BIG DEAL:'Netmeds'ಷೇರುಗಳ ಬಹುಭಾಗವನ್ನು ಖರೀದಿಸಿದ Reliance Retail

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಡಿಜಿಟಲ್ ಫಾರ್ಮಾ ಮಾರುಕಟ್ಟೆಯ ತಾಣ ನೆಟ್‌ಮೆಡ್ಸ್‌ನ ಬಹುಪಾಲನ್ನುಖರೀದಿಸಿದೆ.

Last Updated : Aug 19, 2020, 10:28 AM IST
BIG DEAL:'Netmeds'ಷೇರುಗಳ ಬಹುಭಾಗವನ್ನು ಖರೀದಿಸಿದ Reliance Retail  title=

ನವದೆಹಲಿ: ಮುಖೇಶ್ ಅಂಬಾನಿ(Mukesh Ambani) ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಡೀಲ್ ನಡೆಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಅಂಗಸಂಸ್ಥೆಯಾಗಿರುವ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್), ಡಿಜಿಟಲ್ ಫಾರ್ಮಾ ಮಾರ್ಕೆಟ್ ಪ್ಲೇಸ್ ನೆಟ್‌ಮೆಡ್‌ ನ  ಬಹುತೇಕ  ಪಾಲನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದೆ. ವಿಟಾಲಿಕ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳನ್ನು ಒಟ್ಟಾಗಿ ನೆಟ್‌ಮೆಡ್ಸ್ ಎಂದು ಕರೆಯಲಾಗುತ್ತದೆ. ಮಾಹಿತಿಯ ಪ್ರಕಾರ ರಿಲಯನ್ಸ್ ಈ ಕಂಪನಿಯ ಬಹುತೇಕ ಪಾಲನ್ನು ಸುಮಾರು 620 ಕೋಟಿ ರೂ.ಗೆ ಖರೀದಿಸಿದೆ.

ರಿಲಯನ್ಸ್ ರಿಟೇಲ್ ವಿಟಾಲಿಕ್ ಹೆಲ್ತ್ ಪ್ರೈವೇಟ್ ಲಿಮಿಟೆಡ್‌ನ ಈಕ್ವಿಟಿ ಷೇರು ಬಂಡವಾಳದಲ್ಲಿ ಶೇ .60 ರಷ್ಟು ಹಿಡಿತವನ್ನು ಸಾಧಿಸಿದೆ ಹಾಗೂ ಅದರ ಅಂಗಸಂಸ್ಥೆಗಳಾದ ತ್ರಿಶರಾ ಹೆಲ್ತ್ ಪ್ರೈವೇಟ್ ಲಿಮಿಟೆಡ್, ನೆಟ್‌ಮೆಡ್ಸ್ ಮತ್ತು ದಧಾ ಫಾರ್ಮಾಗಳ ಶೇಕಡಾ 100 ರಷ್ಟು ಡೈರೆಕ್ಟ್ ಷೇರು ಮಾಲೀಕತ್ವವನ್ನು ಪಡೆದುಕೊಂಡಿದೆ.

ನೆಟ್ ಮೆಡ್ಸ್ ನ ಕಿರುತ್ ಮಾಹಿತಿ ಇಲ್ಲಿದೆ
ವಿಟಾಲಿಕ್ ಮತ್ತು ಅದರ ಅಂಗಸಂಸ್ಥೆಗಳು ಫಾರ್ಮಾ ಡಿಸ್ಟ್ರಿಬ್ಯೂಶನ್,ಸೇಲ್ಸ್ ಹಾಗೂ ಬಿಸಿನೆಸ್ ಸಪೋರ್ಟ್ ವ್ಯವಹಾರ ನಡೆಸುತ್ತದೆ. ಇದು 2015 ರಿಂದ ಮಾರುಕಟ್ಟೆಯಲ್ಲಿ ಕಾರ್ಯನಿರತವಾಗಿದೆ. ಇದರ ಅಂಗಸಂಸ್ಥೆಯು ಆನ್‌ಲೈನ್ ಫಾರ್ಮಸಿ ಪ್ಲಾಟ್‌ಫಾರ್ಮ್ ನೆಟ್‌ಮೆಡ್ಸ್ ಅನ್ನು ನಡೆಸುತ್ತದೆ. ನೆಟ್ ಮೆಡ್ಸ್ ಗ್ರಾಹಕರನ್ನು ಔಷಧಿ ವ್ಯಾಪಾರಿಗಳ ಜೊತೆಗೆ ಜೋಡಿಸುತ್ತದೆ. ಇದಲ್ಲದೆ, ಕಂಪನಿ ಔಷಧಿಗಳ ಡೋರ್ ಸ್ಟೆಪ್ ಡಿಲೆವರಿ ಕೂಡ ನಡೆಸುತ್ತದೆ.

