Exit Polls ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆ!

ಇಂದು ಷೇರು ಮಾರುಕಟ್ಟೆ​​ ವಹಿವಾಟು ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯ 73 ಪೈಸೆ ಏರಿಕೆ ಕಂಡಿದ್ದು, 1 ಡಾಲರ್​​ ಎದುರು ರೂಪಾಯಿ ಮೌಲ್ಯ 69.43 ಕ್ಕೆ ಏರಿಕೆಯಾಗಿದೆ.  

Last Updated : May 20, 2019, 11:29 AM IST
Exit Polls ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆ! title=

ನವದೆಹಲಿ: ಲೋಕಸಭಾ ಚುನಾವಣೆಯ ಎಲ್ಲಾ ಹಂತದ ಮತದಾನ ಪೂರ್ಣಗೊಂಡು ಎಕ್ಸಿಟ್ ಪೋಲ್ ಅಂಕಿಅಂಶಗಳು ಪ್ರಕಟವಾದ ಬೆನ್ನಲ್ಲೇ ಸೋಮವಾರ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿದೆ.

ಸೋಮವಾರ ಬೆಳಗ್ಗೆ ರೂಪಾಯಿ ಮೌಲ್ಯ 79 ಪೈಸೆ ಏರಿಕೆ ಕಂಡು ಬಂದಿದ್ದು, ಡಾಲರ್​ ಎದುರು ರೂಪಾಯಿ ಮೌಲ್ಯ 69.44 ಗೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಹಿಂದಿನ ಮೌಲ್ಯಕ್ಕಿಂತ ರೂಪಾಯಿ 86 ಪೈಸೆ ಏರಿಕೆಯಾಗಿ 69.36 ರೂಪಾಯಿಗಳಿಗೆ ತಲುಪಿತ್ತು. ಹಿಂದಿನ ಅವಧಿಯಲ್ಲಿ, ಪ್ರತಿ ಡಾಲರ್ ಎದುರು ರುಪಾಯಿ ಮೌಲ್ಯ 70.22ಕ್ಕೆ ಅಂತ್ಯವಾಗಿತ್ತು.
 

Trending News