕೊಳಲು ಮತ್ತು ಶಂಖ  : 
ಇದಲ್ಲದೆ ಬಂಕೆ ಬಿಹಾರಿ ದೇವಸ್ಥಾನದಿಂದ ಶ್ರೀರಾಮನಿಗೆ ವಿಶೇಷ ವಸ್ತುಗಳನ್ನು ಕಳುಹಿಸಿಕೊಡಲಾಗಿದೆ. ಬೆಳ್ಳಿಯ ಕೊಳಲು, ಬೆಳ್ಳಿಯ ಶಂಖ ಸೇರಿದಂತೆ ಹಲವು ಸುಂದರ ಆಭರಣಗಳು ಈಗಾಗಲೇ ರಾಮಮಂದಿರ ತಲುಪಿವೆ. ಈ ಎಲ್ಲಾ ವಸ್ಗಳನ್ನೂ ಶ್ರೀರಾಮನ ಅಲಂಕಾರಕ್ಕಾಗಿ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ಗೆ ಹಸ್ತಾಂತರಿಸಲಾಗಿದೆ. ಭಗವಾನ್ ರಾಮನ ಜನ್ಮ ಭೂಮಿ, ಸೀತಾ ಮಾತೆಯ ಊರು,  ಶ್ರೀರಾಮನ ಪಾದ ಸ್ಪರ್ಶವಾದ ಪ್ರತಿಯೊಂದು ಊರು ಕೇರಿಗಳಿಂದಲೂ ಶ್ರೀರಾಮನಿಗೆ ಉಡುಗೊರೆಗಳನ್ನು ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ ಭಾರತ ಮತ್ತು ವಿದೇಶಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳು ಅಯೋಧ್ಯೆ ತಲುಪಿವೆ.  

ಇದನ್ನೂ ಓದಿ : ಅಯೋಧ್ಯೆ ರಾಮಮಂದಿರದಲ್ಲಿ ನರ್ತಿಸಲಿದ್ದಾರೆ ಖ್ಯಾತ ನಟಿ: ನೃತ್ಯ ರೂಪಕದಲ್ಲಿ ದರ್ಶನವಾಗಲಿದೆ ‘ರಾಮಾಯಣ’

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News