Galwan Valley ಹಿಂಸಾಚಾರದಲ್ಲಿ 45 ಚೀನಾದ ಸೈನಿಕರ ಸಾವು - ರಷ್ಯಾದ ಸುದ್ದಿ ಸಂಸ್ಥೆ ವರದಿ

ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 45 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ (TASS) ಹೇಳಿದೆ.

Written by - Zee Kannada News Desk | Last Updated : Feb 11, 2021, 03:55 PM IST
  • ಜೂನ್ 15 ರಂದು ಗಾಲ್ವಾನ್ ಕಣಿವೆ (Galwan Valley)ಯಲ್ಲಿ ನಡೆದ ಹಿಂಸಾಚಾರ
  • ಗಾಲ್ವಾನ್ ಕಣಿವೆ (Galwan Valley)ಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 45 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಹೇಳಿಕೆ
  • ಆದಾಗ್ಯೂ ಚೀನಾ ತನ್ನ ಸೈನಿಕರ ಸಾವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ ಎಂಬುದು ಗಮನಾರ್ಹ
Galwan Valley ಹಿಂಸಾಚಾರದಲ್ಲಿ 45 ಚೀನಾದ ಸೈನಿಕರ ಸಾವು - ರಷ್ಯಾದ ಸುದ್ದಿ ಸಂಸ್ಥೆ ವರದಿ title=
Galwan Valley violence

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 45 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ (TASS) ವರದಿ ಮಾಡಿದೆ.

ವಾಸ್ತವವಾಗಿ ಜೂನ್ 15 ರಂದು ಗಾಲ್ವಾನ್ ಕಣಿವೆ (Galwan Valley)ಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 45 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಹೇಳಿದೆ. ಅದೇ ಸಮಯದಲ್ಲಿ, ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದಾರೆ. ಆದಾಗ್ಯೂ ಚೀನಾ ತನ್ನ ಸೈನಿಕರ ಸಾವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ಓದಿ -ಚೀನಾದ ವಿಸ್ತರಣಾವಾದಿ ನೀತಿ ಮಾನಸಿಕ ಅಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ-ಪ್ರಧಾನಿ ಮೋದಿ

ಭಾರತೀಯ ಮತ್ತು ಚೀನಾದ (India China) ಸೈನಿಕರು ಪಾಂಗೊಂಗ್ ತ್ಸೊ ಸರೋವರಕ್ಕೆ ಮರಳುವ ಬಗ್ಗೆ ಟಾಸ್ ವರದಿ ಮಾಡಿದೆ. ವಾಸ್ತವವಾಗಿ ಕಮಾಂಡರ್ ಮಟ್ಟದ 9 ನೇ ಸುತ್ತಿನ ಮಾತುಕತೆಯಲ್ಲಿ, ಸೈನ್ಯವನ್ನು ಹಿಂತೆಗೆದುಕೊಳ್ಳುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದವಾಗಿದೆ. ಅದರ ನಂತರ ಚೀನಾ ಮತ್ತು ಭಾರತೀಯ ಸೇನಾ ಸೈನಿಕರು ಈಗ ಹಿಂದೆ ಸರಿಯುತ್ತಿದ್ದಾರೆ. ತನ್ನ ಸೈನಿಕರನ್ನು ಹಿಂತೆಗೆದುಕೊಳ್ಳುವುದನ್ನು ಚೀನಾದ ರಕ್ಷಣಾ ಸಚಿವಾಲಯವೂ ಖಚಿತಪಡಿಸಿದೆ. 

ಇದನ್ನೂ ಓದಿ - India-China Standoff : ಇನ್ಮುಂದೆ ಚೀನಾದ ಯಾವುದೇ ಕುತಂತ್ರ ಕೆಲಸ ಮಾಡಲ್ಲ!

ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೂ ಕೂಡ ಇಂದು ಸದನದಲ್ಲಿ ಎಲ್‌ಎಸಿಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಭಾರತದ ಒಂದು ಇಂಚು ಭೂಮಿಯನ್ನು ಸಹ ಯಾರಿಗೂ ಮುಟ್ಟಲು ಸಹ ಬಿಡುವುದಿಲ್ಲ ಎಂಬುದು ನಮ್ಮ ಕಾರ್ಯತಂತ್ರವಾಗಿದೆ ಎಂದು ಹೇಳಿದರು. ನಮ್ಮ ಸಂಕಲ್ಪದ ಫಲಿತಾಂಶವೆಂದರೆ ನಾವು ಒಪ್ಪಂದದ ಸ್ಥಿತಿಯನ್ನು ತಲುಪಲು ಸಾಧ್ಯವಾಯಿತು. ಚೀನಾದ ಸೈನ್ಯವು ತನ್ನ ಸೈನ್ಯವನ್ನು ವಿವಾದಿತ ಪ್ರದೇಶದಿಂದ ಹಿಂತೆಗೆದುಕೊಳ್ಳುತ್ತಿದೆ ಎಂದವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News