Supriya-Shashi Tharoor Troll: ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು ಗೊತ್ತಾ?

ಲೋಕಸಭೆ ಕಲಾಪದ ವೇಳೆ ಸುಪ್ರಿಯಾ ಸುಳೆ ಅವರೊಂದಿಗೆ ತರೂರ್ ಸಂಭಾಷಣೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌ ಸ್ಪಷ್ಟನೆ ನೀಡಿದ್ದಾರೆ.   

Written by - Zee Kannada News Desk | Last Updated : Apr 8, 2022, 11:53 AM IST
  • ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ಶಶಿ ತರೂರ್ ಸ್ಪಷ್ಟನೆ
  • ಕಲಾಪದ ವೇಳೆ ಮಾತುಕತೆಯಲ್ಲಿ ಮಗ್ನರಾಗಿದ್ದ ಸಂಸದರು
  • ವಿಡಿಯೋ ಸೆರೆ ಹಿಡಿದು ವೈರಲ್‌ ಮಾಡಿದ ನೆಟ್ಟಿಗರು
Supriya-Shashi Tharoor Troll: ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು ಗೊತ್ತಾ? title=
shashi Tharoor

ನವದೆಹಲಿ: ಸಂಸತ್ತಿನಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರೊಂದಿಗೆ ಕಾಂಗ್ರೆಸ್‌ ಸಂಸದ ಶಶಿ ತರೂರ್ (Shashi Tharoor) ಮಾತನಾಡಿದ ವಿಡಿಯೋ ಎಲ್ಲೆಡೆ ಹಾಸ್ಯಾಸ್ಪದ ರೀತಿಯಲ್ಲಿ ವೈರಲ್‌ ಆಗಿದೆ. ಈ ಕುರಿತಾಗಿ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಪಕ್ಕಾ ಮನೆಗಳ ನಿರ್ಮಾಣ : ಪ್ರಧಾನಿ ಮೋದಿ ಟ್ವೀಟ್‌

ಲೋಕಸಭೆ ಕಲಾಪದ ವೇಳೆ ಸುಪ್ರಿಯಾ ಸುಳೆ ಅವರೊಂದಿಗೆ ತರೂರ್ ಸಂಭಾಷಣೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌, ‘ವಿಡಿಯೊ ನೋಡಿ ಆನಂದಿಸುತ್ತಿರುವ ಎಲ್ಲರಿಗೂ ಸ್ಪಷ್ಟನೆ ನೀಡಲು ಬಯಸುತ್ತೇನೆ. ಲೋಕಸಭೆಯಲ್ಲಿ ಸುಪ್ರಿಯಾ, ನನ್ನ ಬಳಿ ಪಾಲಿಸಿಗಳ ಕುರಿತಾಗಿ ಪ್ರಶ್ನೆಯೊಂದನ್ನು ಕೇಳುತ್ತಿದ್ದರು. ಏಕೆಂದರೆ ಫಾರೂಕ್ ಅಬ್ದುಲ್ಲಾ ಭಾಷಣ ಮುಗಿದ ಬಳಿಕ ಅವರ ಸರದಿ ಬರುತ್ತಿತ್ತು.  ಫಾರೂಕ್ ಅವರಿಗೆ ತೊಂದರೆಯಾಗದಂತೆ ಸುಪ್ರಿಯಾ ಮೃದುವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳಲು ನಾನು ಡೆಸ್ಕ್‌ ಮೇಲೆ ಒರಗಿದೆ’ಎಂದು ಬರೆದುಕೊಂಡಿದ್ದಾರೆ. 

ಇದನ್ನು ಓದಿ: ಮಸಾಲೆ ಪದಾರ್ಥಗಳ ಬೆಲೆಯಲ್ಲಿ ಭಾರೀ ಏರಿಕೆ ! ಮನೆ ನಡೆಸುವುದೇ ಈಗ ಸವಾಲು

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ(Farooq Abdullah)  ಅವರು ಎದ್ದು ನಿಂತು, ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಅವರ ಹಿಂದೆ ಕುಳಿತಿದ್ದ ಶಶಿ ತರೂರ್​ ಮತ್ತು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಾತುಕತೆಯಲ್ಲಿ ಮಗ್ನರಾಗಿದ್ದರು. ಈ ವಿಡಿಯೋ ಸೆರೆ ಹಿಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News