ನವದೆಹಲಿ: ದೇವರು ಮತ್ತು ಧರ್ಮದ ವಿಚಾರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಈ ಹಿಂದೆ ಸಾಕಷ್ಟು ಹೇಳಿಕೆ ನೀಡಿದ್ದಾರೆ. ಸಂತ ಈಶ್ವರ ಸಮ್ಮಾನ್ ಸಮಾರೋಹ್ 2021(Sant Ishwar Samman Samaroh 2021)ರಲ್ಲಿ ಭಾಷಣಕಾರರಾಗಿ ಆಗಮಿಸಿದ್ದ ಭಾಗವತ್, ‘ನಾವು ಭಗವಾನ್ ಜೈ ಶ್ರೀ ರಾಮ್(Jai Shri Ram) ಎಂಬ ಘೋಷಣೆಯನ್ನು ಜೋರಾಗಿ ಜಪಿಸುತ್ತೇವೆ. ಆದರೆ ನಾವು ಕೂಡ ಅವರಂತೆ ಆಗಬೇಕು. ನಿಜ ಹೇಳಬೇಕೆಂದರೆ ಶ್ರೀರಾಮ ತೋರಿದ ಮಾರ್ಗದಲ್ಲಿ ನಾವೂ ಸಾಗಬೇಕಾಗಿದೆ’ ಎಂದು ಸಲಹೆ ನೀಡಿದ್ದಾರೆ.
ಭಾಗವತ್ ನೀಡಿದ್ದಾರೆ ದೊಡ್ಡ ಸಲಹೆ
ತಮ್ಮ ಭಾಷಣದಲ್ಲಿ ಸಂಘದ ಮುಖ್ಯಸ್ಥ ಭಾಗವತ್(Mohan Bhagwat), ‘ನಾವು ಜೈ ಶ್ರೀರಾಮ್ ಘೋಷಣೆಯನ್ನು ಜೋರಾಗಿ ಜಪಿಸುತ್ತೇವೆ ಮತ್ತು ಜಪಿಸಬೇಕು. ಆದರೆ ನಾವು ಕೂಡ ಅವರಂತೆ ಇರಬೇಕು. ಶ್ರೀರಾಮ ದೇವರೆಂದು ನಾವು ಭಾವಿಸುತ್ತೇವೆ. ಭರತನಂತಹ ಸಹೋದರನನ್ನು ದೇವರು ಮಾತ್ರ ಪ್ರೀತಿಸಬಲ್ಲನು, ನಮಗೆ ಸಾಧ್ಯವಿಲ್ಲ. ಶ್ರೀಸಾಮಾನ್ಯನ ಯೋಚನೆಯೇ ಹಾಗೆ. ಆದುದರಿಂದಲೇ ಅವರು ಆ ಮಾರ್ಗವನ್ನು ಅನುಸರಿಸಲು ಸಾಧ್ಯವಾಯಿತು. ಸ್ವಹಿತಾಸಕ್ತಿ ಬಿಟ್ಟು ಜನರಿಗೆ ಒಳ್ಳೆಯದನ್ನು ಮಾಡುವುದು ಕಷ್ಟ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: "ಪೌರತ್ವ ಕಾಯ್ದೆ ರದ್ದುಗೊಳಿಸಿ ಇಲ್ಲವೇ ಇನ್ನೊಮ್ಮೆ ಶಾಹಿನ್ ಬಾಗ್ ತರಹದ ಹೋರಾಟ ಎದುರಿಸಿ"
ಸ್ವಹಿತಾಸಕ್ತಿಯನ್ನು ಬಿಟ್ಟು ಜನರಿಗೆ ಒಳಿತನ್ನು ಮಾಡುವುದು ಯಾವಾಗಲೂ ಕಷ್ಟ ಎಂದು ಭಾಗವತ್(RSS Chief Mohan Bhagwat) ಹೇಳಿದರು. ಆ ದಾರಿ ತೋರಿದ ಮಹಾಪುರುಷರನ್ನು ನಾವು ಲೆಕ್ಕಿಸುವುದಿಲ್ಲ. ಎಲ್ಲಾ ದೇಶಗಳಲ್ಲಿ ಒಟ್ಟಾಗಿ ಅನೇಕ ಮಹಾನ್ ಪುರುಷರು ಇದರ ಬಗ್ಗೆ ಮಾತನಾಡುತ್ತಾರೆ. ಅವರು ಕಳೆದ 200 ವರ್ಷಗಳಲ್ಲಿ ಇಲ್ಲಿದ್ದಾರೆ. ಪ್ರತಿಯೊಬ್ಬರ ಜೀವನವು ನಮಗೆ ಸಮಗ್ರ ಜೀವನಕ್ಕೆ ದಾರಿಯನ್ನು ತಿಳಿಸುತ್ತದೆ. ಆದರೆ ಆ ದಾರಿಯಲ್ಲಿ ನಮಗೆ ಕಲ್ಲು-ಮುಳ್ಳು ಕಾಣಿಸುತ್ತವೆ. ಆಗ ನಮ್ಮಂಥವರಿಗೆ ಧೈರ್ಯವೇ ಬರುವುದಿಲ್ಲ. ಹೀಗಾಗಿ ನಮಗೆ ಬದುಕು ಮತ್ತಷ್ಟು ಕಠಿಣವೆನಿಸುತ್ತದೆ.
‘ನಾವು ನಮ್ಮ ಹೃದಯದಿಂದ ಕೆಲಸ ಮಾಡಿದರೆ ದೇಶದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ಎಲ್ಲರನ್ನೂ ಸಹೋದರರಂತೆ ಕಾಣಬೇಕು. ಕೇವಲ ಘೋಷಣೆಗಳಿಂದ ಸೇವೆ, ಜನಕಲ್ಯಾಣ ಕಾರ್ಯ ನಡೆಯುತ್ತಿಲ್ಲ. ಇದಕ್ಕಾಗಿ ಸಂಪೂರ್ಣ ಜಾಗೃತರಾಗಿ ನಮ್ಮ ನೆಲದಲ್ಲಿ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು
ಸೇವಾ ಕಾರ್ಯಗಳಿಂದ ಮಹತ್ವದ ಕೊಡುಗೆ
ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಭಾಗವತ್, 'ದೇಶದ ಅಭಿವೃದ್ಧಿಯಲ್ಲಿ ಸೇವಾ ಕಾರ್ಯಗಳು ಮಹತ್ವದ ಕೊಡುಗೆಯನ್ನು ಹೊಂದಿವೆ. ಕಳೆದ 75 ವರ್ಷಗಳಲ್ಲಿ ನಾವು ಆ ನಿಟ್ಟಿನಲ್ಲಿ ಮುನ್ನಡೆದಿಲ್ಲ, ಒಂದು ವೇಳೆ ಮುನ್ನಡೆದಿದ್ದರೆ ದೇಶದ ಅಭಿವೃದ್ಧಿಯಾಗುತ್ತಿತ್ತು. ನಾವು ಚಲಿಸಬೇಕಾದ ವೇಗದಲ್ಲಿ ಚಲಿಸಲಿಲ್ಲ. ನಮ್ಮ ಅಹಂಕಾರವನ್ನು ಬದಿಗಿಟ್ಟು ಕೆಲಸ ಮಾಡಿದರೆ ನಾವು ಈ ಗುರಿಯನ್ನು ಸಾಧಿಸಬಹುದು’ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.