ಈಗ ದೇಶದಲ್ಲಿ ತಲೆಎತ್ತಲಿದೆ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಆಭರಣ ಶೋ ರೂಂ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ( ಆರ್‌ಐಎಲ್‌) ಟಿಫಾನಿ & ಕಂಪನಿ ಬ್ರಾಂಡ್ ಅನ್ನು ಭಾರತಕ್ಕೆ ತರಲು ಹೊರಟಿದೆ. ಆರ್‌ಐಎಲ್ ಘಟಕ ರಿಲಯನ್ಸ್ ಬ್ರಾಂಡ್ಸ್ ಮತ್ತು ಟಿಫಾನಿ ಜಂಟಿ ಉದ್ಯಮವು  ದೇಶದಲ್ಲಿ ಅಮೆರಿಕದ ಐಷಾರಾಮಿ ಆಭರಣ ಮಳಿಗೆಗಳನ್ನು ತೆರೆಯಲು ಘೋಷಿಸಿದೆ.

Last Updated : Aug 9, 2019, 10:38 AM IST
ಈಗ ದೇಶದಲ್ಲಿ ತಲೆಎತ್ತಲಿದೆ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಆಭರಣ ಶೋ ರೂಂ title=

ಮುಂಬೈ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ( ಆರ್‌ಐಎಲ್‌) ಟಿಫಾನಿ & ಕಂಪನಿ ಬ್ರಾಂಡ್ ಅನ್ನು ಭಾರತಕ್ಕೆ ತರಲು ಹೊರಟಿದೆ. ಆರ್‌ಐಎಲ್ ಘಟಕ ರಿಲಯನ್ಸ್ ಬ್ರಾಂಡ್ಸ್ ಮತ್ತು ಟಿಫಾನಿ(Tiffany) ಜಂಟಿ ಉದ್ಯಮವು  ದೇಶದಲ್ಲಿ ಅಮೆರಿಕದ ಐಷಾರಾಮಿ ಆಭರಣ ಮಳಿಗೆಗಳನ್ನು ತೆರೆಯಲು ಘೋಷಿಸಿದೆ.

2019-20ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೆಹಲಿಯಲ್ಲಿ ಮಳಿಗೆಗಳನ್ನು ತೆರೆಯಲು ಬಯಸಿದೆ ಎಂದು ಟಿಫಾನಿ ಹೇಳಿಕೆಯಲ್ಲಿ ತಿಳಿಸಿದರೆ, ಮುಂಬೈಯಲ್ಲಿ ಮುಂದಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಈ ಆಭರಣ ಅಂಗಡಿ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಟಿಫಾನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಮಾರಾಟ) ಫಿಲಿಪ್ ಗಾಲ್ಟಿ, "ವಿಶ್ವದ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ಜಾಗತಿಕ ಐಷಾರಾಮಿ ಆಭರಣಕಾರರಾಗಿರುವುದರಿಂದ, ಭಾರತೀಯ ವಾಣಿಜ್ಯ ಕೇಂದ್ರವು ಬೆಳೆಯುತ್ತಿರುವ ಐಷಾರಾಮಿ ಗ್ರಾಹಕರಿಗೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ" ಎಂದು ಹೇಳಿದರು.

ರಿಲಯನ್ಸ್ ಬ್ರಾಂಡ್ಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಮೆಹ್ತಾ ಮಾತನಾಡಿ, 'ಟಿಫಾನಿಗೆ ಭಾರತದಲ್ಲಿ ಯಾವುದೇ ಪರಿಚಯದ ಅಗತ್ಯವಿಲ್ಲ. ಇದು ಅಪ್ರತಿಮವಾಗಿದೆ. ಟಿಫಾನಿಯ ಪ್ರಸಿದ್ಧ ಆಭರಣ ಸಂಗ್ರಹಗಳು ಮತ್ತು ಅಸಾಧಾರಣ ಸಂಗ್ರಹಗಳನ್ನು ಭಾರತಕ್ಕೆ ತರಲು ನಾವು ಬದ್ಧರಾಗಿದ್ದೇವೆ. ಇದಕ್ಕೂ ಮೊದಲು, ರಿಲಯನ್ಸ್ ಬ್ರಾಂಡ್ಸ್ ಅಪ್ರತಿಮ ಬ್ರಿಟಿಷ್ ಆಟಿಕೆ ಚಿಲ್ಲರೆ ವ್ಯಾಪಾರಿ ಹೆಮ್ಲೆಜ್ ನ್ನು ಜುಲೈನಲ್ಲಿ ಸ್ವಾಧೀನಪಡಿಸಿಕೊಂಡಿತು. 6.8 ಮಿಲಿಯನ್ ಪೌಂಡ್‌ಗಳಿಗೆ ಈ ಒಪ್ಪಂದವನ್ನು ಮಾಡಲಾಗಿದೆ.
 

Trending News