ನವದೆಹಲಿ: ತನ್ನ ನಾಯಿಯ ಮೇಲೆ ಕಲ್ಲು ಎಸೆದ ಎಂಬ ಕಾರಣಕ್ಕೆ ಮಾಲೀಕ ಆ ವ್ಯಕ್ತಿಯನ್ನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ವೆಲ್ಕಂ ಕಾಲೋನಿ ನಿವಾಸಿ ಮೆಹ್ತಾಬ್ ಎಂಬುವರು ತಮ್ಮ ಸಾಕು ನಾಯಿಗೆ ಕಲ್ಲು ಹೊಡೆದ ಆಫಾಕ್ ಮೇಲೆ ಕೋಪಗೊಂಡು ಆತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಆಫಾಕ್ ಭಾನುವಾರ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಮೇಲೆ ದಾಳಿ ನಡೆಸಲು ಬರುತ್ತಿದ್ದ ನಾಯಿ ಕಂಡು ಹೆದರಿ ತಮ್ಮ ಜೀವ ಉಳಿಸಿಕೊಳ್ಳಲು ನಾಯಿಗೆ ಕಲ್ಲು ಹೊಡೆದಿದ್ದ ಎನ್ನಲಾಗಿದೆ. ಇದನ್ನು ಕಂಡ ನಾಯಿ ಮಾಲೀಕ ಮೆಹ್ತಾಬ್ ಕೋಪಗೊಂಡು, ಬಂದೂಕು ತೆಗೆದುಕೊಂಡು ಬಂದು ಆಫಾಕ್ ಮೇಲೆ ಗುಂಡು ಹಾರಿಸಿದ್ದಾರೆ. ಪ್ರಜ್ಞೆತಪ್ಪಿ ಬಿದ್ದ ಆಫಾಕ್'ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.