ಇಷಾ ಅಂಬಾನಿ ಹೇಳಿದ್ದೇನು?
ಈ ಹೂಡಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ RRVL ನಿರ್ದೇಶಕಿ ಇಶಾ ಅಂಬಾನಿ, ಭಾರತದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಪ್ರವೇಶವನ್ನು ಒದಗಿಸುವ ನಮ್ಮ ಬದ್ಧತೆಯೊಂದಿಗೆ ಈ ಒಪ್ಪಂದವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಕೈಗೆಟುಕುವ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ನೆಟ್‌ಮೆಡ್ಸ್ ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಗ್ರಾಹಕರ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಗ್ರಾಹಕರ ದೈನಂದಿನ ಅಗತ್ಯಗಳನ್ನು ಸಾಧ್ಯವಾದಷ್ಟು ಬೇಗ ಪೂರೈಸಲು ಅವಕಾಶ ಕಲ್ಪಿಸಲಿದೆ ಎಂದು ಹೇಳಿದ್ದಾರೆ.

ನೆಟ್‌ಮೆಡ್ಸ್ ಅತಿ ಕಡಿಮೆ ಸಮಯದಲ್ಲಿ ದೇಶಾದ್ಯಂತ ತನ್ನ ಆನ್‌ಲೈನ್ ವ್ಯವಹಾರವನ್ನು ವಿಸ್ತರಿಸಿದೆ ಮತ್ತು ಇದರಿಂದ ನಾವು ತುಂಬಾ ಪ್ರಭಾವಿತರಾಗಿದ್ದೇವೆ. ನಮ್ಮ ಹೂಡಿಕೆ ಮತ್ತು ಸಹಭಾಗಿತ್ವದಿಂದ ನೆಟ್ ಮೆಡ್ಸ್ ನ  ವ್ಯವಹಾರ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಇಷಾ ಹೇಳಿದ್ದಾರೆ.

ನೆಟ್ ಮೆಡ್ಸ್ ಹೇಳಿದ್ದೇನು?
ಡೀಲ್ ಕುರಿತು ಹೇಳಿಕೆ ನೀಡಿರುವ ನೆಟ್ ಮೆಡ್ಸ್ ಸಂಸ್ಥಾಪಕ ಹಾಗೂ CEO ಪ್ರದೀಪ್ ದಾಧಾ, ರಿಲಯನ್ಸ್‌ನ ಡಿಜಿಟಲ್, ಚಿಲ್ಲರೆ ಮತ್ತು ಟೆಕ್ ಪ್ಲಾಟ್‌ಫಾರ್ಮ್‌ಗಳ ಸಂಯೋಜಿತ ಶಕ್ತಿಯೊಂದಿಗೆ, ನಮ್ಮ ವ್ಯವಸಾಯವನ್ನು ಗ್ರಾಹಕರ ಮಧ್ಯೆ ಬಲಪಡಿಸಲು ನಮಗೆ ಮತ್ತಷ್ಟು ಸಾಧ್ಯವಾಗುತ್ತದೆ. ಈ ಒಪ್ಪಂದದ ನಂತರ ನಾವು ನಮ್ಮ ಸೇವೆಯನ್ನು ಇನ್ನಷ್ಟು ಸುಧಾರಿಸುತ್ತೇವೆ ಎಂದು ಹೇಳಿದ್ದಾರೆ.

Trending News