ದೆಹಲಿಯ ದ್ವಾರಕಾ ಮಾಡ್ ಮೆಟ್ರೋ ನಿಲ್ದಾಣದ ಬಳಿ ಶೂಟ್ ಔಟ್, ಐವರು ಆರೋಪಿಗಳ ಬಂಧನ

ದೆಹಲಿಯ ಒಂದು ಮೆಟ್ರೋ ನಿಲ್ದಾಣದ ಸಮೀಪದಲ್ಲಿ ಪೋಲೀಸರು ಮತ್ತು ದುಷ್ಕರ್ಮಿಗಳ ನಡುವೆ ಶೂಟ್ ಔಟ್ ನಡೆದಿದ್ದು. ಆ ಪ್ರಕರಣವು ನೈಋತ್ಯ ದೆಹಲಿಯ ದ್ವಾರಕಾ ಮಾಡ್ ಬಳಿ ನಡೆದಿದೆ. ದೆಹಲಿ ಪೊಲೀಸ್ ಮತ್ತು ಪಂಜಾಬ್ ಪೋಲಿಸ್ ಜಂಟಿ ತಂಡದ ಕಾರ್ಯಾಚರಣೆಯ ಸಮಯದಲ್ಲಿ 30 ಸುತ್ತುಗಳ ಗುಂಡಿನ ದಾಳಿ ಸಂಭವಿಸಿವೆ ಎಂದು ಹೇಳಲಾಗಿದೆ.  

Last Updated : Nov 21, 2017, 03:46 PM IST
ದೆಹಲಿಯ ದ್ವಾರಕಾ ಮಾಡ್ ಮೆಟ್ರೋ ನಿಲ್ದಾಣದ ಬಳಿ ಶೂಟ್ ಔಟ್, ಐವರು ಆರೋಪಿಗಳ ಬಂಧನ title=
PIC: ANI

ನವ ದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದ ಸಮೀಪ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವಿನ ಶೂಟ್ ಔಟ್ ಬಗ್ಗೆ ಸುದ್ದಿ ವರದಿಯಾಗಿದೆ. ಶೂಟ್ಔಟ್ ಸೌತ್ ವೆಸ್ಟ್ ದೆಹಲಿಯ ದ್ವಾರಕಾ ಮಡ್ ಮೆಟ್ರೊ ನಿಲ್ದಾಣದ ಬಳಿ ನಡೆದಿದೆ. ದೆಹಲಿ ಪೊಲೀಸ್ ಮತ್ತು ಪಂಜಾಬ್ ಪೋಲಿಸ್ ಜಂಟಿ ತಂಡದ ಕಾರ್ಯಾಚರಣೆಯ ಸಮಯದಲ್ಲಿ 30 ಸುತ್ತುಗಳ ಗುಂಡಿನ ಗಾಯಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಈ ಘಟನೆಯು ನೋಯ್ಡಾ-ದ್ವಾರಕಾ ಮೆಟ್ರೊ ಮಾರ್ಗದಲ್ಲಿ ಪಿಲ್ಲರ್ ಸಂಖ್ಯೆ 768 ನಲ್ಲಿ ನಡೆಯಿತು. ವಾಸ್ತವವಾಗಿ, ಕುಖ್ಯಾತ ಅಪರಾಧಿಗಳನ್ನು ಹಿಡಿಯಲು ದೆಹಲಿ ಪೊಲೀಸ್ ಸಹಾಯದಿಂದ ಪಂಜಾಬ್ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯ ಬಗ್ಗೆ ಸುಳಿವು ಪಡೆದ ದುಷ್ಕರ್ಮಿಗಳು ಪೋಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು, ನಂತರ ಪೋಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರು 12 ಪಿಸ್ತೂಲ್ ಮತ್ತು 100 ಗುಂಡುಗಳನ್ನು ವಶಪಡಿಸಿಕೊಂದಿದ್ದಾರೆಂದು ಇಲಾಖೆ ತಿಳಿಸಿದೆ.

 

ಈ ಆರೋಪಿಗಳು ಪಂಜಾಬ್ನ ಅತ್ಯಂತ ಅಪೇಕ್ಷಿತ ಅಪರಾಧಿಗಳೆಂದು ಹೇಳಲಾಗಿದ್ದು. ಈ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ಕಾರನ್ನು ಲೂಟಿ ಮಾಡಲು ಬಳಸುತ್ತಿದ್ದರು.. ಉತ್ತಮ್ ನಗರ್ ಮತ್ತು ದ್ವಾರಕಾ ನಡುವಿನ ಬಿಂದ ಪುರ್ ಪ್ರದೇಶದಲ್ಲಿ ಅವರ ಕಣ್ಮರೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೊದಲು ನಾಲ್ಕು ದರೋಡೆಕೋರರನ್ನು ಬಂಧಿಸಿದ್ದರು. ಆದರೆ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದ ಕಾರಣ ದೆಹಲಿ ಪೋಲೀಸರ ಸಹಾಯ ಪಡೆದು ಅವನನ್ನೂ ಈಗ ವಶಕ್ಕೆ ಪಡೆದುಕೊಂಡಿದ್ದಾರೆ.

Trending News