'ಸಿಡಬ್ಲ್ಯುಸಿ ಸಭೆಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಅವಹೇಳನಕಾರಿ ಹೇಳಿಕೆ , ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ

ಸಿಬಿಡಬ್ಲ್ಯೂಸಿ ಸಭೆಯಲ್ಲಿ ಸರ್ದಾರ್ ಪಟೇಲರನ್ನು  ಖಳನಾಯಕರಂತೆ ಬಿಂಬಿಸುವಾಗ, ಸೋನಿಯ ಗಾಂಧಿ  ಅದನ್ನು ತಡೆಯಲು ಪ್ರಯತ್ನಿಸಿದ್ದಾರೆಯೇ ಎಂದು ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

Written by - Ranjitha R K | Last Updated : Oct 18, 2021, 02:39 PM IST
  • ಜಮ್ಮು, ಕಾಶ್ಮೀರದಂತಹ ಸೂಕ್ಷ್ಮ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ - ಸಂಬಿತ್ ಪಾತ್ರಾ
  • ತಾರಿಖ್ ಅವರನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತಾ? - ಬಿಜೆಪಿ ಪ್ರಶ್ನೆ
  • "ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಬಯಸುತ್ತಿದೆ"
'ಸಿಡಬ್ಲ್ಯುಸಿ ಸಭೆಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಅವಹೇಳನಕಾರಿ ಹೇಳಿಕೆ , ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ title=
Sambit Patra (file photo)

ನವದೆಹಲಿ : ಕಾಂಗ್ರೆಸ್ ವಿರುದ್ದ  ಬಿಜೆಪಿ (BJP)  ಬಹು ದೊಡ್ಡ ಆರೋಪ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra),  ವಿರೋಧ ಪಕ್ಷದವರು ಗೊಂದಲದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ವಿಚಾರದಲ್ಲಿ ಕಾಂಗ್ರೆಸ್ (Congress) ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸಭೆಯಲ್ಲಿ, ತಾರೀಕ್ ಹಮೀದ್ ಕಾರಾ ಅವರು ನೆಹರು ಅವರು ಜಮ್ಮು ಮತ್ತು ಕಾಶ್ಮೀರವನ್ನು (Jammu-Kashmir) ಭಾರತದೊಂದಿಗೆ ಸೇರಿಸಿದ್ದಾರೆ, ಸರ್ದಾರ್ ಪಟೇಲ್ ಜಿನ್ನಾ ಜೊತೆಗೂಡಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಪ್ರಯತ್ನಿಸಿದ್ದರು ಎಂದು ಹೇಳಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಇಂದು ಭಾರತದ ಜೊತೆಗಿದ್ದರೆ ಅದಕ್ಕೆ ಕೇವಲ ನೆಹರು ಕಾರಣ ಎಂದು ಸಭೆಯಲ್ಲಿ ಹೇಳಲಾಗಿತ್ತು. 

ತಾರಿಖ್ ಅವರನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತಾ?" 
ಸಿಬಿಡಬ್ಲ್ಯೂಸಿ ಸಭೆಯಲ್ಲಿ ಸರ್ದಾರ್ ಪಟೇಲರನ್ನು (Sardar patel) ಖಳನಾಯಕರಂತೆ ಬಿಂಬಿಸುವಾಗ, ಸೋನಿಯ ಗಾಂಧಿ  (Sonia Gandhi) ಅದನ್ನು ತಡೆಯಲು ಪ್ರಯತ್ನಿಸಿದ್ದಾರೆಯೇ ಎಂದು ಸಂಬಿತ್ ಪಾತ್ರ (Sambit Patra) ಪ್ರಶ್ನಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ಒಂದು ಕುಟುಂಬ ಎಲ್ಲವನ್ನೂ ಮಾಡಿದೆ ಮತ್ತು ಉಳಿದವರು ಏನೂ ಮಾಡಲಿಲ್ಲ ಎನ್ನುವ ಭಾವ ಇದೆ. ಜಿನ್ನಾ ಜೊತೆ ಸರ್ದಾರ್ ಪಟೇಲರನ್ನು  ಸೇರಿಸುವ ಮೂಲಕ ಕಾಂಗ್ರೆಸ್ (Congress) ದೊಡ್ಡ ಪಾಪ ಮಾಡಿದೆ ಎಂದವರು ಹೇಳಿದ್ದಾರೆ. 

ಇದನ್ನೂ ಓದಿ :  CBSE Class 10, 12 Datesheet 2022: ಇಂದು ಸಿಬಿಎಸ್‌ಇ 10, 12ನೇ ತರಗತಿ ಡೇಟ್‌ಶೀಟ್ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ

ತಾರಿಖ್ ಹಮೀದ್ ಕಾರಾ ಅವರನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿಯಿಂದ (CWC) ತೆಗೆದುಹಾಕಲಾಗುತ್ತದೆಯೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ. ಒಂದೆಡೆ ಬಿಜೆಪಿ (BJP) ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಿದ್ದರೆ, ಕಾಂಗ್ರೆಸ್ ಗೊಂದಲದ ರಾಜಕೀಯ ಮಾಡುತ್ತದೆ ಎಂದು ಹೇಳಿದ್ದಾರೆ.  ಸರ್ದಾರ್ ಪಟೇಲ್ ಬಗ್ಗೆ ಹೇಳಿದಾಗ, ಕೆಟ್ಟದಾಗಿ ಮಾತನಾಡಿದಾಗ ಸೋನಿಯಾ ಮತ್ತು ರಾಹುಲ್ (Rahul Gandhi) ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.  ಇನ್ನು ಕಾಂಗ್ರೆಸ್ ಏನು ಹೇಳಲು ಬಯಸುತ್ತದೆ? ವಂಶ ಪಾರಂಪರ್ಯವನ್ನು ಮುಂದುವರಿಸುವುದಕ್ಕಾಗಿ,  ಬೋಸ್ ಮತ್ತು ಪಟೇಲ್ ಬಗ್ಗೆ ಏನಾದರೂ ಹೇಳಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ :  Viral Video: ಮಳೆಯ ಹೊಡೆತಕ್ಕೆ ನೋಡ ನೋಡುತ್ತಿದ್ದಂತೆಯೇ ಕುಸಿದುಬಿದ್ದ ಮನೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News