ರಾಷ್ಟ್ರಪತಿ ರಾಮನಾಥ್ ಕೊವಿಂದರಿಂದ ಗಣರಾಜ್ಯೋತ್ಸವದ ಭಾಷಣ

     

Last Updated : Jan 25, 2018, 08:37 PM IST
ರಾಷ್ಟ್ರಪತಿ ರಾಮನಾಥ್ ಕೊವಿಂದರಿಂದ ಗಣರಾಜ್ಯೋತ್ಸವದ ಭಾಷಣ  title=

ನವದೆಹಲಿ: ಭಾರತವು 69ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ,ಈ ಸಂದರ್ಭದಲ್ಲಿ  ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟಪತಿ ರಾಮನಾಥ್ ಕೊವಿಂದ್  ಈ ದಿನವನ್ನು ಸ್ವಾತಂತ್ರ ಹೋರಾಟಗಾರರಿಗೆ ಅರ್ಪಿಸಿದರು.

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಹತ್ತು ಆಸಿಯಾನ್ ರಾಷ್ಟ್ರಗಳ ಪ್ರತಿನಿಧಿಗಳನ್ನು ರಾಷ್ಟ್ರಪತಿ ಭವನಕ್ಕೆ ಬರಮಾಡಿಕೊಂಡ ಅವರು ಅವರಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು,ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡುತ್ತಾ ಅಸಿಯಾನ್ ಒಕ್ಕೂಟದ ಜೊತೆಗೆ ಭಾರತವು 1992 ರಿಂದಲೂ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ತಮ್ಮ ಗಣರಾಜ್ಯೋತ್ಸವದ ಭಾಷಣದಲ್ಲಿ ಈ ದೇಶದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವೈಧ್ಯರು,ರೈತರು ದಾದಿಯರು,ವಿಜ್ಞಾನಿಗಳು, ಇಂಜನಿಯರ್ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ದೇಶದ ಸ್ವಾತಂತ್ರ್ಯ ಹೋರಾಟಗಾರ ಕುರಿತಾಗಿ ಮಾತನಾಡುತ್ತಾ, ಅವರು ಕೇವಲ ದೇಶದ ಸ್ವಾತಂತ್ರಕ್ಕಾಗಿ ಮಾತ್ರ ದುಡಿಯಲಿಲ್ಲ ಬದಲಾಗಿ ಈ ದೇಶದ ಸಾಮಾಜಿಕ ಬದಲಾವಣೆಗೂ ಸಹಿತ ಹೋರಾಟ ಮಾಡಿದರು ಎಂದು ಅವರನ್ನು ಸ್ಮರಿಸಿದರು. ಆದ್ದರಿಂದ ಅವರು ಈ ದೇಶಕ್ಕೆ ಹಾಕಿ ಕೊಟ್ಟ ಭದ್ರ ಬುನಾದಿ ಇವತ್ತಿಗೂ ಕೂಡಾ ದೇಶಕ್ಕೆ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಯುವಕರು ಈ ದೇಶದ ಭವಿಷ್ಯವಾಗಿದ್ದಾರೆ. ಆದ್ದರಿಂದ ಯುವಕರ ಕೌಶಲ್ಯ ವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ, ಆದ್ದರಿಂದ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅವರು ಸಲಹೆ ನೀಡಿದರು. ದೇಶದಲ್ಲಿರುವ ಅಪೌಷ್ಟಿಕೆಯ ನಿರ್ಮೂಲನೆಗೆ ಇನ್ನು ಹೆಚ್ಚಿನ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

Trending News